• 27 ಜುಲೈ 2024

ಐಪಿಎಲ್: ಆರ್‌ಸಿಬಿ ತಂಡದಲ್ಲಿ ಬದಲಾವಣೆ

 ಐಪಿಎಲ್: ಆರ್‌ಸಿಬಿ ತಂಡದಲ್ಲಿ ಬದಲಾವಣೆ
Digiqole Ad

ಐಪಿಎಲ್: ಆರ್‌ಸಿಬಿ ತಂಡದಲ್ಲಿ ಬದಲಾವಣೆ

 

ಐಪಿಎಲ್ 2023ರಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಸಂಜಯ್ ಬಂಗಾರ್ ಅವರನ್ನು ಕೈಬಿಡಲು ನಿರ್ಧರಿಸಿದೆ. ಇಂಡಿಯನ್​ ಪ್ರೀಮಿಯರ್ ಲೀಗ್​​ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿಯೊಂದು ಹೊರ ಬಿದ್ದಿದೆ. ತಂಡದಲ್ಲಿ ಮೇಜರ್​ ಸರ್ಜರಿಗೆ ಆರ್​ಸಿಬಿ ಫ್ರಾಂಚೈಸಿ ಮುಂದಾಗಿದೆ.

ಟೀಮ್​ ಮ್ಯಾನೇಜ್​ಮೆಂಟ್​​ನಲ್ಲಿ ಭಾರಿ ದೊಡ್ಡ ಬದಲಾವಣೆಗೆ ನಿಶ್ಚಯಿಸಿದೆ. ಈಗಾಗಲೇ ನೂತನ ಕೋಚಿಂಗ್​​ ಸಿಬ್ಬಂದಿ ನೇಮಿಸಿಕೊಳ್ಳಲು ತಲಾಶ್​ ನಡೆಸಿದೆ.ಕೋಚ್​ ಸಂಜಯ್ ಬಂಗಾರ್ ಮತ್ತು ನಿರ್ದೇಶಕ ಮೈಕ್​ ಹೆಸನ್​ ಅವರ ಒಪ್ಪಂದವು ಸೆಪ್ಟೆಂಬರ್​​ನಲ್ಲಿ ಮುಕ್ತಾಯಗೊಳ್ಳಲಿದೆ. ಈ ಸಲುವಾಗಿ ಸಂಜಯ್​ ಬಂಗಾರ್​, ಮೈಕ್​ ಹೆಸನ್ ಅವರ ಒಪ್ಪಂದ ನವೀಕರಿಸದಿರಲು ಫ್ರಾಂಚೈಸಿ ಚಿಂತನೆ ನಡೆಸಿದೆ.ಈ ಕುರಿತು ಸ್ಪಷ್ಟನೆ ಕೇಳಲು ಇಎಸ್​​ಪಿಎನ್​ ಕ್ರಿಕ್​ಇನ್​ಫೋ, ಹೆಸನ್​ ಮತ್ತು ಬಂಗಾರ್​ ಅವರನ್ನು ಸಂಪರ್ಕಿಸಿತು. ಆದರೆ, ಆರ್‌ಸಿಬಿ ಮಾಹಿತಿ ನೀಡಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಲು ಇಬ್ಬರೂ ಪ್ರತಿಕ್ರಿಯಿಸಲಿಲ್ಲ.

ಸಿಬ್ಬಂದಿಯನ್ನು ನೇಮಿಸಲು ಹಲವರನ್ನು ಫ್ರಾಂಚೈಸಿ ಸಂಪರ್ಕಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಸೇರಿದಂತೆ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ ಆರ್‌ಸಿಬಿ ಜೊತೆಗಿನ ಒಪ್ಪಂದ ಇನ್ನೂ ಹಾಗೆಯೇ ಇದೆ ಎಂದು ಫ್ರಾಂಚೈಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತಂಡದಲ್ಲಿನ ಬದಲಾವಣೆಗಳ ಕುರಿತು ಯಾವುದೇ ಪ್ರಕಟಣೆ ಬಂದರೆ ಮಾಹಿತಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದೆ. ಸದ್ಯ ತಾಜಾ ಕೋಚ್​ಗಳ ಹುಡುಕಾಟದಲ್ಲಿದೆ ಎಂಬುದು ಖಚಿತ ಮೂಲಗಳು ಸ್ಪಷ್ಟಪಡಿಸಿವೆ.2016 ರಲ್ಲಿ ಕೊನೆಯ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್​ಸಿಬಿ ಆ ಬಳಿಕ ಮತ್ತೆ ಪ್ರಶಸ್ತಿ ಸುತ್ತಿಗೆ ತಲುಪಿರಲಿಲ್ಲ. ಇನ್ನು 2020, 2021 ಹಾಗೂ 2022 ರಲ್ಲಿ ಪ್ಲೇಆಫ್ ಆಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತ.ಹೀಗಾಗಿಯೇ ಆರ್​ಸಿಬಿ ಫ್ರಾಂಚೈಸಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದೆ.ಹೀಗಾಗಿ ಐಪಿಎಲ್ ಸೀಸನ್ 17 ಆರಂಭಕ್ಕೂ ಮುನ್ನವೇ ಆರ್​ಸಿಬಿ ತಂಡದಿಂದ ಕೆಲ ಆಟಗಾರರು ಹೊರಬೀಳುವುದು ಖಚಿತ. ಅದರ ಮೊದಲ ಭಾಗವಾಗಿ ಇದೀಗ ಕೋಚ್ ಹಾಗೂ ಇತರೆ ಸಿಬ್ಬಂದಿಗಳ ಬದಲಾವಣೆಗೆ ಮುಂದಾಗಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ