• 22 ನವೆಂಬರ್ 2024

ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್

 ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್
Digiqole Ad

ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್

ಇವತ್ತಿನ ದಿನಗಳಲ್ಲಿ ಹಣಕಾಸಿನ ವ್ಯವಹಾರ ಮಾಡಲು ನಾವು ಬ್ಯಾಂಕ್ ಮೇಲೆ ಡಿಪೆಂಡ್ ಆಗಿದ್ದೇವೆ, ಅಂದ್ರೆ ಬ್ಯಾಂಕ್ನಲ್ಲಿ ಒಂದು ಖಾತೆ ಇದ್ರೆ ಸಾಕು ನಾವು ಇನ್ನೊಬ್ಬರ ಖಾತೆಗೆ ಹಣ ಹಾಕುವುದಿರಬಹುದು ಅಥವಾ ನಾವು ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡುವುದಿರಬಹುದು ಎಲ್ಲದಕ್ಕೂ ಕೂಡ ಬ್ಯಾಂಕ್ ನಲ್ಲಿ ನಮ್ಮ ಹೆಸರಿನಲ್ಲಿ ಒಂದು ಖಾತೆ ಹೊಂದಿರುವುದು ಬಹಳ ಅವಶ್ಯಕ.

ಈ ಸುದ್ದಿ ಓದಿದ್ದೀರಾ?:ವಿವಿಧ ದೇಶಗಳಿಂದ ಸಂತಾಪ : ರೈಲು ಅಪಘಾತ

ಉಳಿತಾಯ ಖಾತೆ, ಚಾಲ್ತಿ ಖಾತೆ, ಸ್ಯಾಲರಿ ಖಾತೆ, ಜಂಟಿ ಖಾತೆ ಹೀಗೆ ಹೀಗೆ ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯ ಅವಶ್ಯಕತೆಗಳಿಗೆ ಬೇರೆ ಬೇರೆ ರೀತಿಯ ಖಾತೆಯನ್ನು ತೆರೆಯಲು ಅವಕಾಶ ಇದೆ.ಇನ್ನು ಬ್ಯಾಂಕ್ ಗಳು ಕೂಡ ಸಾಕಷ್ಟು ಇರುವುದರಿಂದ ಜನ ಒಂದಕ್ಕಿಂತ ಹೆಚ್ಚು ಅಕೌಂಟ್ ಹೊಂದಿರಲು ಬಯಸುತ್ತಾರೆ. ಆದರೆ ಈ ರೀತಿ ಒಂದಕ್ಕಿಂತ ಹೆಚ್ಚು ಅಕೌಂಟ್ (multiple account) ಹೊಂದಿದ್ದಾಗ ನಿಮಗೆ ಆಗುವ ಪ್ರಯೋಜನಗಳು ಹಾಗೂ ಅನಾನುಕೂಲಗಳು ಯಾವವು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಈ ಸುದ್ದಿ ಓದಿದ್ದೀರಾ?:ವಾಮಾಚಾರ,ಶತ್ರುಭಾಧೆಗೆ ಶಾಶ್ವತ ಪರಿಹಾರ: ಮಾಡಾಯಿಕಾವಿಲಮ್ಮ ಭಗವತಿ

ಮೊದಲನೆಯದಾಗಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಆಗುವ ಲಾಭದ ಬಗ್ಗೆ ತಿಳಿದುಕೊಳ್ಳೋಣ! *ಯಾವುದಾದರೂ ಒಂದು ಪೇಮೆಂಟ್ ಮಾಡುವ ಸಮಯದಲ್ಲಿ ಸರ್ವರ್ ಸಮಸ್ಯೆಯಿಂದ ಒಂದು ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗದೇ ಇದ್ದರೆ ಅಥವಾ ಯಾವುದೇ ಸ್ಥಳದಲ್ಲಿ ಪೇಮೆಂಟ್ ಮಾಡಲು ಸಾಧ್ಯವಾಗದೆ ಇದ್ದರೆ, ಅಂತಹ ಸಂದರ್ಭದಲ್ಲಿ ನಿಮ್ಮ ಬಳಿ ಇನ್ನೊಂದು ಬ್ಯಾಂಕ್ ನ ಅಕೌಂಟ್ ಇದ್ದಾಗ ಆ ಮೂಲಕ ಸುಲಭವಾಗಿ ಪೇಮೆಂಟ್ ಮಾಡಬಹುದು.

* ಇನ್ನು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಬ್ಯಾಂಕ್ನಿಂದ ಹೆಚ್ಚಿನ ಆಫರ್ ಗಳನ್ನು ಪಡೆದುಕೊಳ್ಳಬಹುದು. ಉದಾಹರಣೆಗೆ ನೀವು ಬೇರೆ ಬೇರೆ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಾಗ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಯಪಡೆದುಕೊಳ್ಳುತ್ತೀರಿ ಅದಕ್ಕಿಂತ ಹೆಚ್ಚು ಕಾರ್ಡ್ ನಿಮ್ಮ ಬಳಿ ಇದ್ದಾಗ ನೀವು ಬೇರೆ ಬೇರೆ ಅವಧಿಯಲ್ಲಿ ಬೇರೆ ಬೇರೆ ರೀತಿಯ ಆಫರ್ ಗಳನ್ನು ಪಡೆದುಕೊಳ್ಳಬಹುದು.

* ಬ್ಯಾಂಕ್ ನಲ್ಲಿ ನೀವು ಹಣವನ್ನು ಡೆಪಾಸಿಟ್ ಇಟ್ಟಿದ್ದು, ಆ ಬ್ಯಾಂಕ್ ದಿವಾಳಿ ಆಗುವ ಸಂದರ್ಭ ಇದ್ದರೆ ನೀವು ಡೆಪಾಸಿಟ್ ಇಟ್ಟ ಹಣದಲ್ಲಿ 5 ಲಕ್ಷ ವರೆಗೆ ಹಿಂಬಡಿವ ಗ್ಯಾರಂಟಿಯನ್ನು ಸರ್ಕಾರ ನೀಡುತ್ತದೆ ಇಂತಹ ಸಂದರ್ಭದಲ್ಲಿ ನೀವು ಮಲ್ಟಿಪಲ್ ಅಕೌಂಟ್ ಹೊಂದಿದ್ದು ಬೇರೆ ಬೇರೆ ಬ್ಯಾಂಕ್ ನ ಖಾತೆಯಲ್ಲಿ ಹಣವನ್ನ ಇಟ್ಟರೆ ಆಗ ಪ್ರತಿ ಬ್ಯಾಂಕುಗಳಿಂದ 5 ಲಕ್ಷ ಗಳ ವರೆಗೆ ಪಡೆಯಬಹುದು.

* ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಆಗುವ ಅನಾನುಕೂಲಗಳು!

* ನಿಮ್ಮ ಆದಾಯ 7 ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೆ ಆಗ ಆದಾಯ ತೆರಿಗೆ ಪಾವತಿ (Income Tax) ಮಾಡಬೇಕು. ಇಂತಹ ಸಂದರ್ಭದಲ್ಲಿ ಮಲ್ಟಿಪಲ್ ಅಕೌಂಟ್ ಇದ್ದಾಗ ಐಟಿಆರ್ ಫೈಲಿಂಗ್ (ITR filing) ಕಸ್ಟವಾಗುತ್ತದೆ. ಅದರ ಬಗ್ಗೆ ಮಾಹಿತಿ ನೀಡುವುದು ಬಹಳ ಸುಲಭ.

* ಬ್ಯಾಂಕ್ ನಲ್ಲಿ ಖಾತೆ ತೆರೆದ ನಂತರ ಮಿನಿಮಮ್ ಬ್ಯಾಲೆನ್ಸ್ ಅಂದರೆ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕು. ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಜೀರೋ ಬ್ಯಾಲೆನ್ಸ್ ಖಾತೆ ತೆರೆಯುವುದಕ್ಕೆ ಜನರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದಾಗ್ಯೂ ಬ್ಯಾಂಕುಗಳು 500 ರೂಪಾಯಿಗಳಿಂದ 10,000 ವರೆಗೆ ಮಿನಿಮಮ್ ಬ್ಯಾಲೆನ್ಸ್ (minimum balance) ವಿಧಿಸುತ್ತವೆ. ಹೀಗಾಗಿ ನೀವು ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿದ್ದರೆ ಈ ಎಲ್ಲಾ ಖಾತೆಯಲ್ಲಿಯೂ ಮಿನಿಮಂ ಬ್ಯಾಲೆನ್ಸ್ ಮೆಂಟೇನ್ ಮಾಡಬೇಕು.

ಬಡವರಿಗೆ ವಸತಿ ಯೋಜನೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ಸಬ್ಸಿಡಿ ಸಾಲ

* ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡ್ದೆ ಇದ್ರೆ ಶುಲ್ಕ ಪಾವತಿಸಬೇಕು ಹೆಚ್ಚು ಖಾತೆ ಹೊಂದಿದ್ದಾಗ ಹೆಚ್ಚು ಶುಲ್ಕವಾಗುತ್ತದೆ.

* ಇನ್ನು ಖಾತೆಯನ್ನ ನಿರ್ವಹಿಸಲು ಬ್ಯಾಂಕ್ ವಾರ್ಷಿಕ ಶುಲ್ಕವನ್ನು ವಿಧಿಸುತ್ತದೆ. ನೀವು ಒಂದಕ್ಕಿಂತ ಹೆಚ್ಚಿನ ಖಾತೆಯನ್ನು ಹೊಂದಿದ್ದರೆ ಪ್ರತಿ ಖಾತೆಯಲ್ಲಿಯೂ ಕೂಡ ವಾರ್ಷಿಕ ಶುಲ್ಕ ಪಾವತಿ ಮಾಡಬೇಕು ಅಂದ್ರೆ ನಿಮಗೆ ಆರ್ಥಿಕ ಹೊರೆ ಜಾಸ್ತಿ ಆಗುತ್ತದೆ.

* ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಅಷ್ಟೇ ಸಾಲದು. ಪ್ರತಿಯೊಂದು ಖಾತೆಯಿಂದಲೂ ನೀವು ಹಣಕಾಸಿನ ವ್ಯವಹಾರವನ್ನು ಮಾಡುತ್ತಲೇ ಇರಬೇಕು. ಒಂದು ವೇಳೆ ಒಂದಕ್ಕಿಂತ ಹೆಚ್ಚು ವರ್ಷಗಳ ಅವಧಿಗೆ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸದೆ ಇದ್ದರೆ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅಷ್ಟೇ ಅಲ್ಲದೆ ಅದಕ್ಕೆ ಹೆಚ್ಚುವರಿ ದಂಡವನ್ನು ಕೂಡ ನೀವು ಪಾವತಿಸಬೇಕು.

ಒಂದಕ್ಕಿಂತ ಹೆಚ್ಚು ಖಾತೆಯನ್ನು ಹೊಂದಿರಬೇಕು ಬೇಡವೋ ಎನ್ನುವುದರ ಬಗ್ಗೆ ಆರ್ ಬಿ ಐ ಯಾವುದೇ ನಿಯಮವನ್ನು ಜಾರಿಗೆ ತಂದಿಲ್ಲ. ಆದರೆ ಒಂದಕ್ಕಿಂತ ಹೆಚ್ಚಿನ ಖಾತೆಯನ್ನು ಹೊಂದುವುದರಿಂದ ಇರುವ ಅನಾನುಕೂಲತೆಗಳ ಬಗ್ಗೆ ತಿಳಿದುಕೊಂಡು ನಂತರ ಹೆಚ್ಚಿನ ಖಾತೆ ತೆರೆಯುವುದು ಉತ್ತಮ.

Digiqole Ad

ಈ ಸುದ್ದಿಗಳನ್ನೂ ಓದಿ