• 8 ಸೆಪ್ಟೆಂಬರ್ 2024

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಭಕ್ತಿ ಸಂಗೀತ ಗಾನಮಂಜರಿ

 ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಭಕ್ತಿ ಸಂಗೀತ ಗಾನಮಂಜರಿ
Digiqole Ad

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಭಕ್ತಿ ಸಂಗೀತ ಗಾನಮಂಜರಿ

ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯವು ಮಹಾ ಶಿವರಾತ್ರಿಯ ಪ್ರಯುಕ್ತ ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಮೈದಾನದಲ್ಲಿ ಆಯೋಜಿಸಿದ ಶಿವ ದರ್ಶನ ಪ್ರದರ್ಶನ ಕಾರ್ಯಕ್ರಮದಲ್ಲಿ ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ಗಾಯಕ, ಸಾಹಿತಿ ಹೆಚ್. ಭೀಮರಾವ್ ವಾಷ್ಠರ್ ಇವರ ನೇತೃತ್ವದಲ್ಲಿ ಭಕ್ತಿ ಸಂಗೀತ ಗಾನಮಂಜರಿ ಜರುಗಿತು. ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ಬಿ ಕೆ ಉಮಾದೇವಿ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸುದ್ದಿ ಓದಿದ್ದೀರಾ?:ಐಪಿಎಲ್: ಆರ್‌ಸಿಬಿ ತಂಡದಲ್ಲಿ ಬದಲಾವಣೆ

ಗಾಯಕರಾದ ಪಾರ್ವತಿ ಗಾಣಿಗ, ಅಶ್ವಿಜ್ ಆತ್ರೆಯ, ಚಂದನ್ ಮೂಡೂರು, ಸೀ ಕೆ ಮಾಸ್ಟರ್ , ಚಿನ್ಮಯ್ ಮೂಡೂರು, ತನ್ಮಯ್ ಸೋಮಾಯಾಗಿ, ಸೀತಾರಾಮ್ ಜನನಿ ಜೆಸಿಬಿ ಇನ್ನಿತರರು ಶಿವನ ಕುರಿತ ಭಕ್ತಿ ಗೀತೆಗಳನ್ನು ಹಾಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಕಾರ್ಯಕರ್ತರಾದ ಬಿ ಕೆ ಉಮೇಶ್ ಜಟ್ಟಿಪಳ್ಳ ಅವರು ಸಹಕರಿಸಿ ಎಲ್ಲಾ ಗಾಯಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಗಾಯಕ ಭೀಮರಾವ್ ವಾಷ್ಠರ್ ನಿರೂಪಿಸಿದರು. ಬಿ ಕೆ ಸುಧಾಕರ್ ಮಂಗಳೂರು ಸ್ವಾಗತಿಸಿ ವಂದನಾರ್ಪಣೆ ಮಾಡಿದರು.

ಈ ಸುದ್ದಿ ಓದಿದ್ದೀರಾ?:ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ ವಿಪಕ್ಷಗಳ ಸಭೆ

Digiqole Ad

ಈ ಸುದ್ದಿಗಳನ್ನೂ ಓದಿ