• 21 ನವೆಂಬರ್ 2024

ಶಿಕ್ಷಣ ಫೌಂಡೇಶನ್ ನಿಂದ ಸೌರ ದೀಪ ವಿತರಣೆ

 ಶಿಕ್ಷಣ ಫೌಂಡೇಶನ್ ನಿಂದ ಸೌರ ದೀಪ ವಿತರಣೆ
Digiqole Ad

ಶಿಕ್ಷಣ ಫೌಂಡೇಶನ್ ನಿಂದ ಸೌರ ದೀಪ ವಿತರಣೆ

ಶಿಕ್ಷಣ ಫೌಂಡೇಶನ್ ವತಿಯಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಸಲುವಾಗಿ ಸೌರದೀಪಗಳನ್ನು ವಿತರಿಸಲಾಯಿತು. ಕೆಪಿಎಸ್ ಕೆಯ್ಯೂರು ಪ್ರೌಢಶಾಲಾ ವಿಭಾಗದ 19 ವಿದ್ಯಾರ್ಥಿನಿಯರಿಗೆ ಈ ಸೌರದೀಪಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ವಿನೋದ್ ಕುಮಾರ್ ರವರು ಮಾತನಾಡಿ ಫಲಾನುಭವಿ ವಿದ್ಯಾರ್ಥಿನಿಯರು ಮುಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದರ ಮೂಲಕ ಈ ಸೌರದೀಪಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಹಾಗೂ ಶಿಕ್ಷಣ ಫೌಂಡೇಶನ್ ನ ಇನ್ನಿತರ ಶೈಕ್ಷಣಿಕ ಹಾಗೂ ಸಮುದಾಯದ ಕಾರ್ಯಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಜಯರಾಮ್ ರೈ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕಿಯವರಾದ ಶ್ರೀಮತಿ ಸುಮತಿಯವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಬಲವರ್ಧನೆಗಾಗಿ ಹಾಗೂ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಶಿಕ್ಷಣ ಫೌಂಡೇಶನ್ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳನ್ನು ನೀಡುತ್ತಿದ್ದು, ಅವುಗಳಲ್ಲಿ ಶಿಕ್ಷಣ ಪೀಡಿಯ ಅಪ್ಲಿಕೇಶನ್ ಒದಗಿಸಿದ್ದು ಅದರಲ್ಲಿ ಪ್ರೌಢಶಾಲಾ ವಿಭಾಗದ ರಾಜ್ಯ ಪಠ್ಯಕ್ರಮದ ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದ ಶೈಕ್ಷಣಿಕ ವಿಷಯಗಳು ಲಭ್ಯವಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರು ಕೆಯ್ಯೂರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿಯವರಾದ ಕು. ಅನುಷಾ ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ