ಬಲ್ನಾಡು ಅರಿವು ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ , ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ ಮತ್ತು ಡಿಜಿಟಲ್ ಸಾಕ್ಷರತೆ ತರಬೇತಿ ಉದ್ಘಾಟನೆ
ಬಲ್ನಾಡು ಅರಿವು ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ , ಅಂತರಾಷ್ಟ್ರೀಯ ಮಕ್ಕಳ ದಿನಾಚರಣೆ ಮತ್ತು ಡಿಜಿಟಲ್ ಸಾಕ್ಷರತೆ ತರಬೇತಿ ಉದ್ಘಾಟನೆ
ಪುತ್ತೂರು : ಬಲ್ನಾಡು ಅರಿವು ಕೇಂದ್ರದಲ್ಲಿ ಗ್ರಂಥಾಲಯ ಸಪ್ತಾಹ ಹಾಗೂ ಅಂತರರಾಷ್ಟ್ರಿಯ ಮಕ್ಕಳ ದಿನಾಚರಣೆ ಹಾಗೂ ಡಿಜಿಟಲ್ ಸಾಕ್ಷಾರತೆ ತರಬೇತಿ ಉದ್ಘಾಟನಾ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಭಟ್ ಇವರು ದೀಪ ಬೆಳಗಿಸಿ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ಬಗ್ಗೆ ಹಾಗೂ ಡಿಜಿಟಲ್ ಸಾಕ್ಷಾರತೆಯ ಪ್ರಯೋಜನ ಪಡೆದುಕೊಳ್ಳುವ ಬಗ್ಗೆ ತಿಳಿಸಿದರು.
ಪಂಚಾಯತ್ ಉಪಾಧ್ಯಕ್ಷರಾದ ರವಿ ಇವರು ಡಿಜಿಟಲ್ ಸಾಕ್ಷಾರತೆ ವಿಡಿಯೋ ಪ್ಲೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಂಥಾಲಯ ಸಪ್ತಾಹ ಹಾಗೂ ಅಂತರರಾಷ್ಟ್ರಿಯ ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳಿಗೆ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ದೇವಪ್ಪ ಪಿ. ಆರ್. ಕಾರ್ಯದರ್ಶಿ ಲಕ್ಷ್ಮಿ ಹಾಗೂ ಪಂ. ಸದಸ್ಯರಾದ ಶ್ರೀಮತಿ ವಿನಯ, ಹಾಗೂ ಶಾಲಾ ಶಿಕ್ಷರಾದ ಸೀತಾ, ಸುಮತಿ ಹಾಗೂ ಸ್ವ ಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆ, ಪಂಚಾಯತ್ ಸಿಬ್ಬಂದಿಗಳು, ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಸುಜಾತ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.