ಮಂಗಳೂರು ವಿ.ವಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ :
ಮಂಗಳೂರು ವಿ.ವಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ :
2024-25ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆವರಣ ಮತ್ತು ಘಟಕ ಕಾಲೇಜುಗಳ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ಅಂಕಗಳು ಹಾಗೂ (ಪರಿಶಿಷ್ಟಜಾತಿ/ ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು), ಯು.ಜಿ.ಸಿ. ಎನ್.ಇ.ಟಿ./ ಎಸ್.ಎಲ್.ಇ.ಟಿ. ಉತ್ತೀರ್ಣತೆ/ಎಂ.ಫಿಲ್/ ಪಿ.ಹೆಚ್.ಡಿ. ಪದವಿ ಪ್ರಮಾಣಪತ್ರ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ವಿಶ್ವವಿದ್ಯಾನಿಲಯದ ಅಧಿಕೃತ website ನಲ್ಲಿ ನೀಡಲಾದ Link http://faculty.mangaloreuniversity.in d ಸಲ್ಲಿಸಬೇಕು.
ಅತಿಥಿ ಉಪನ್ಯಾಸಕರು ಬೇಕಾದ ವಿಷಯಗಳು: ಇಂಗ್ಲೀಷ್ (UG), ಅರ್ಥಶಾಸ್ತ್ರ (PG), ಸಸ್ಯಶಾಸ್ತ್ರ (PG), ಸೈಬರ್ ಸೆಕ್ಯುರಿಟಿ (PG), ಕಂಪ್ಯೂಟರ್ ಸೈನ್ಸ್(UG/PG), ವಾಣಿಜ್ಯ ಶಾಸ್ತ್ರ (PG), (Specilization Finance Mgt) ರಸಾಯನಶಾಸ್ತ್ರ (PG).
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19-11-2024
ಸಂದರ್ಶನ ದಿನಾಂಕ. : 22-11-2024
(ಬೆಳಿಗ್ಗೆ 9 ಗಂಟೆಯಿಂದ ವಿಶ್ವವಿದ್ಯಾನಿಲಯ ಆಡಳಿತ ಸೌಧ, ಮಂಗಳ ಗಂಗೋತ್ರಿಯಲ್ಲಿ ಸಂದರ್ಶನ ನಡೆಯಲಿದೆ.)
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳೊಂದಿಗೆ ಹಾಗೂ ದಾಖಲೆಯ ಜೆರಾಕ್ಸ್ ಪ್ರತಿಗಳೊಂದಿಗೆ ವಿಶ್ವವಿದ್ಯಾನಿಲಯ ಆಡಳಿತ ಸೌಧದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಮತ್ತು ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಯುಜಿಸಿ ನಿಗದಿಪಡಿಸಿದ ಮಾನದಂಡ ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ಆದೇಶದನುಸಾರ ಮಾಡಲಾಗುವುದು.