• 8 ಸೆಪ್ಟೆಂಬರ್ 2024

ಮೆಣಸಿನಕಾನದಲ್ಲಿ ಪ್ರಥಮ ಬಾರಿಗೆ ವಿಜೃಂಭಿಸಿದ ‘ತುಳು ಕೂಟ’..

 ಮೆಣಸಿನಕಾನದಲ್ಲಿ ಪ್ರಥಮ ಬಾರಿಗೆ ವಿಜೃಂಭಿಸಿದ ‘ತುಳು ಕೂಟ’..
Digiqole Ad

ಮೆಣಸಿನಕಾನದಲ್ಲಿ ಪ್ರಥಮ ಬಾರಿಗೆ ವಿಜೃಂಭಿಸಿದ ‘ತುಳು ಕೂಟ’..

ದೇಲಂಪಾಡಿ ಗ್ರಾಮದ ಮೆಣಸಿಕಾನದ ಶ್ರೀ ಧೂಮಾವತಿ ಸಹ ಪರಿವಾರ ದೈವಸ್ಥಾನ ನೆಲ್ಲಿಂಜಗುತ್ತು ತರವಾಡು ಮನೆಯ ವಠಾರದಲ್ಲಿ “ತುಳುಕೂಟ ಸಮಿತಿ ಮೆಣಸಿಕಾನ ದೇಲಂಪಾಡಿ” ವತಿಯಿಂದ ” ತುಳು ಐಸಿರೊ” ಕಾರ್ಯಕ್ರಮವು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವಿವಿಧ ಜಾನಪದ ಸಾಂಸ್ಕೃತಿಕ ಕ್ರೀಡಾಕೂಟಗಳೊಂದಿಗೆ ನಡೆಯಿತು.

ಈ ಸುದ್ದಿ ಓದಿದ್ದೀರಾ?:ನಡೆದಾಡುವ ದೇವರೆಂದೇ” ಪ್ರಸಿದ್ದಿ ಪಡೆದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯ 117ನೇ ಜಯಂತಿ..

ಶ್ರೀ ರವಿಕಿರಣ ಶೆಟ್ಟಿ ಬೆದ್ರಾಡಿ ದೀಪ ಬೆಳಗಿಸಿ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಿ ಶುಭ ಹಾರೈಸಿದರು. ಆಟೋಟ ಸ್ಪರ್ಧೆಗಳನ್ನು ನಡೆಸಲು ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಕುಕ್ಕುಪುಣಿ ಮತ್ತು ಪ್ರಸಾದಿ ಯಾದವ್ ಚಿಮಿನಿಗುಡ್ಡೆ ಇವರು ನಿರ್ಣಾಯಕರಾಗಿ ಸಹಕಾರ ನೀಡಿದರು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಪಂಚವಟಿ ಎಂಬ ತುಳು ಯಕ್ಷಗಾನ ತಾಳಮದ್ದಳೆ ಪ್ರಸಂಗ ನಡೆಸಿಕೊಟ್ಟರು.

ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಶ್ರೀ ಗುರುದೇವ ದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವನಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿ ತುಳು ಭಾಷೆ,ಸಂಸ್ಕೃತಿ,ಆಚಾರ-ವಿಚಾರ ಉಳಿಸುವಲ್ಲಿ ಈ ತುಳುಕೂಟದ ಶ್ರಮ ಯಶಸ್ವಿಯಾಗಲಿ ಇನ್ನಷ್ಟು ಪ್ರೋತ್ಸಾಹ ಸಿಗಲಿ ಎಂದರು . ತುಳುಕೂಟ ಮಹಿಳಾ ಸಮಿತಿಯ ಅಧ್ಯಕ್ಷ ಮಹಿತ ರೈ ಕಾರ್ಯಕ್ರಮಕ್ಕೆ ಶುಭಕೋರಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಲಿಂಜಗುತ್ತು ಸದಾಶಿವ ರೈಯವರು ವಹಿಸಿದರು. ವಕೀಲ ಕುಂಬ್ರ ದುರ್ಗಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಹೇಮನಾಥ ಶೆಟ್ಟಿ, ಕೃಷ್ಣ ಭಟ್ ಮುಂಡ್ಯ, ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಸದಸ್ಯ ರವಿ ಮುಗೇರ, ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಾಸರಗೋಡಿನ ಮುಖೇಶ್ ,ಬನ್ನೂರು ಎ.ವಿ.ಜಿ ಶಾಲೆಯ ಅಧ್ಯಕ್ಷ ಕಳುವಾಜೆ ವೆಂಕಟರಮಣ ಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ನಾರಾಯಣ ನಾಯ್ಕ್ ಉಜಂಪಾಡಿ, ನಾರಾಯಣ ರೈ ಕಟ್ಟೆ ಕುದ್ಕಾಡಿ,ಶಿವರಾಮ ಕಲ್ಲೂರಾಯ ಕಲ್ಲಡ್ಕ, ಸದಾಶಿವ ರೈ ಬೆಳ್ಳಿಪ್ಪಾಡಿ ಗುತ್ತು, ಸತ್ಯನಾರಾಯಣ ಮನೋಳಿತ್ತಾಯ ಎಂಕಣಮೂಲೆ ,ಜಯಪ್ರಕಾಶ್ ರೈ ನೂಜಿಬೈಲು, ಗಿರೀಶ್ ರೈ ಮರಕ್ಕಡ, ದೇವದಾಸ್ ಶೆಟ್ಟಿ ಪೆರುವಾಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿವಿಧ ಸಾಮಾಜಿಕ ,ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕೃಷಿ ಕಾರ್ಯಕ್ಷೇತ್ರಗಳಲ್ಲಿ ಸಾಧನೆ ಮಾಡಿ ಗುರುತಿಸಿಕೊಂಡ ಪಕ್ಕೀರ ಅಂದಿತಿರಿಯಾನ್ ಮೆಣಸಿನಕಾನ, ಮಂಜಪ್ಪ ಪೂಜಾರಿ ಉಜಂಪಾಡಿ, ಕಿಟ್ಟಣ್ಣ ರೈ ಮೆಣಸಿನಕಾಯಿ ,ಶಾಂತಪ್ಪ ರೈ, ಮುದಿಯಾರು, ನಾರಾಯಣ ನಾಯಕ್ ಮೆಣಸಿನಕಾನ, ಬಾಬು ಗೌಡ ಮೆಣಸಿನಕಾಯಿ, ಗೋಪಾಲ ಮಣಿಯಾಣಿ ಉಜಂಪಾಡಿ, ಅಪ್ಪಯ ನಾಯ್ಕ ಶಾಂತಿಮಲೆ , ರೇವತಿ ವಾಲ್ತಾಜೆ,ಕುಂಞಣ್ಣ ರೈ ಬೆಳ್ಳಾರೆ, ವಿಶ್ವನಾಥ ರೈ ಉಜಂಪಾಡಿ, ವಸಂತ ರೈ ಶಾಂತಿಮಲೆ , ಹರೀಶ್ ಭಂಡಾರಿ ಕೌಡೂರು ಬೀಡು,ಬೊಲ್ಪಾರು ರಾಧಾಕೃಷ್ಣ ರೈ ಮುದಿಯಾರು,ರುಕ್ಷ್ಮಯ ಅಜಲಾಯ ಮಯ್ಯಾಳ ಉಜಂಪಾಡಿ ಶ್ರೀ ರಾಮ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾ. ವಿದ್ಯಾ ಮೋಹನ್ ದಾಸ್ ರೈ ರತ್ನ ಕ್ಲಿನಿಕ್ ಬೊಳ್ಳೂರು ಬಹುಮಾನ ವಿತರಿಸಿ ಶುಭ ಕೋರಿದರು. ಸಮಿತಿಯ ಕಾರ್ಯಧ್ಯಕ್ಷ ಕೊರಗಪ್ಪ ರೈ ಮಾಯ್ಯಾಳ ಸ್ವಾಗತಿಸಿ, ಸಮಿತಿಯ ಕೋಶಾಧ್ಯಕ್ಷ ಸಂಪತ್ ರೈ ಉಜಂಪಾಡಿ ವಂದಿಸಿ, ಸಮಿತಿಯ ಪದಾಧಿಕಾರಿಗಳಾದ ಹರ್ಷಿತ್ ರೈ ಮೆಣಸಿನಕಾನ, ಕೆ ರಾಮಣ್ಣ ರೈ ಕಲ್ಮಡ್ಕ ಗೊತ್ತು ಸೀತಾರಾಮ ರೈ ಕಲ್ಲಡ್ಕಗುತ್ತು, ದೇವಪ್ಪ ಗೌಡ ಸಿ ಯೆಚ್ ,ವೀಣಾ ಮೆಣಸಿನಕಾನ ,ಸವಿತಾ ಮೆಣಸಿನಕಾಣ ಮೋಹನ ಮೆಣಸಿನಕಾನ, ರಾಜೇಶ್ ಮಯ್ಯಾಳ, ವೇಣು ಶಾಂತಿಮಲೆ,ಹರೀಶ್ ಮೆಣಸಿನಕಾನ, ಲೋಕೇಶ್ ಗೌರಿಮೂಲೆ,ಮೋಹನ್ ವಾಲ್ತಾಜೆ, ರತ್ನಾಕರ ರೈ ಮುದಿಯಾರು, ಮೋಹನದಾಸ್ ರೈ ಮುದಿಯಾರು, ಬಾಳಪ್ಪ ಕನ್ನಂಗೊಳು ,ಚರಣ್ ಗೌಡ ವಾಲ್ತಾಜೆ , ಜಗದೀಶ್ ರೈ ಕಲ್ಲಡ್ಕ,ಬಾಬು ಉಜಂಪಾಡಿ, ರವಿ ರೈ ಮೆಣಸಿನಕಾನ ಹಾಗೂ ಸರ್ವ ಅಧ್ಯಕ್ಷರು ಸಹಕರಿಸಿದರು . ವಿದ್ಯಾ ಶ್ರೀ ಯಸ್ ಪಡುಮಲೆ ಕಾರ್ಯಕ್ರಮ ನಿರೂಪಿಸಿದರು. ಹಾಗೂ ರಕ್ತೇಶ್ವರಿ ಕಟ್ಟೆ ಸಮಿತಿ ಸರ್ವ ಸದಸ್ಯರು ಗ್ರಾಮದ ಹಲವು ಹಿರಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಓದಿದ್ದೀರಾ?:ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸುವರ್ಣ ಸಂಭ್ರಮ – ಲೋಗೋ ಅನಾವರಣ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ