ಅಡಿಕೆಯನ್ನು ಔಷಧಿಯಾಗಿ ಏಕೆ ಬಳಸಲಾಗುತ್ತದೆ?
ಅಡಿಕೆಯನ್ನು ಔಷಧಿಯಾಗಿ ಏಕೆ ಬಳಸಲಾಗುತ್ತದೆ?
– ನಮ್ಮ ಪೂರ್ವಿಕರು ಅಡಿಕೆಯನ್ನು ಹಲವಾರು ಶತಮಾನಗಳಿಂದಲೂ ಪ್ರತಿನಿತ್ಯ ತಮ್ಮ ಜೀವನದ ಒಂದು ಭಾಗವಾಗಿ ಪರಿಗಣಿಸಿ, ಸಂಪ್ರದಾಯವಾಗಿ, ಆಹಾರವಾಗಿ, ಔಷಧಿಯಾಗಿ ಅಡಿಕೆಯನ್ನು ಸೇವಿಸುತ್ತಾ ಬಂದಿದ್ದಾರೆ. ಅಡಿಕೆ ಶುಭ ಅಥವಾ ಮಂಗಳ ದ್ರವ್ಯ ಎಂದು ಎಷ್ಟು ವಿಶಿಷ್ಟ ಸ್ಥಾನ ಪಡೆದಿದೆಯೋ, ಅದಕ್ಕೂ ಮೀರಿದ ಶ್ರೇಷ್ಠ ಔಷಧೀಯ ಗುಣಗಳಿಂದ ಕೂಡಿದೆ.
ಈ ಸುದ್ದಿಯನ್ನು ಓದಿದ್ದೀರಾ.?ಭಾರತದ ಫಿಲ್ಟರ್ ಕಾಫಿಗೆ ವಿಶ್ವದ ಬೆಸ್ಟ್ ಕಾಫಿಗಳಲ್ಲಿ 2ನೇ ಸ್ಥಾನ.
– ಅಡಿಕೆಯಲ್ಲಿ ಅನೇಕ ಔಷಧೀಯ ಗುಣಗಳಿರುವುದರಿಂದ, ಅಡಿಕೆಯ ಕಷಾಯ, ಚೂರ್ಣವನ್ನು ಹಲವು ರೋಗಗಳಲ್ಲಿ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ವೀಳ್ಯದೆಲೆಯ ಜೊತೆಗೆ ಅಡಿಕೆಯ ಸೇವನೆಯಾದ, ತಾಂಬೂಲವನ್ನು ನಿಗದಿತ ವೇಳೆಯಲ್ಲಿ ಪ್ರತಿದಿನ ಸೇವಿಸಬೇಕೆಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿಯನ್ನು ಓದಿದ್ದೀರಾ.?ಮಾರುಕಟ್ಟೆಯಲ್ಲಿ ಏರಿಕೆ ಕಾಣುತ್ತಿರುವ ಕೆಂಪಡಿಕೆ ಧಾರಣೆ
– ಆಡಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟ್ಯಾನಿನ್ ಎಂಬ ಅಂಟಿನಂತಹ ಕೆಂಪು ಬಣ್ಣದ ಸಾರ ಹೇರಳವಾಗಿದೆ. 31.31% ತೇವಾಂಶ, 4.9% ಪ್ರೋಟಿನ್ ಹಾಗೂ 11.2% ನಾರಿನಾಂಶವಿದೆ ಮತ್ತು ಅಧಿಕ ಪ್ರಮಾಣದ ಖನಿಜಾಂಶವಿದೆ. ಅದರಲ್ಲೂ ಉತ್ತಮ ಪ್ರಮಾಣದಷ್ಟು ಕ್ಯಾಲ್ಶಿಯಂ, ಜೀವಸತ್ವಗಳಾದ ವಿಟಮಿನ್ ಬಿ6 , ವಿಟಮಿನ್ ಸಿ ಅಡಿಕೆಯಲ್ಲಿದೆ. ಅದ್ದರಿಂದ ಅಡಿಕೆಯ ಸೇವನೆಯಿಂದ ಅಗತ್ಯ ಪೋಷಕಾಂಶಗಳು ಹಾಗೂ ಕ್ಯಾಲ್ಶಿಯಂ, ವಿಟಮಿನ್ ನಂತಹ ಜೀವಸತ್ವಗಳು ದೇಹಕ್ಕೆ ಲಭ್ಯವಾಗುತ್ತದೆ.
(✍️ಸಂಗ್ರಹ)
GOLDFACTORYNEWS.COM
the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.
Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.