ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆ!
ಸರಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆ!
ಸರಕಾರಿ ಕಚೇರಿಗಳಲ್ಲಿ ತ್ವರಿತವಾಗಿ ಕೆಲಸ ನಡೆಯಬೇಕು ಎಂಬ ಬಗ್ಗೆ ಸರಕಾರವು ಸಕಾಲ ಸೇರಿದಂತೆ ಅನೇಕ ಉತ್ತರದಾಯಿ ವ್ಯವಸ್ಥೆಗಳನ್ನು ಮಾಡಿದೆ. ಆದರೆ, ಇಲಾಖೆಗಳು ಸಕಾಲದಲ್ಲಿ ಸೇವೆ ನೀಡಲು ಆವಶ್ಯಕವಾಗಿರುವ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಅಸಡ್ಡೆ ವಹಿಸಿದೆ. ಸಿಬ್ಬಂದಿಯ ಕೊರತೆಯಿಂದಾಗಿ ಜನರಿಗೆ ಸರಿಯಾದ ಸೇವೆ ದೊರೆಯುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಿಬಂದಿ ಕೊರತೆಯ ಹೊರೆ ಇರುವ ಸಿಬಂದಿ ಮೇಲೆ ಬಿದ್ದು ಅವರೂ ಹತಾಶೆಯ ಹಂತ ತಲುಪಿದ್ದಾರೆ. ಕೆಲಸದ ಒತ್ತಡ ನಿಭಾಯಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ ಸಿಬ್ಬಂದಿಯ ಕೊರತೆ ಮೇಲುಗೈ ಸಾಧಿಸಿದೆ.
ಸಹಾಯಕ ಕೃಷಿ ನಿರ್ದೇಶಕರ ಕಚೇರಿ
ಮಂಜೂರಾತಿ ಹುದ್ದೆ : 27
ಖಾಲಿ ಇರುವ ಹುದ್ದೆ : 23
ಕೊರತೆ ಪ್ರಮಾಣ: 85.18 ಶೇ.
ಖಾಲಿ ಇರುವ ಪ್ರಮುಖ ಹುದ್ದೆಗಳು: ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಖಾಲಿ ಇವೆ.
ಮುಖ್ಯಾಂಶ: ಕೃಷಿಕರಿಗೆ ಸಬ್ಸಿಡಿ ರೂಪದಲ್ಲಿ ಬರುವ ಬಹುತೇಕ ಸವಲತ್ತುಗಳು ಇಲ್ಲಿಯೇ ವಿಲೇ ಆಗುವುದು ಇಲ್ಲಿ. ತಾಲೂಕು ವ್ಯಾಪ್ತಿಗೆ ಇರುವ ಇಲಾಖೆಯ ಪ್ರಮುಖ ಹುದ್ದೆ ಸಹಾಯಕ ಕೃಷಿ ನಿರ್ದೇಶಕ. ಈ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿ ನೇಮಕ ಆಗಿಲ್ಲ. 5 ಕೃಷಿ ಅಧಿಕಾರಿ ಹುದ್ದೆಯಲ್ಲಿ 4, 11 ಸಹಾಯಕ ಕೃಷಿ ಅಧಿಕಾರಿ ಹುದ್ದೆಯಲ್ಲಿ 10 ಖಾಲಿ ಇದೆ. ಅಂದರೆ ಕ್ಷೇತ್ರ ಸಂಚಾರಕ್ಕೆ ಇಲ್ಲಿ ಅಧಿಕಾರಿಗಳ ಸಂಖ್ಯೆಯೇ ಶೂನ್ಯ. ಎಫ್‌ಡಿಎ, ಬೆರಳಚ್ಚುಗಾರ, ವಾಹನ ಚಾಲಕ, ಗ್ರೂಪ್ ಡಿ ಎಲ್ಲ ಹುದ್ದೆಗಳು ಖಾಲಿ ಇವೆ.