• 8 ಸೆಪ್ಟೆಂಬರ್ 2024

caboose_ballals ಖ್ಯಾತಿಯ ಅಶ್ವಿನಿ ಶೆಟ್ಟಿ ನಿಧನ

 caboose_ballals ಖ್ಯಾತಿಯ ಅಶ್ವಿನಿ ಶೆಟ್ಟಿ ನಿಧನ
Digiqole Ad

caboose_ballals ಖ್ಯಾತಿಯ ಅಶ್ವಿನಿ ಶೆಟ್ಟಿ ನಿಧನ

ಉಡುಪಿಯ ಅಂಬಲಪಾಡಿಯಲ್ಲಿ ನಿನ್ನೆ ಮನೆಗೆ ಬೆಂಕಿ ವ್ಯಾಪಿಸಿ ಗಂಭೀರ ಗಾಯಗೊಂಡಿದ್ದ ಅಶ್ವಿನಿ ಶೆಟ್ಟಿ(50) ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಶ್ವಿನಿ ಪತಿ ರಮಾನಂದ ಶೆಟ್ಟಿ ನಿನ್ನೆ ಸಾವನ್ನಪ್ಪಿದ್ದು ಇದರೊಂದಿಗೆ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಅಶ್ವಿನಿ ಇನ್‌ಸ್ಟಾದಲ್ಲಿ ಸಕ್ರಿಯರಾಗಿದ್ದು caboose_ballals ಪೇಜ್‌ನಿಂದ ಜನಪ್ರಿಯರಾಗಿದ್ದರು. ಹಿರಿಯ ಮಗನೊಂದಿಗೆ ರೀಲ್ಸ್ ಮಾಡಿ ಅಶ್ವಿನಿ ಖ್ಯಾತಿ ಪಡೆದಿದ್ದರು. 90.4K ಫಾಲೋವರ್ಸ್‌ ಹೊಂದಿರುವ ಅಶ್ವಿನಿ ಸಾವು ಗೆದ್ದು ಬರಲೆಂದು ಅನೇಕರು ಪ್ರಾರ್ಥಿಸಿದ್ದರು. ಆದರೆ, ವಿಧಿಯಾಟ ಇಬ್ಬರ ಬದುಕನ್ನು ಕಸಿದುಕೊಂಡಿದೆ . ಬಂಟರ ಸಂಘ, ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿದ್ದು, ತುಳುನಾಡಿನ ಆಚಾರ-ವಿಚಾರಗಳನ್ನು ಬಿಂಬಿಸುವ ವೀಡಿಯೋಗಳನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಿ ಖ್ಯಾತಿ ಗಳಿಸಿದ್ದರು. ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಇನ್ನು ಬೆಂಕಿಯಿಂದ ಮನೆಯೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ