ಪುತ್ತೂರು ಕಬಕದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿದ ಅಧಿಕಾರಿಗಳು.
ಪುತ್ತೂರು ಕಬಕದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿದ ಅಧಿಕಾರಿಗಳು.
ಕಬಕ: ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂವೆತ್ತಿಲ ಎಂಬಲ್ಲಿ ಪಿಕಪ್ ವಾಹನದಿಂದ ರಸ್ತೆ ಬದಿ ಪ್ಲಾಸ್ಟಿಕ್ ಕಸ ಎಸೆಯುತ್ತಿರುವ ಸಂದರ್ಭ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರು ಕಸ ಎಸೆದವರಿಗೆ ಕಬಕ ಗ್ರಾಮ ಪಂಚಾಯತ್ ಮೂಲಕ 3 ಸಾವಿರ ರೂ. ದಂಡ ವಿಧಿಸಿದ ಘಟನೆ ಆ.28 ರಂದು ಸಂಜೆ ನಡೆದಿದೆ.
ಬೆಂಗಳೂರು ಮೂಲದ 3 ಜನ ಕಾರ್ಮಿಕರು ಎಲೆಕ್ಟ್ರಿಕಲ್ ಸಂಬಂಧಿಸಿದ ಕಾಮಗಾರಿಗಳ ಪ್ಲಾಸ್ಟಿಕ್ ಕಸ ಇತ್ಯಾದಿಗಳನ್ನು ಎಸೆಯುತ್ತಿದ್ದ ಸಂರ್ದಭ ಮಂಗಳೂರಿನಿಂದ ಪುತ್ತೂರು ಆಗಮಿಸುತ್ತಿದ್ದ ಅಧಿಕಾರಿಗಳು ನೋಡಿ ಕಸ ಎಸೆದವರಿಗೆ ಕಬಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಅವರ ಮೂಲಕ 3 ಸಾವಿರ ರೂ. ದಂಡ ಹಾಗೂ ಎಸೆದ ಕಸವನ್ನು ಹೆಕ್ಕಿಸುವ ಕಾರ್ಯ ಮಾಡಿದ್ದಾರೆ.
ಈ ಸಂದರ್ಭ ಕಬಕ ಗ್ರಾ.ಪಂ. ಸದಸ್ಯ, ತಾಲುಕು ಪಂಚಾಯತ್ ವಿಷಯ ನಿರ್ವಾಹಕ ಸುರೇಶ್, ಎನ್ ಆರ್ ಎಲ್ ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಕಬಕ ಗ್ರಾ.ಪಂ ಲೆಕ್ಕ ಸಹಾಯಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.