ವಿಶ್ವದ ಅತ್ಯಂತ ಆಳವಾದ ಕೊಳವೆಬಾವಿ – ಚೀನಾ
ವಿಶ್ವದ ಅತ್ಯಂತ ಆಳವಾದ ಕೊಳವೆಬಾವಿ – ಚೀನಾ
ಚೀನಾದಲ್ಲಿ 10KM ಆಳದ ಬೋರ್‌ವೆಲ್
ಭೂಮಿಯೊಳಗಿನ ಸ್ಥಿತಿಗತಿಗಳನ್ನು ಪತ್ತೆ ಹಚ್ಚಲು ಚೀನಾ ಬೃಹತ್ ಯೋಜನೆಯೊಂದನ್ನು ಆರಂಭಿಸಿದೆ. ಕ್ಸಿನ್‌ಜಿಯಾಂಗ್ ಪ್ರಾಂತ್ಯದ ತಾರಿಮ್ ಜಲಾನಯನ ಪ್ರದೇಶದಲ್ಲಿ 10KM ಆಳಕ್ಕೆ ಬೋರ್‌ವೆಲ್ ಕೊರೆಯಲಾಗುತ್ತಿದೆ. ಭೂಮಿಯ ಜನನ, ಸಮಯದ ಬದಲಾವಣೆಗಳು ಮತ್ತು ಜ್ವಾಲಾಮುಖಿ ಸ್ಫೋಟಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏತನ್ಮಧ್ಯೆ, ರಷ್ಯಾದಲ್ಲಿ 12,262 ಮೀ ಬೋರ್‌ವೆಲ್ ಅಗೆಯಲಾಗಿದೆ. ಇದು ವಿಶ್ವದ ಅತ್ಯಂತ ಆಳವಾದ ಕೊಳವೆಬಾವಿಯಾಗಿದೆ.
ನೆಲದಾಳಕ್ಕೆ ರಂಧ್ರ! ಕಾರಣ ಏನು?
ಭೂ ಗರ್ಭಕ್ಕೆ ಚೀನಾ ದೇಶದ ವಿಜ್ಞಾನಿಗಳು ರಂಧ್ರ ಕೊರೆಯುತ್ತಿರೋದು ಏಕೆ ಎಂಬ ಪ್ರಶ್ನೆಗೆ ಚೀನಾ ದೇಶ ಸ್ಪಷ್ಟ ಉತ್ತರ ನೀಡಿಲ್ಲ. ಭೂಮಿಯ ಒಳ ಭಾಗದ ಅಧ್ಯಯನ ದೃಷ್ಟಿಯಿಂದ ಈ ಸಂಶೋಧನೆ ಕೈಗೊಳ್ಳಲಾಗುತ್ತಿದೆ ಎಂದಷ್ಟೇ ಮಾಹಿತಿ ಲಭ್ಯವಾಗಿದೆ. ಆದ್ರೆ, ಚೀನಾ ದೇಶದಲ್ಲಿ ಪೆಟ್ರೋಲಿಯಂ ತೈಲ ಸಂಪದ್ಭರಿತವಾದ ಕ್ಸಿಜಿಯಾಂಗ್ ಪ್ರಾಂತ್ಯದಲ್ಲೇ ಈ ಭೂ ಗರ್ಭ ಕೊರೆಯುವ ಯೋಜನೆ ನಡೆಯುತ್ತಿದೆ. ಹಾಗಾಗಿ ಈ ಯೋಜನೆಯ ಕುರಿತಾದ ಕುತೂಹಲಗಳು ಹೆಚ್ಚಾಗಿವೆ. ಕಳೆದ ಮಂಗಳವಾರವಷ್ಟೇ ಗೋಭಿ ಮರುಭೂಮಿಯಿಂದ ರಾಕೆಟ್ ಉಡಾಯಿಸಿದ್ದ ಚೀನಾ, ತನ್ನ ದೇಶದ ಮೊಟ್ಟ ಮೊದಲ ನಾಗರಿಕ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ರವಾನಿಸಿತ್ತು. ಆಗಸದತ್ತ ದೃಷ್ಟಿ ನೆಟ್ಟಿದ್ದ ಮರು ದಿನವೇ ಚೀನಾ, ನೆಲದಾಳಕ್ಕೆ ಕಣ್ಣು ಹಾಕಿದೆ.
ನೆಲದ ಆಳಕ್ಕೆ ರಂಧ್ರ ಕೊರೆಯೋದು ತುಂಬಾನೇ ಸಂಕೀರ್ಣ ಪ್ರಕ್ರಿಯೆ. ಈ ಹಂತದಲ್ಲಿ ರಂಧ್ರ ಕೊರೆಯುವ ಯಂತ್ರಕ್ಕೆ 10 ಖಂಡಗಳ ಶಿಲಾ ಪದರಗಳು ಸಿಗುತ್ತವೆ ಎಂದು ತಜ್ಞರು ವಿವರಿಸುತ್ತಾರೆ. 145 ದಶಲಕ್ಷ ವರ್ಷಗಳಷ್ಟು ಹಿಂದಿನ ಶಿಲಾ ಪದರಗಳನ್ನು ಕೊರೆದ ನಂತರ ಭೂಮಿಯ ಒಳ ಪದರವನ್ನು ತಲುಪಬಹುದಾಗಿದೆ. ಇದು ನಿಜಕ್ಕೂ ಸಂಕೀರ್ಣ ಹಾಗೂ ಅತಿ ಕಠಿಣವಾದ ಪ್ರಯೋಗ ಎನ್ನುತ್ತಾರೆ, ಚೀನಾದ ಎಂಜಿನಿಯರಿಂಗ್ ಅಕಾಡೆಮಿ ವಿಜ್ಞಾನಿ ಸುನ್ ಜಿಸೆಂಗ್. ಭೂಮಿಯ ಆಳಕ್ಕೆ ರಂಧ್ರ ಕೊರೆಯೋದು ಅಂದ್ರೆ, ತಂತಿಯ ಮೇಲೆ ಲಾರಿ ಓಡಿಸಿದಂತೆ ಎಂದು ಅವರು ಬಣ್ಣಿಸುತ್ತಾರೆ.
ಚೀನಾ ದೇಶವು ಹಲವು ವರ್ಷಗಳ ಹಿಂದೆಯೇ ಭೂಮಿಯ ಆಳಕ್ಕೆ ರಂಧ್ರ ಕೊರೆಯುವ ಯೋಜನೆ ಹಾಕಿಕೊಂಡಿತ್ತು. ಇದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಹಾಗೂ ವೈಜ್ಞಾನಿಕ ಸಿದ್ದತೆಗಳನ್ನೂ ನಡೆಸಿತ್ತು. ಈ ಯೋಜನೆ ಕಾರ್ಯಸಾಧುವೇ? ಈ ಯೋಜನೆಯ ಪರಿಣಾಮಗಳೇನು? ಪ್ರಕೃತಿ ಮೇಲೆ ದುಷ್ಪರಿಣಾಮ ಎದುರಾಗುವುದೇ? ಇತ್ಯಾದಿ ವಿಚಾರಗಳ ಕುರಿತಾಗಿ ಈಗಾಗಲೇ ಸಂಶೋಧನೆಗಳೂ ನಡೆದಿವೆ. 2021ರಲ್ಲೇ ಚೀನಾ ದೇಶದ ಪ್ರಮುಖ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಭೂಗರ್ಭ ಪರಿಶೋಧನೆಯು ದೇಶದ ಅಭಿವೃದ್ದಿಗೆ ಮಹತ್ವದ ಕೊಡುಗೆ ನೀಡಲಿದೆ ಎಂದು ಹೇಳಿದ್ದರು
ಭವಿಷ್ಯದ ಖನಿಜ ಪದಾರ್ಥಗಳ ಬೇಡಿಕೆ, ಇಂಧನದ ಬೇಡಿಕೆ ಈಡೇರಿಸುವಲ್ಲಿ ಭೂ ಗರ್ಭ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸುವ ಜೊತೆಗೆ ಭೂಕಂಪ, ಜ್ವಾಲಾಮುಖಿಯಂಥಾ ಪ್ರಾಕೃತಿಕ ದುರಂತಗಳ ಮುನ್ಸೂಚನೆ ಪಡೆಯುವ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲು ಸಹಕಾರಿಯಾಗಲಿದೆ ಎಂದು ಕ್ಸಿ ಜಿನ್‌ಪಿಂಗ್ ಅಭಿಪ್ರಾಯಪಟ್ಟಿದ್ದರು.
ಚೀನಾ ದೇಶ ಈಗ 10 ಸಾವಿರ ಮೀಟರ್ ಆಳಕ್ಕೆ ಭೂಮಿಯಲ್ಲಿ ರಂಧ್ರ ಕೊರೆಯಲು ಉದ್ದೇಶಿಸಿದೆ. ಆದ್ರೆ, ರಷ್ಯಾ ದೇಶವು 1989ರಲ್ಲೇ 12,262 ಮೀಟರ್ ರಂಧ್ರವನ್ನು ನೆಲದಾಳದಲ್ಲಿ ಕೊರೆದಿತ್ತು. 20 ವರ್ಷಗಳ ಸತತ ಪ್ರಯತ್ನದ ಬಳಿಕ 40,230 ಅಡಿ ರಂಧ್ರ ಕೊರೆಯಲಾಗಿತ್ತು. ಈ ಸಾಹಸಕ್ಕೆ ರಷ್ಯಾ ಕೋಲಾ ಸೂಪರ್ ಡೀಪ್ ಬೋರ್ ಹೋಲ್ ಎಂದು ಹೆಸರು ಇಟ್ಟಿತ್ತು.
…