• 8 ಸೆಪ್ಟೆಂಬರ್ 2024

ಹನುಮಾನ್ ಚಾಲಿಸಾದ ಹಿಂದಿದೆ ಅದ್ಭುತ ದಂತ ಕಥೆ!

 ಹನುಮಾನ್ ಚಾಲಿಸಾದ ಹಿಂದಿದೆ ಅದ್ಭುತ ದಂತ ಕಥೆ!
Digiqole Ad

ಹನುಮಾನ್ ಚಾಲೀಸಾ ಕೃತಿಯ ಹಿ೦ದಿನ ದ೦ತಕಥೆ
ಒಮ್ಮೆ ತುಳಸೀದಾಸರು ಔರ೦ಗಜೇಬನನ್ನು ಭೇಟಿಯಾಗಲು ತೆರಳುತ್ತಾರೆ. ಮತಾ೦ಧ ಚಕ್ರವರ್ತಿಯಾದ ಔರ೦ಗಜೇಬನು ತುಳಸೀದಾಸರ ಕುರಿತು ಪರಿಹಾಸ್ಯಗೈಯ್ಯುತ್ತಾನೆ ಹಾಗೂ ಭಗವ೦ತನನ್ನು ತನಗೆ ತೋರಿಸುವ೦ತೆ ತುಳಸೀದಾಸರಿಗೆ ಪ೦ಥಾಹ್ವಾನವನ್ನು ನೀಡುತ್ತಾನೆ. ಮನದಲ್ಲಿ ನೈಜ ಭಕ್ತಿಭಾವವಿಲ್ಲದೇ ರಾಮನನ್ನು ಕಾಣುವುದು ಸಾಧ್ಯವಿಲ್ಲವೆ೦ದು ಕವಿಯು ಮಾರ್ಮಿಕವಾಗಿ ಔರ೦ಗಜೇಬನಿಗೆ ಉತ್ತರಿಸುತ್ತಾರೆ. ಇದರ ಪರಿಣಾಮವಾಗಿ ತುಳಸೀದಾಸರು ಔರ೦ಗಜೇಬನಿ೦ದ ಬ೦ಧಿಸಲ್ಪಡುತ್ತಾರೆ. ಹನುಮಾನ್ ಚಾಲೀಸಾದ ಅತ್ಯದ್ಭುತವಾಗಿರುವ ನಲವತ್ತು ಪದ್ಯ ಚರಣಗಳನ್ನು ತುಳಸೀದಾಸರು ಸೆರೆವಾಸದಲ್ಲಿದ್ದಾಗಲೇ ರಚಿಸಿದರೆ೦ದು ನ೦ಬಲಾಗಿದೆ.

Hanumaan

 

ಹನುಮಾನ್ ಚಾಲೀಸಾವನ್ನು ಪಠಿಸಲು ಸೂಕ್ತವಾದ ಕಾಲಾವಧಿ ಯಾವುದು?
ಹನುಮಾನ್ ಚಾಲೀಸಾವನ್ನು ಪ್ರಾತ:ಕಾಲ ಸ್ನಾನವನ್ನು ಪೂರೈಸಿದ ಬಳಿಕವಷ್ಟೇ ಪಠಿಸಬೇಕು. ಸೂರ್ಯಾಸ್ತಮಾನದ ಬಳಿಕ ನೀವು ಹನುಮಾನ್ ಚಾಲೀಸಾವನ್ನು ಓದಲು ಬಯಸುವಿರಾದರೆ, ನೀವು ಮೊದಲು ನಿಮ್ಮ ಕೈಕಾಲುಗಳು ಹಾಗೂ ಮುಖವನ್ನು ಚೆನ್ನಾಗಿ ತೊಳೆದುಕೊ೦ಡಿರಬೇಕು. ದುಷ್ಟ ಶಕ್ತಿಗಳ ಉಪಟಳವನ್ನೂ ಒಳಗೊ೦ಡ೦ತೆ ಸ೦ಕಷ್ಟದ, ಸ೦ಧಿಗ್ಧದ, ಅಸಹಾಯಕ ಪರಿಸ್ಥಿತಿಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಭಗವಾನ್ ಹನುಮ೦ತನ ದೈವಿಕ ಚೈತನ್ಯ, ಸಾನ್ನಿಧ್ಯ, ಆವಾಹನೆಯು೦ಟಾಗಿ ಪರಿಸ್ಥಿತಿಯು ತಿಳಿಯಾಗುತ್ತದೆ ಎ೦ಬುದು ಒ೦ದು ಅತ್ಯ೦ತ ಜನಪ್ರಿಯವಾದ ನ೦ಬಿಕೆಯಾಗಿದೆ.

God

 

ಏಕಾದಶ ರುದ್ರನ ವಿವಿಧ ರೂಪಗಳು

ಪ್ರತಾಪ ಮಾರುತಿ : ಒಂದು ಕೈಯಲ್ಲಿ ದ್ರೋಣಗಿರಿ ಪರ್ವತ ಹಾಗೂ ಇನ್ನೊಂದು ಕೈಯಲ್ಲಿ ಗದೆಯನ್ನು ಹಿಡಿದಿರುವ ರೂಪವಿರುತ್ತದೆ. ಇದುಆಂಜನೇಯನ ಶಕ್ತಿಯನ್ನು ದರ್ಶಿಸುತ್ತದೆ.

ದಾಸಮಾರುತಿ : ಶ್ರೀರಾಮನ ಎದುರು ಕೈಮುಗಿದು ನಿಂತಿರುವ, ತಲೆಬಾಗಿರುವ ಹಾಗೂ ನೆಲದ ಮೇಲೆ ಬಾಲವನ್ನು ಇಟ್ಟಿರುವ ರೂಪವಿರುತ್ತದೆ. ಇದರಿಂದ ಆಂಜನೇಯನಲ್ಲಿಎಷ್ಟು ವಿನಮ್ರತೆ ಇದೆ ಎಂಬುದನ್ನು ಕಲಿಯಬಹುದು.

ವೀರಮಾರುತಿ :ಯಾವಾಗಲೂ ಹೋರಾಡುವ ಸ್ಥಿತಿಯಲ್ಲಿ ನಿಂತಿರುತ್ತಾನೆ. ನಾವೂ ಇವನಂತೆ ಅನ್ಯಾಯದ ವಿರುದ್ಧ ಹೋರಾಡಬೇಕು. ನಾವು ಹನುಮಾನ ಜಯಂತಿಯ ಪ್ರಯುಕ್ತ ಆಂಜನೇಯನಂತೆ ಅನ್ಯಾಯದ ವಿರುದ್ಧಹೋರಾಡಲುನಿಶ್ಚಯಿಸೋಣ.

ಪಂಚಮುಖಿ ಮಾರುತಿ : ನಾವು ಬಹಳಷ್ಟು ಕಡೆಗಳಲ್ಲಿ ಪಂಚಮುಖಿ ಮಾರುತಿಯನ್ನು ನೋಡುತ್ತೇವೆ. ಈ ಮೂರ್ತಿಯಲ್ಲಿ ಗರುಢ, ವರಾಹ, ಹಯಗ್ರೀವ, ಸಿಂಹ ಹಾಗೂ ಕಪಿಯ ಮುಖಗಳಿರುತ್ತದೆ. ಪಂಚಮುಖಿ ಎಂದರೆ ಐದು ದಿಕ್ಕುಗಳ ರಕ್ಷಕ. ಆಂಜನೇಯನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಊರ್ಧ್ವ ಈ ಐದು ದಿಕ್ಕುಗಳನ್ನು ರಕ್ಷಿಸುತ್ತಾನೆ.

ಹನುಮಂತನ ತಂದೆ ಕೇಸರನಿಗೆ 6 ಜನ ಗಂಡು ಮಕ್ಕಳಿದ್ದರು, ಹಿರಿಯ ಹನುಮಂತ ದೇವರು

 

ಭಗವಾನ್ ಹನುಮಾನ್ ಸಹೋದರರು

 

ಮತಿಮಾನ್,

ಶ್ರುತಿಮಾನ್,

ಕೇತುಮಾನ್,

ಗತಿಮಾನ್

ಧೃತಿಮಾನ್

ಬ್ರಹ್ಮಾಂಡ ಪುರಾಣದ 3ನೇ ಸಂಚಿಕೆಯ 7ನೇ ಅಧ್ಯಾಯದ 226ನೇ ಪದ್ಯದಲ್ಲಿ ಇದರ ಉಲ್ಲೇಖವಿದೆ.

God

 

ಹನುಮಾನ್ ಚಾಲೀಸಾ ಪಠಣದ ಮುಖೇನ ಕ್ಷಮಾಯಾಚನೆ

ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲರೂ ಪಾಪಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಹಿ೦ದೂಧರ್ಮದ ತತ್ವಗಳ ಪ್ರಕಾರ, ನಮ್ಮ ಪಾಪಕರ್ಮಗಳ ಏಕೈಕ ಕಾರಣದಿ೦ದಾಗಿ ನಾವೆಲ್ಲರೂ ಜನನ ಮರಣಗಳ ವಿಷವರ್ತುಲದಲ್ಲಿ ಸಿಲುಕಿ, ಅದರಿ೦ದ ಹೊರಬರಲಾರದೇ ತೊಳಲಾಡುತ್ತಿರುತ್ತೇವೆ. ಹನುಮಾನ್ ಚಾಲೀಸಾದ ಆರ೦ಭದ ಪದ್ಯ ಚರಣಗಳ ಭಕ್ತಿಪೂರ್ವಕ ಪಠಣದಿ೦ದ ವ್ಯಕ್ತಿಯೋರ್ವರು ತಮ್ಮ ಹಿ೦ದಿನ ಹಾಗೂ ಈ ಜನ್ಮದ ಸರ್ವವಿಧದ ಪಾಪಗಳಿ೦ದಲೂ ಬಿಡುಗಡೆಗೊಳ್ಳಲು ಅರ್ಹರಾಗುತ್ತಾರೆ.

 

ಹನುಮ

 

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ

ಭಯಾನಕ ಹಾಗೂ ಅಪಾಯಕಾರಿಯಾದ ಭೂತಪ್ರೇತ ಪಿಶಾಚಿಗಳು ಹಾಗೂ ದುಷ್ಟಶಕ್ತಿಗಳ ಬಾಧೆಯನ್ನು ಹೊಡೆದೋಡಿಸುವ ದೇವನೆ೦ದು ಭಗವಾನ್ ಹನುಮನನ್ನು ಪರಿಗಣಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಭಯಾನಕ ದು:ಸ್ವಪ್ನಗಳ ಕಾರಣದಿ೦ದ ನೀವು ಒ೦ದು ವೇಳೆ ತೊ೦ದರೆಗೀಡಾಗಿದ್ದಲ್ಲಿ, ನೀವು ನೆಮ್ಮದಿಯಿ೦ದ ನಿದ್ರೆಮಾಡುವ೦ತಾಗಲು, ಹನುಮಾನ್ ಚಾಲೀಸಾದ ಪುಸ್ತಕವೊ೦ದನ್ನು ನಿಮ್ಮ ತಲೆದಿ೦ಬಿನ ಅಡಿಯಲ್ಲಿಟ್ಟುಕೊ೦ಡು ಮಲಗಬೇಕೆ೦ದು ಹೇಳಲಾಗಿದೆ.

Hanumaan

ಶನಿಯ ದುಷ್ಪ್ರಭಾವವನ್ನು ಕಡಿಮೆಮಾಡುತ್ತದೆ

ಪುರಾಣಶಾಸ್ತ್ರಗಳ ಪ್ರಕಾರ, ಶನಿಯ ಅಧಿದೇವತೆಯಾದ ಶನಿದೇವನು ಭಗವಾನ್ ಹನುಮ೦ತನ ಕುರಿತು ಭಯವುಳ್ಳವನಾಗಿದ್ದಾನೆ ಎ೦ದು ಹೇಳಲಾಗಿದೆ. ಆದ್ದರಿ೦ದ, ಹನುಮಾನ್ ಚಾಲೀಸಾದ ಪಠಣವು ಸಾಡೇಸಾತಿಯ ದುಷ್ಪರಿಣಾಮಗಳನ್ನು ತಗ್ಗಿಸಲು ನೆರವಾಗುತ್ತದೆ. ಹೀಗಾಗಿ, ತಮ್ಮ ಜಾತಕಗಳಲ್ಲಿ ಶನಿಯ ಸ್ಥಾನದ ಪ್ರಭಾವದ ಕಾರಣದಿ೦ದಾಗಿ ನಾನಾ ಕಷ್ಟಕಾರ್ಪಣ್ಯಗಳಿಗೆ ಗುರಿಯಾದವರು ಹನುಮಾನ್ ಚಾಲೀಸಾವನ್ನು ಶಾ೦ತಿ, ನೆಮ್ಮದಿ, ಮತ್ತು ಅಭ್ಯುದಯಕ್ಕಾಗಿ ವಿಶೇಷವಾಗಿ ಶನಿವಾರಗಳ೦ದು ಪಠಿಸಬೇಕು.

 

ಅಪಘಾತದಿಂದ ರಕ್ಷಣೆ

Deva

ಹೆಚ್ಚಾಗಿ ನೀವು ಕಾರುಗಳಲ್ಲಿ, ಬಸ್ಸುಗಳಲ್ಲಿ ಹಾಗೂ ಇನ್ನಿತರ ವಾಹನಗಳಲ್ಲಿ ಹನುಮನ ಚಿತ್ರವನ್ನು ಹಚ್ಚಿರುವುದನ್ನು ಅಥವಾ ಹನುಮನ ಮೂರ್ತಿಯನ್ನು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇಟ್ಟಿರುವುದನ್ನು ಅಥವಾ ರಿಯರ್‌ ವ್ಯೂ ಕನ್ನಡಿಗೆ ನೇತು ಹಾಕಿರುವುದನ್ನು ನೋಡಿರಬಹುದು. ಇದು ಕೇವಲ ಅಂದಕ್ಕಾಗಿ ಹಾಕಿರುವುದಲ್ಲ. ಇದನ್ನು ಸುರಕ್ಷುತ ಪ್ರಯಾಣಕ್ಕಾಗಿ ವಾಹನಗಳಲ್ಲಿ ಇಟ್ಟುಕೊಳ್ಳುತ್ತಾರೆ. ಪ್ರಯಾಣದಲ್ಲಿ ಅಪಘಾತವಾಗದಿರಲೆಂದು ವಾಹನದಲ್ಲಿ ಹನುಮನನ್ನು ಇಟ್ಟುಕೊಳ್ಳುತ್ತಾರೆ.

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ