• 23 ನವೆಂಬರ್ 2024

‘ GIRL NO 166’ ಮಿಸ್ಸಿಂಗ್ ಕೇಸ್?ಸಿನಿಮಾವನ್ನೂ ಮೀರಿಸಿದ ಪ್ರಕರಣ ಇದು!

 ‘ GIRL NO 166’ ಮಿಸ್ಸಿಂಗ್ ಕೇಸ್?ಸಿನಿಮಾವನ್ನೂ ಮೀರಿಸಿದ ಪ್ರಕರಣ ಇದು!
Digiqole Ad

‘ GIRL NO 166’ ಮಿಸ್ಸಿಂಗ್ ಕೇಸ್?ಸಿನಿಮಾವನ್ನೂ ಮೀರಿಸಿದ ಪ್ರಕರಣ ಇದು!

ಏಳು ವರ್ಷ ಪ್ರಾಯದ ಬಾಲಕಿಯೊಬ್ಬಳು 9 ವರ್ಷಗಳ ಕಾಲ ನರಕಯಾತನೆ ಅನುಭವಿಸಿ, 16ನೇ ವಯಸ್ಸಲ್ಲಿ ಮನೆಗೆ ಮರಳಿದ ವಿಚಿತ್ರ ಪ್ರಕರಣವಿದು.

ಏನಿದು ‘ GIRL NO 166’ ಮಿಸ್ಸಿಂಗ್ ಕೇಸ್?

ಪೂಜಾ ಗಾವ್ ಎಂಬ ಈಕೆ ಏಳನೇ ವಯಸ್ಸಲ್ಲಿ, ಅಂದರೆ 2013ರ ಜ. 22ರಂದು ಸಹೋದರ ರೋಹಿತ್ ಜತೆ ಮುಂಬೈನ ಜುಹು ಗಲ್ಲಿ ಪ್ರದೇಶದ ಶಾಲೆಗೆ ತೆರಳಿದ್ದಳು. ಅಜ್ಜ-ಅಜ್ಜಿ ಕೊಟ್ಟಿದ್ದ ಪಾಕೆಟ್ ಮನಿ ವಿಚಾರವಾಗಿ ಶಾಲೆಗೆ ಪ್ರವೇಶಿಸುವ ಮುನ್ನ ಈಕೆ ಮತ್ತು ಸಹೋದರನ ನಡುವೆ ಜಗಳವಾಗಿತ್ತು. ಆ ಬಳಿಕ ಆತ ಸಿಟ್ಟಿನಿಂದ ಶಾಲೆಯೊಳಕ್ಕೆ ತೆರಳಿದರೆ ಈಕೆ ಹೊರಗೆ ಗೇಟ್ ಬಳಿಯೇ ಉಳಿದಿದ್ದಳು.

ಆ ಸಂದರ್ಭದಲ್ಲಿ ಈಕೆಯನ್ನು ಗಮನಿಸಿದ ಮಕ್ಕಳಿಲ್ಲದ ದಂಪತಿ (ಹ್ಯಾರಿ ಡಿಸೋಜಾ-ಸೋನಿ ಡಿಸೋಜಾ) ಐಸ್ ಕ್ರೀಮ್ ಕೊಡಿಸುವ ಆಮಿಷವೊಡ್ಡಿ ಇವಳನ್ನು ಕರೆದುಕೊಂಡು ಹೋಗಿದ್ದರು.ಇತ್ತ ಮಗಳು ಮನೆಗೆ ಬರದಿದ್ದ ಹಿನ್ನೆಲೆಯಲ್ಲಿ ಪೂಜಾ ಪಾಲಕರು ಡಿಎನ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಪ್ರದೇಶದಲ್ಲಿ ಕಾಣೆಯಾಗಿದ್ದ 166ನೇ ಹುಡುಗಿ ಇವಳಾಗಿದ್ದು, ಈಕೆಯ ಪತ್ತೆ ಕಾರ್ಯಾಚರಣೆ ‘ಗರ್ಲ್ ನಂ. 166’ ಎಂದೇ ಹೆಸರಾಗಿತ್ತು. ಅಲ್ಲಿನ ಪೊಲೀಸರು ಈ ಹಿಂದೆ ಕಾಣೆಯಾಗಿದ್ದ 165 ಬಾಲಕಿಯರಲ್ಲಿ ಅಷ್ಟೂ ಮಂದಿಯನ್ನು ಪತ್ತೆ ಮಾಡಿದ್ದರೂ ಪೂಜಾ ಪತ್ತೆ ಆಗಿರಲಿಲ್ಲ.

ಮಕ್ಕಳಿಲ್ಲ ಎಂಬ ಕಾರಣಕ್ಕೆ ಪೂಜಾಳನ್ನು ಬಲವಂತವಾಗಿ ಕರೆದೊಯ್ದು ತಮ್ಮೊಂದಿಗಿರಿಸಿಕೊಂಡಿದ್ದ ಹ್ಯಾರಿ-ಸೋನಿ ದಂಪತಿ, ಮೊದಲು ಗೋವಾಕ್ಕೆ ತೆರಳಿದ್ದು, ನಂತರ ಕೆಲಕಾಲ ಕರ್ನಾಟಕದಲ್ಲಿ ವಸತಿ ಶಾಲೆಯೊಂದಕ್ಕೆ ಹಾಕಿದ್ದರು. ಆಮೇಲೆ ಶಾಲೆಯಿಂದ ಬಿಡಿಸಿ ಆಕೆಯನ್ನು ಮರಳಿ ಮುಂಬೈಗೆ ಕರೆದೊಯ್ದಿದ್ದರು. ಆದರೆ ಅವರಿಗೆ ಆ ಬಳಿಕ ಮಕ್ಕಳಾಗಿದ್ದು, ಅದಾದ ಮೇಲಂತೂ ಪೂಜಾಗೆ ಇನ್ನೂ ನರಕ ಯಾತನೆ ಕೊಡಲಾರಂಭಿಸಿದರು. ಹೊಡೆದು ಬಡಿದು ದುಡಿಸಿಕೊಳ್ಳುತ್ತಿದ್ದರು, ಹಣಕ್ಕಾಗಿ ಪೀಡಿಸುತ್ತಿದ್ದರು. ಏನಾದರೂ ವಿಷಯ ಬಾಯ್ದಿಟ್ಟರೆ ಮತ್ತೆ ಹೊಡೆಯವುದಾಗಿ ಹೆದರಿಸುತ್ತಿದ್ದರು ಎಂಬುದಾಗಿ ಪೂಜಾ ಹೇಳಿಕೊಂಡಿದ್ದಾಳೆ.

ಬಾಲಕಿ ಎಸ್ಕೇಪ್ ಆಗಿರೋ ರೋಚಕ ಟ್ವಿಸ್ಟ್ ಇಲ್ಲಿದೆ!

ಮುಂಬೈನಲ್ಲೇ ಇದ್ದರೂ ಪೂಜಾಗೆ ತನ್ನ ಮನೆಯವರನ್ನು ಸೇರಲು ಆಗಿರಲಿಲ್ಲ, ಪೊಲೀಸರಿಗೂ ಈಕೆಯನ್ನು ಪತ್ತೆ ಹಚ್ಚಲು ಆಗಿರಲಿಲ್ಲ.ಒಂದು ದಿನ ರಾತ್ರಿ ಎಲ್ಲರೂ ಮಲಗಿದ್ದಾಗ ಈಕೆಗೆ ಹ್ಯಾರಿ-ಸೋನಿ ದಂಪತಿಯ ಮೊಬೈಲ್ ಫೋನ್ ಸಿಕ್ಕಿತ್ತು. ಆಗ ಮೊಬೈಲ್‌ಫೋನ್ ಮೂಲಕ ನಾಪತ್ತೆಯಾದ ಹೆಣ್ಣುಮಕ್ಕಳ ಬಗ್ಗೆ ಹುಡುಕಿದಾಗ ತನ್ನ ಬಾಲ್ಯದ ಫೋಟೋಗಳನ್ನು ನೋಡಿ ಈಕೆ ಅಪಹರಣಕ್ಕೀಡಾಗಿದ್ದಾಳೆ ಎಂಬ ವಿಷಯ ಅವಳಿಗೆ ಗೊತ್ತಾಗಿದ್ದೇ ರೋಚಕ. ಅಲ್ಲದೆ, ಅಲ್ಲಿ ಸಂಪರ್ಕಕ್ಕಾಗಿ ನಂಬರ್‌ ನೀಡಲಾಗಿತ್ತು. ಆ ನಂಬರ್ ನೋಟ್ ಮಾಡಿಟ್ಟುಕೊಂಡ ಈಕೆ ಅದೇ ಮನೆಯಲ್ಲಿನ ಕೆಲಸಕ್ಕಿದ್ದ ಪ್ರಮೀಳಾ ದೇವೇಂದ್ರ ಎಂಬಾಕೆಯ ಸಹಾಯದಿಂದ ಕರೆ ಮಾಡಿದ್ದಳು. ಆದರೆ ಅಲ್ಲಿದ್ದ ಮೂರು ನಂಬರ್‌ಗಳಿಗೆ ಕನೆಕ್ಟ್ ಆಗಿರಲಿಲ್ಲ. ಕೊನೆಗೆ ಇನ್ನೊಂದು ನಂಬರ್‌ಗೆ ಕರೆ ಮಾಡಿದಾಗ ಅದು ರಫೀಕ್ ಎಂಬವರಿಗೆ ಕನೆಕ್ಟ್ ಆಗಿತ್ತು. ಅವರು ಪೂಜಾ ತಾಯಿಯ ನೆರೆಮನೆಯವರಾಗಿದ್ದರು. ನಂತರ ತಾಯಿಯೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಎಲ್ಲ ವಿಷಯ ತಿಳಿಸಿದ ಪೂಜಾ, ಇದೇ ಆ. 4ರಂದು ಮನೆ ಸೇರಿಕೊಂಡಿದ್ದಾಳೆ. ಹ್ಯಾರಿ-ಸೋನಿ ದಂಪತಿ ವಿರುದ್ಧ ಅಪಹರಣ, ಬೆದರಿಕೆ, ದೈಹಿಕ ಹಿಂಸೆ ಸೇರಿ ಬಾಲಕಾರ್ಮಿಕ ಕಾನೂನಿನಡಿ ಕೇಸ್ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.ಇದೀಗ ಈ ಕೇಸ್ ಯಶಸ್ವಿಯಾಗಿ 2 ವರ್ಷಗಳು ಕಳೆದಿದೆ,ಮಾಹಿತಿ ಚೆನ್ನಾಗಿತ್ತು… ಹಾಗಾಗಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ.

ಈ ಸುದ್ಧಿ ಓದಿದ್ದೀರಾ:ಏನಿದು ವೈಟ್ ರೂಮ್ ಶಿಕ್ಷೆ! ಕರಾಳ ಶಿಕ್ಷೆಗಳಲ್ಲಿ ಒಂದು

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ