• 22 ನವೆಂಬರ್ 2024

ಬೆರ್ಮರೆಗುಂಡದಲ್ಲಿ ಬೆರ್ಮರ ಪೂಜೆ ಹಾಗೂ ಮೊಗೇರ ದೈವಗಳಿಗೆ ಮಂಜ ಸೇವೆ

 ಬೆರ್ಮರೆಗುಂಡದಲ್ಲಿ ಬೆರ್ಮರ ಪೂಜೆ ಹಾಗೂ ಮೊಗೇರ ದೈವಗಳಿಗೆ ಮಂಜ ಸೇವೆ
Digiqole Ad

ಬೆರ್ಮರೆಗುಂಡದಲ್ಲಿ ಬೆರ್ಮರ ಪೂಜೆ ಹಾಗೂ ಮೊಗೇರ ದೈವಗಳಿಗೆ ಮಂಜ ಸೇವೆ

ಆತ್ಮೀಯರೇ , ತುಳುನಾಡಿನ ಮೂಲ ದೇವರಾದ ಕೆಂಪು ಕೇಪುಲಾಜೆಯ ಜಯೊಲ್ಲ ನಾಗಬಿರ್ಮರ ನೆಲೆ ಬ್ರಹ್ಮರ ಗುಂಡ (ಬಿರ್ಮೆರ ಗುಂಡ – ನಿಡ್ಪಳ್ಳಿ ಗ್ರಾಮ) ಇಲ್ಲಿ ಈಗಾಗಲೇ ಆರಂಭದ ಪ್ರಶ್ನಾ ಚಿಂತನೆ ನಡೆದಿದೆ. ಇದರಲ್ಲಿ ಕಂಡುಬಂದಂತೆ ಮೊಗೇರ ದೈವಗಳಾದ ಮುದ್ದ ಕಳಲರು ಪುಂಡಿ ಪಣವು ಹರಿಕೆ ಸಲ್ಲಿಸಿರುವುದು ಇದೇ ಬಿರ್ಮರಗುಂಡದಲ್ಲಿ , ಐಕ್ಯವಾಗಿರುವುದು ಇದೇ ಬಿರ್ಮರಗುಂಡಿಯಲ್ಲಿ ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಮೊಗೇರ ದೈವಗಳ ಪ್ರೀತ್ಯರ್ಥವಾಗಿ ಮಂಜಸೇವೆ ಯು ನಡೆಯಬೇಕೆಂದು ನಿರ್ಧರಿಸಲಾಗಿದೆ. ಈ ಜಾಗದಲ್ಲಿ ಹಿಂದೆ ಮೊಗೇರ ಬಾಂಧವರಿಂದ ಮಂಜಸೇವೆಯು ನಡೆದಿದ್ದು, ಈಗ ಪ್ರಶ್ನಾ ಚಿಂತನೆಯ ಪರಿಹಾರ ಸಂಬಂಧ 29/9/24 ರಂದು ನಿಡ್ಪಳ್ಳಿಯ ಮೊಗೇರ ಬಾಂಧವರು ಮತ್ತು ಆರು ಜಿಲ್ಲೆಗಳ ಸಮಸ್ತ ಮೊಗೇರ ಬಾಂಧವರ ನೇತೃತ್ವದಲ್ಲಿ ಬಿರ್ಮರ ಪೂಜೆ ಮತ್ತು ಮಂಜಸೇವೆ ನಡೆಯಲಿದೆ. ಇದಕ್ಕೆ ಸಮಸ್ತ ಮೊಗೇರ ಬಾಂಧವರ ಸಹಕಾರವನ್ನು ಬಯಸುತ್ತಿದ್ದೇವೆ. ಈಗಾಗಲೇ ಮಂಜ ಸೇವೆಯ ಕಾಣಿಕೆ ರೂಪದಲ್ಲಿ 101 ರೂಪಾಯಿಗಳ ಸೇವೆ ಕೊಡಬಹುದು ಎಂದು ತಿಳಿಸಲಾಗಿದೆ. ಈ ಕಾಣಿಕೆ ಯು ನಿಶ್ಚಿತವಾಗಿ ಆ ದಿನದ ಶಾಮಿಯಾನ ಇತರ ವೆಚ್ಚಗಳಿಗೆ ಮತ್ತು ಅದೇ ರೀತಿ ಮುಂದಿನ ದಿನಗಳಲ್ಲಿ ಆ ಜಾಗದಲ್ಲಿ ಮುಂದುವರೆಯಲಿರುವ ಪ್ರಶ್ನಾ ಚಿಂತನೆ ಮತ್ತು ಇನ್ನಿತರ ಪರಿಹಾರ ಕಾರ್ಯಗಳಿಗೆ ವಿನಿಯೋಗವಾಗಲಿದೆ. ಈಗಾಗಲೇ ಆದಿ ನಾಗಬ್ರಹ್ಮ ಮೊಗೆರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ನ ಹೆಸರಿನಲ್ಲಿ ಆರು ಜಿಲ್ಲೆಗಳ ಸಂಯುಕ್ತ ವೇದಿಕೆ ಇದಾಗಿರುವುದರಿಂದ ಕೂಪನ್ ಮಾಡಲಾಗಿದೆ. ಸರ್ವ ಮೊಗೇರ ರೂ ಬಂದು ಕೈ ಮುಗಿಯುವಂತಹ ಮೊಗೇರ ರ ಮೂಲ ಕ್ಷೇತ್ರ ಇದಾಗಬೇಕು ಎಂಬುದೇ ನಮ್ಮೆಲ್ಲರ ಪ್ರಯತ್ನ. .ಮುಂದಿನ ದಿನಗಳಲ್ಲಿ ಇಲ್ಲಿ ಆರು ಜಿಲ್ಲೆಯ ಸರ್ವರನ್ನು ಒಳಗೊಂಡ ಅಧ್ಯಯನ ಟ್ರಸ್ಟ್ ಪುನರಚನೆಯಾಗುವುದಿದೆ. ಆಗ ಗೂಗಲ್ ಪೇ, ಬ್ಯಾಂಕ್ ಅಕೌಂಟ್ ಇನ್ನಿತರ ವ್ಯವಸ್ಥೆ ಮಾಡಲಾಗುವುದು. 29 /9/24ರಂದು ಆದಿತ್ಯವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲಾ ಹಿರಿಯ, ಕಿರಿಯ ಬಾಂಧವರು ಭಾಗವಹಿಸಿ, ತಮ್ಮಿಂದಾಗುವ ಸಹಕಾರವನ್ನು ಕೌಂಟರ್ ನಲ್ಲಿ ನೀಡಬೇಕಾಗಿ ವಿನಂತಿ. ಈ ಬಿರ್ಮೆರಗುಂಡ ಎನ್ನುವ ಜಾಗದಲ್ಲಿ ಮುಂದೆ ನಡೆಯಲಿರುವ ಕಾರ್ಯಗಳು ಸರ್ವ ಭಕ್ತರ ಸಹಕಾರದೊಂದಿಗೆ ನಡೆಯುವಂತಹದ್ದು ನಾವು ನಮ್ಮದು ನಮ್ಮೆಲ್ಲರ ದ್ದು ಇದು ಎನ್ನುವ ಪುಣ್ಯ ಭಾವನೆ ಎಲ್ಲರ ಮನಸಿನಲ್ಲಿ ಮೂಡುವಂತೆ ಆಗಲಿ..ಮೊಗೇರ ರ ಮೂಲ ಕ್ಷೇತ್ರ ಬಿರ್ಮೆರ ಗುಂಡ ಆಗುವಂತಹ ಪ್ರಯತ್ನದಲ್ಲಿ ನಮ್ಮೆಲ್ಲರ ಮೊದಲ ಹೆಜ್ಜೆ ಸಾಕಾರವಾಗಲಿ ಎನ್ನುವ ಆಶಯದೊಂದಿಗೆ…ಜೈ ಮೊಗೇರ◊

Digiqole Ad

ಈ ಸುದ್ದಿಗಳನ್ನೂ ಓದಿ