• 23 ನವೆಂಬರ್ 2024

ಹವ್ಯಾಸಗಳು (Hobby)

 ಹವ್ಯಾಸಗಳು (Hobby)
Digiqole Ad

ಹವ್ಯಾಸಗಳು

ಅಭಿರುಚಿಯ ಅನಾವರಣ ಹವ್ಯಾಸ
ಬೆಳೆಯಲು ಮೂಡುವುದು ಮಂದಹಾಸ
ಮನದೊಳು ಶಾಂತಿ ನೆಮ್ಮದಿ ವಾಸ

ಉತ್ತಮ ಹವ್ಯಾಸ ಚಿಂತಾ ನಾಶಕ
ರೋಗ ರುಜಿನಕೆ ಸಂಜೀವಿನಿದಾಯಕ
ಕೆಟ್ಟ ಚಟವ ನಿಲ್ಲಿಸೋ ಕಾಯಕ

ವಿಧ ವಿಧ ವಿಧ ಹವ್ಯಾಸವಿಹುದು
ತೊಡಗಲು ಸುಜ್ಞಾನ ಬೆಳೆವುದು
ಬಿಡುವಿನ ವೇಳೆ ಪೂರ್ಣವಾಗುವುದು

ಇರಲಿ ಮಗುವೇ ನಿನಗೊಳ್ಳೆ ಹವ್ಯಾಸ
ನಿತ್ಯ ನಿರಂತರ ಸ್ವಬೆಳೆವ ಸಾಹಸ
ಸ್ವಸ್ಥ ಸಮಾಜ ನಿರ್ಮಿಸು ಮನಸಾ

ಪರಿಮಳ ಎನ್ ಎಂ ಐವರ್ನಾಡು ಸುಳ್ಯ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ