ಈ ವರ್ಷ ಗೇರು ಇಳುವರಿ ಕಡಿಮೆ
ಈ ವರ್ಷ ಗೇರು ಇಳುವರಿ ಕಡಿಮೆ
ಬೇಸಿಗೆಯ ಮಾರ್ಚ್ ತಿಂಗಳು ಈಗಾಗಲೇ ಮುಕ್ಕಾಲು ಭಾಗ ಕಳೆದಿರುತ್ತದೆ ಹಳ್ಳಿಯ ಭಾಗದಲ್ಲಿ ನೋಡಿದರೆ ಹಸಿರು ಹಸಿರು ಆದ ಮರಗಳಲ್ಲಿ ಕೆಂಪು ಅಥವಾ ಅರಿಶಿನ ಬಣ್ಣದ ಗೇರು ಹಣ್ಣುಗಳು ಕಾಣಸಿಗುತ್ತಿದ್ದವು. ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ವಾತಾವರಣದ ವೈಪರಿತ್ಯದಿಂದಾಗಿ ಗೇರು ಹಣ್ಣುಗಳು ಕಾಣುತ್ತಿಲ್ಲ !ಇದು ತುಂಬಾ ವಿಷಾದನೀಯ.
ಈ ಸುದ್ದಿ ಓದಿದ್ದೀರಾ?:KSRTC ಗೆ ನೂತನ ಮಾದರಿಯ ನಾನ್ ಎಸಿ ಸ್ವೀಪರ್ ಬಸ್ ಗಳ ಸೇರ್ಪಡೆ
ಗೇರುಹಣ್ಣಿನಲ್ಲಿ ಹಳದಿ, ಕೆಂಪು, ಕೇಸರಿ ಮಿಶ್ರಿತ ಕೆಂಪು ಹೀಗೆ ಬಗೆಬಗೆಯ ಬಣ್ಣಗಳಿವೆ. ಕಿಡ್ನಿ ಆಕಾರದಲ್ಲಿರುವ ಈ ಹಣ್ಣುಗಳ ತುದಿಯಲ್ಲಿ ಗೇರುಬೀಜ ಬೆಳೆಯುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯ ಪದಾರ್ಥವಾಗಿರುವ ಗೇರು ಬೀಜವನ್ನು ಕೊಯ್ದು ಹಣ್ಣನ್ನು ಬಿಸಾಕುವವರಿದ್ದಾರೆ. ಆದರೆ ನೆನಪಿಡಿ, ಗೇರು ಹಣ್ಣನ್ನು ಎಸೆಯುವ ಬದಲು ಸೇವಿಸಿ ನೋಡಿ ದೇಹದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಘೀ ಗೇರುಬೀಜದ ಇಳುವರಿ ತುಂಬಾ ಕಡಿಮೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ 2023 24ನೇ ಸಾಲಿನಲ್ಲಿ ಕಾಡುತ್ಪತ್ತಿ ಯಲ್ಲಿ ಪಸಲು ತೀರ ಕಡಿಮೆಯಾಗಿದೆ ಗೇರು ಮರಗಳಿಗೆ ಯಾರು ನೀರನ್ನು ಹಾಕಿ ಬೆಳೆಸುವುದು ತೀರ ಕಡಿಮೆ ಬದಲಾದ ಪರಿಸ್ಥಿತಿಯಲ್ಲಿ ಗೇರು ಕೃಷಿಯನ್ನು ಮಾಡುತ್ತಿರುವವರು ತೀರ ವಿರಳ ಈ ಹಿಂದೆ ಹಳ್ಳಿಗಳಲ್ಲಿ ಗುಡ್ಡೆಗಳಲ್ಲಿ ತಾನಾಗಿಯೇ ಬೆಳೆದು ಜನರಿಗೆ ಗೇರುಬೀಜವನ್ನು ನೀಡುತ್ತಿದ್ದವು ಗೇರು ಮರಗಳು ಯಾರು ನೀರು ಹಾಕುವುದಾಗಲಿ ಗೊಬ್ಬರ ಹಾಕುವುದಾಗಿ ಯಾರು ಮಾಡುತ್ತಿರಲಿಲ್ಲ ಅದರಿಂದ ಇಳುವರಿ ಬಂದ ನಂತರ ಲಾಭ ಮಾಡಿಕೊಳ್ಳುತ್ತಿದ್ದರು ಈ ಬಾರಿ ಗೇರು ಗೇರುಕೃಷಿಯು ತೀರ ಹೇಳದ ಸ್ಥಿತಿಗೆ ತಲುಪಿರುವುದು ವಿಷಾದನೀಯ ಮಾರ್ಚ್ ತಿಂಗಳುಗಳಲ್ಲಿ ಹಳ್ಳಿಗಳಿಂದ ಈಗಾಗಲೇ ಒಂದಷ್ಟು ಗೇರು ಬೀಜಗಳು ಮಾರುಕಟ್ಟೆಗೆ ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು ಜನರಿಗೆ ಉಪ-ಕೃಷಿಯಾಗಿ ಗೇರು ಗಿಡಗಳನ್ನು ಬೆಳೆಸಲು ಸರಕಾರವು ಈಗಾಗಲೇ ಹಲವು ಯೋಜನೆಗಳನ್ನು ತಂದಿದ್ದು ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ವಿಚಾರಗಳನ್ನು ಜನರಿಗೆ ತಲುಪಿಸಬೇಕಾಗಿದೆ ಗೇರು ಕೃಷಿ ಇಲಾಖೆಯು ಆದಷ್ಟು ಮಾಹಿತಿಯನ್ನು ಮುಟ್ಟಿಸಿ ಜನರಿಗೆ ಗೇರುಬಯ ಬಗ್ಗೆ ಅದರಲ್ಲಿರುವ ಲಾಭದ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ ಅಂಗಡಿಗಳಲ್ಲಿ ಸಾಮಾನ್ಯವಾಗಿ ಗೇರುಬೀಜ ಖರೀದಿ ಮಾಡಲು ಹೋದರೆ ಆಯಾಯ ಗುಣಮಟ್ಟಕ್ಕನುಗುಣವಾಗಿ ದರವನ್ನು ನಿಗದಿಪಡಿಸಿರುತ್ತಾರೆ ಒಂದು ಐದು ಗೇರು ಬೀಜ ಇರುವಂತಹ ಚಿಕ್ಕ ಪ್ಯಾಕೆಟ್ಗೆ 20 ರೂಗಳಿಗೆ ಮಾರಾಟವಾಗುತ್ತಿರುವುದು ಕಂಡುಬರುತ್ತದೆ ಇದರಿಂದ ನಮ್ಮ ಕೃಷಿಕರು ಗೇರುಕೃಷಿಯಿಂದಾಗಿ ಬೆಳೆದು ಆರ್ಥಿಕವಾಗಿ ಸಬಲರನ್ನಾಗಿಸಿ ಮಾಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡದ ಗೇರು ಬೀಜಗಳಿಗೆ ದೇಶ ವಿದೇಶಗಳಲ್ಲಿಯೂ ಎಲ್ಲಿಲ್ಲದ ಬೇಡಿಕೆ ಇದೆ ಬೀಜಗಳಲ್ಲಿ ವಿಶೇಷವಾದ ಪ್ರೋಟಿನ್ ಹಾಗೂ ವಿಟಮಿನ್ ಗಳು ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ಆಹಾರವು ಹೌದು ಮತ್ತು ಗೇರು ಹಣ್ಣುಗಳಿಂದ ವೈನನ್ನು ಕೂಡ ತಯಾರಿಸಬಹುದು ಆದ್ದರಿಂದ ಆದಷ್ಟು ಕೃಷಿಕರು ಉಪ ಕೃಷಿಯಾಗಿ ಗೇರು ಬೀಜಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಉತ್ತಮವಾದ ಲಾಭ ಗಳಿಸಬಹುದು ಗೇರು ಬೀಜಗಳಲ್ಲಿ ಹಲವಾರು ತಳಿಗಳು ಇರುತ್ತದೆ. ಗೇರುಹಣ್ಣುಗಳು ರಕ್ತ ಹೆಪ್ಪುಗಟ್ಟುವಿಕೆಗೆ ಮುಖ್ಯವಾದ ಕೊಬ್ಬಿನಾಮ್ಲಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಾಗಿದೆ. ಅಲ್ಲದೆ ಗೇರು ಹಣ್ಣಿನಲ್ಲಿರುವ ವಿಟಾಮಿನ್ಗಳು ಹೃದಯದ ಬಡಿತವನ್ನು ಸಮತೋಲದಲ್ಲಿರಿಸಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಒಮ್ಮೆ ಗೇರು ಹಣ್ಣುಗಳ ರಸವನ್ನು ಹೀರಿದರೆ ಒತ್ತಡ ನಿವಾರಣೆಯಾಗುತ್ತದೆ.
ಈ ಸುದ್ದಿ ಓದಿದ್ದೀರಾ?:ಕಾವೇರಿ ಸಂಕ್ರಮಣ ಹಿನ್ನೆಲೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಕಾರ್ಯಕ್ರಮ
ಆದ್ದರಿಂದ ಸೀಸನ್ನಲ್ಲಿ ಗೇರು ರಸವನ್ನು ಹೀರಿಕೊಳ್ಳಿ. ಆರೋಗ್ಯಯುತವಾಗಿರಿ.ಗೇರುಬೀಜ ಮಾತ್ರವಲ್ಲ. ಗೇರುಹಣ್ಣುಗಳು ದೇಹವನ್ನು ಸುರಕ್ಷಿತವಾಗಿಡಲು ನೆರವಾಗುತ್ತವೆ. ಗೋಡಂಬಿ ಹಣ್ಣುಗಳು ಪ್ರೊಆಂಥೋಸಯಾನಿನ್ಗಳೆಂದು ಕರೆಯಲ್ಪಡುವ ಸಂಯುಕ್ತಗಳನ್ನು ಹೊಂದಿರುತ್ತವೆ, ಇದು ಕ್ಯಾನ್ಸರ್ ಕೋಶಗಳ ಪುನರಾವರ್ತನೆಯನ್ನು ನಿಗ್ರಹಿಸುವ ಫ್ಲೇವೊನಾಲ್ಗಳ ವರ್ಗವಾಗಿದೆ. ಒಂದು ಬಾರಿ ಕ್ಯಾನ್ಸರ್ ಕಾರಕ ಜೀವಕೋಶಗಳ ಬೆಳವಣಿಗೆ ಆರಂಭವಾದರೆ ಅದನ್ನು ತಡೆಯುವುದು ತುಸು ಕಷ್ದ ಕೆಲಸ. ಆದರೆ ಗೇರುಹಣ್ಣುಗಳಲ್ಲಿರುವ ಕಾಪರ್, ಕ್ಯಾಲ್ಸಿಯಂ ಅಂಶಗಳು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಆದ್ದರಿಂದ ಗೇರುಹಣ್ಣುಗಳು ಸಿಕ್ಕಾಗ ತಿಂದುಬಿಡಿ.
www.goldfactorynews.com
Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.