• 22 ನವೆಂಬರ್ 2024

ನಾಳೆ ಸಂಜೆಯಿಂದ ಏ.26ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿ: ‘ಮದ್ಯ ಮಾರಾಟ’ವೂ ಬಂದ್

 ನಾಳೆ ಸಂಜೆಯಿಂದ ಏ.26ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿ: ‘ಮದ್ಯ ಮಾರಾಟ’ವೂ ಬಂದ್
Digiqole Ad

ನಾಳೆ ಸಂಜೆಯಿಂದ ಏ.26ರ ಮಧ್ಯರಾತ್ರಿವರೆಗೆ 144 ಸೆಕ್ಷನ್ ಜಾರಿ: ‘ಮದ್ಯ ಮಾರಾಟ’ವೂ ಬಂದ್

ಬೆಂಗಳೂರು: ಏಪ್ರಿಲ್.26ರಂದು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗಾಗಿ ಮೊದಲ ಹಂತದ ಮತದಾನ ನಡೆಯಲಿದ್ದು, ಈ ಕಾರಣಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಲ್ಲಿ ನಾಳೆ ಸಂಜೆ 6 ಗಂಟೆಯಿಂದ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೇ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದ್ದು, ಈ ಸಂಬಂಧ ಬೆಂಗಳೂರು ನಗರ ಪೊಲೀಸ್‌ ಕಮೀಷನ‌ರ್ ಬಿ.ದಯಾನಂದ್‌ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಸರ್ಕಾರಿ ಕಚೇರಿಯಲ್ಲಿ ಹಕ್ಕಿಗಳಿಗೆ ಕುಡಿಯಲು ನೀರಿಡುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್.ಎಂ.ಪಿ ಆದೇಶ

ನಾಳೆ ಸಂಜೆ 6 ಗಂಟೆಯಿಂದ ಬೆಂಗಳೂರು ವ್ಯಾಪ್ತಿಯಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐದು ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚುವರಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ನಾಳೆ ಸಂಜೆ 6 ಗಂಟೆಯಿಂದ ಏಪ್ರಿಲ್.26ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ಈ ವೇಳೆಯಲ್ಲಿ ಮದ್ಯ ಮಾರಾಟಕ್ಕೆ ಕೂಡ ಅವಕಾಶವಿಲ್ಲ ಎಂಬುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಪಾನಿಪೂರಿ ತಿಂದ 19‌ ಮಕ್ಕಳು ಅಸ್ವಸ್ಥ

ಬೆಂಗಳೂರಿನ ಐದು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದ್ದು, 13 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 11 ಸಿಆ‌ರ್ ಪಿಎಫ್, 14 ಕೆ ಎಸ್ ಆರ್ ಪಿ ಹಾಗೂ 40 ಸಿಎಆ‌ರ್ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

 

Digiqole Ad

ಈ ಸುದ್ದಿಗಳನ್ನೂ ಓದಿ