ಅದೃಷ್ಟದಾಟ,ಗೆಳೆಯರ ಕಥೆ!
ಅದೃಷ್ಟದಾಟ,ಗೆಳೆಯರ ಕಥೆ!ಒಂದೂರಿನಲ್ಲಿ ಸೋಂಪ ಮತ್ತು ರಾಂಪ ಎಂಬ ಇಬ್ಬರು ಗೆಳೆಯರಿದ್ದರು… ತುಂಬಾ ಬಡತನದಲ್ಲಿ ಇದ್ದರೂ. ಇವರ ಗೆಳತನಕೆ ಬಡತನ ಎಂದೂ ಬಂದಿರಲಿಲ್ಲ… ತಮ್ಮ ದಾರಿದ್ರ್ಯದ ಬಗ್ಗೆ ದಿನಾ ಮಾತಾಡುತ್ತ ಸುಖದ ಬದುಕಿನ ಬಗ್ಗೆ ಕನಸು ಕಾಣುತ್ತಾ ದಿನ ಸಾಗಿಸುತ್ತಿದ್ದರು.. ಇವರು ಇದ್ದ ಜಾಗದಿಂದ್ದ ಸ್ವಲ್ಪ ದೂರದಲ್ಲೆ ಒಂದು ಸಣ್ಣ ಗುಡ್ಡ ಕಾಣಿಸುತ್ತಿತ್ತು .. ಆ ಗುಡ್ಡದ ಮೇಲೊಂದು ಹಳೇಯ ಪಾಳುಬಿದ್ದ ದೇವರ ಗುಡಿ .. ರಾಂಪ ಸೋಂಪ. ತಮ್ಮ ದಿನದ ಕೆಲಸ ಮುಗಿಸಿ ಸಂಜೆ ಹೊತ್ತಿಗೆ ಸ್ನಾನ ಮಾಡಿ. ಈ ಪಾಳುಬಿದ್ದ ಗುಡಿಯ ಹತ್ತಿರ ಬಂದು ಅಲ್ಲಿ ಕುಳಿತು ಕೊಂಡು ತಮ್ಮ ತಮ್ಮ ಕನಸುಗಳ ಬಗ್ಗೆ ಮಾತಾಡುವ ಅಭ್ಯಾಸ.. ರಾತ್ರಿಯಾಗುತ್ತಿದ್ದಂತೆ ದೇವರಿಗೆ ನಮಸ್ಕರಿಸಿ ಬಡತನವನ್ನು ಗೆಲ್ಲುವ ಶಕ್ತಿ ಕೊಡು ತಂದೇ ಎಂದು ಬೇಡಿಕೊಂಡು ಮನೆ ಕಡೆ ಹೊರಡುವರು… ಇಬ್ಬರಿಗೂ ನಂಬಿಕೆ… ಸೃಷ್ಟಿಸಿದ ಭಗವಂತ ಯಾವತ್ತೂ ಕೈ ಬಿಡಲ್ಲ ಎಂದು.. ಅದೇ ನಂಬಿಕೆಯಿಂದ ದಿನಾ ಸಾಯಂಕಾಲ ಗುಡಿಯ ಮುಂದೆ ನಿಂತು ಪ್ರಾರ್ಥಿಸುತ್ತಾರೆ… ಎಂದಿನಂತೆ ಒಂದು ದಿನ ಗುಡ್ಡ ಇಳಿದು ಬರುವಾಗ ರಾಂಪ ಕಾಲು ಜಾರಿ ಬಿದ್ದ… ಕೂಡಲೇ ಸೋಂಪ ಅವನನ್ನು ಹಿಡಿದು ಎಬ್ಬಿಸಿ ಕುಳ್ಳಿರಿಸಿದ.. ಆಗ ರಾಂಪ ಹೇಳ್ತಾನೆ.. ಸೊಂಪ ನಾಳೆ ನಾವು ಬರುವಾಗ. ಹಾರೆ ಪಿಕಾಸು ತರುವ.. ಇಲ್ಲಿ ಮಣ್ಣು ಅಗೆದು ಸಣ್ಣ ಮೆಟ್ಟಿಲು ಮಾಡುವ.. ಇಲ್ಲಿ ಮೆಟ್ಟಿಲು ಮಾಡಿದ್ರೆ ಗುಡಿಯ ಹತ್ತಿರ ಹೋಗುವವರಿಗೆ ತುಂಬಾ ಅನುಕೂಲ ಆಗಬಹುದು ಎಂದಾಗ ಸೋಂಪ ಆಗಲಿ ಎಂದು ಒಪ್ಪಿಕೊಳ್ಳುವನು… ಮರುದಿನ ಸಂಜೆ ಮೆಟ್ಟಿಲಿನ ಕೆಲಸ ಪ್ರಾರಂಭ ಮಾಡಿದ್ರು.. ಹೀಗೆ ತುಂಬಾ ಮೆಟ್ಟಿಲು ಆಯಿತು ಕಡೇಯ ಮೇಲಿನ ಮೆಟ್ಟಿಲು ಮಾಡಲು ಪಿಕಾಸು ಹಾಕಿದಾಗ. ಪಿಕಾಸಿಗೆ ಕಲ್ಲು ತಾಗಿದಾಗೆ ಆಯಿತು.. ಅಯ್ಯೋ. ಇಷ್ಟು ಚಂದವಾಗಿ ಅಷ್ಟೊಂದು ಮೆಟ್ಟಿಲನ್ನು ಮಾಡುತ್ತಾ ಬಂದೆವು.. ಇಲ್ಲಿಗೆ ಮುಟ್ಟುವಾಗ ಕಲ್ಲು ಅಡ್ಡ ಸಿಕ್ಕಿತ್ತಲ್ಲಾ ವೆಂದು ರಾಂಪ ಹೇಳಿದ.. ನೋಡು ರಾಂಪ ನಾವು ಕಲ್ಲನ್ನು ತೆಗೆದು ಮತ್ತೆ ಮೆಟ್ಟಿಲು ಮಾಡುವ.. ಇಲ್ಲಾಂದ್ರೆ ನಾವು ಮಾಡಿದ ಕೆಲಸಕ್ಕು ಬೆಲೆ ಇಲ್ಲ. ಎನ್ನುತ್ತಾ ಸೋಂಪ ಪಿಕಾಸಿನಿಂದ್ದ ಸುತ್ತ ಅಗೆಯುವನು.. ರಾಂಪ ಹಾರೆಯಿಂದ ಮಣ್ಣು ತೆಗೆದು ನೋಡುವಾಗ. ಅಲ್ಲಿ ಎರಡು ಕಲ್ಲು ಕಾಣಿಸುತ್ತಿತ್ತು… ಸೊಂಪ ಆ ಕಲ್ಲಿನ ಅಡಿಗೆ