ವಾರ್ತೆಗಳು: BREAKING NEWS
ವಾರ್ತೆಗಳು
MORNING SPECIAL NEWS
ಬೇಳೆಕಾಳುಗಳ ದಾಸ್ತಾನುಗಳ ಮೇಲಿನ ಕೇಂದ್ರ ನಿರ್ಬಂಧ
ಇತ್ತೀಚೆಗಷ್ಟೇ ಬೇಳೆಕಾಳುಗಳ ಬೆಲೆ ಏರಿಕೆಯಾಗಿರುವುದರಿಂದ ಕೇಂದ್ರ ಸರ್ಕಾರ ಬೆಲೆ ನಿಗದಿಗೆ ಕ್ರಮ ಕೈಗೊಂಡಿದೆ. ಬೇಳೆಕಾಳು ದಾಸ್ತಾನುಗಳ ಮೇಲೆ ಮಿತಿಯನ್ನು ಹಾಕಲಾಗಿದೆ. ಸಗಟು ವ್ಯಾಪಾರಸ್ಥರಿಗೆ 200 ಟನ್ ಹಾಗೂ ಚಿಲ್ಲರೆ ವ್ಯಾಪಾರಸ್ಥರಿಗೆ 5 ಟನ್‌ವರೆಗೆ ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ಮಿಲ್ಲರ್‌ಗಳಿಗೆ ಕೇವಲ 3 ತಿಂಗಳವರೆಗೆ ಬೇಳೆಗಳ ಸಂಗ್ರಹಿಸಲು ಅವಕಾಶವಿದೆ. ಮಿತಿ ಮೀರಿ ಸಂಗ್ರಹಿಸಿಟ್ಟರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಲೋಕೋ ಪೈಲಟ್‌ಗಳಿಗೂ ಗಾಯ
ಒಡಿಶಾದಲ್ಲಿ ರೈಲು ದುರಂತದಲ್ಲಿ ಲೋಕೋ ಪೈಲಟ್‌ಗಳೂ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೋರಮಂಡಲ್ ಎಕ್ಸ್‌ಪ್ರೆಸ್ ಲೋಕೋ ಪೈಲಟ್ ಜಿಎನ್ ಮಹಂತಿ ಅವರು ಪಕ್ಕೆಲುಬು ಮುರಿತಕ್ಕೆ ಒಳಗಾಗಿದ್ದರೆ, ಸಹಾಯಕ ಲೋಕೋ ಪೈಲಟ್ ಹಜಾರಿ ಬೆಹರಾ ಅವರ ಕಾಲಿನ ಮೂಳೆ ಮುರಿದಿದೆ. ಇದರ ಜೊತೆಗೆ ಬೆಂಗಳೂರು-ಹೌರಾ ರೈಲಿನ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗೂಡ್ಸ್ ರೈಲಿನ ಲೋಕೋ ಪೈಲಟ್ ಮತ್ತು ಗಾರ್ಡ್ ಗಾಯಗೊಂಡಿಲ್ಲ.
ಪ್ರಶಾಂತ್ ನೀಲ್ಗೆ ಹುಟ್ಟುಹಬ್ಬದ ಸಂಭ್ರಮ
ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ‘ಕೆಜಿಎಫ್ ಸಿನಿಮಾದಿಂದ ಖ್ಯಾತಿ ಪಡೆದಿರುವ ಪ್ರಶಾಂತ್, ನಿನ್ನೆ ರಾತ್ರಿಯೇ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಸಾಥ್ ನೀಡಿದ್ದಾರೆ. ಸಾವಿರಾರು ಅಭಿಮಾನಿಗಳು ಪ್ರಶಾಂತ್ ನೀಲ್ ಗೆ ವಿಶ್ ಅಭಿಮಾನಿಗಳು ಮಾಡುತ್ತಿದ್ದಾರೆ. ಪ್ರಸ್ತುತ ‘ಸಲಾ ಸಿನಿಮಾದ ಕೆಲಸಗಳಲ್ಲಿ ಪ್ರಶಾಂತ್ ಬ್ಯುಸಿ ಆಗಿದ್ದಾರೆ.
ಉದ್ಯೋಗಾಕಾಂಕ್ಷಿಗಳಿಗೆ ಸಿದ್ದು ಸರ್ಕಾರದಿಂದ ಭರ್ಜರಿ GOOD NEWS
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿತ್ತು. ಅದರಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರಕಾರ ಮುಂದಾಗಿದೆ.
>ಇಂಧನ ಇಲಾಖೆಯಲ್ಲಿ ಹಲವು ಹುದ್ದೆ ಖಾಲಿ ಇವೆ-ಡಿಕೆಶಿ. >ಕೃಷಿ ಇಲಾಖೆಯ 5000 ಹುದ್ದೆ ಖಾಲಿ ಇದ್ದು ಪ್ರಕ್ರಿಯೆ ಆರಂಭಿಸುತ್ತೇವೆ-ಚೆಲುವರಾಯಸ್ವಾಮಿ
>15-25 ಸಾವಿರ ಶಿಕ್ಷಕರ ನೇಮಕಾತಿ ಮಾಡುತ್ತೇವೆ-ಮಧು ಬಂಗಾರಪ್ಪ
>ಕೆಲವೇ ದಿನಗಳಲ್ಲಿ 15000 ಪೇದೆಗಳ ನೇಮಕಾತಿ ಆರಂಭ-ಪರಂ.
ಬೆನ್ ಸ್ಟೋಕ್ಸ್ ಅಪರೂಪದ ದಾಖಲೆ
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಇತಿಹಾಸ ನಿರ್ಮಿಸಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಅಥವಾ ಯಾವುದೇ ಕ್ಯಾಚ್‌ಗಳನ್ನು ತೆಗೆದುಕೊಳ್ಳದೆ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ನಾಯಕರಾದರು. ಲಾರ್ಡ್ನನಲ್ಲಿ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಪ್ರಥಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 524/4 ರನ್ ಗಳಿಸಿದರೂ, ಸ್ಟೋಕ್ಸ್ ಬ್ಯಾಟಿಂಗ್ ಮಾಡಲಿಲ್ಲ. ಹಾಗೆಯೇ, ಬೌಲಿಂಗ್ ಕೂಡ ಮಾಡಲಿಲ್ಲ.
90 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ!
42 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ 90 ವರ್ಷದ ವ್ಯಕ್ತಿಗೆ ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 1981ರಲ್ಲಿ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಶಿಕೋಹಾಬಾದ್‌ನಲ್ಲಿ 10 ಮಂದಿ ದಲಿತರನ್ನು 10 ಮಂದಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 9 ಆರೋಪಿಗಳು ತನಿಖೆಯ ಸಂದರ್ಭದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿರುವ ಏಕೈಕ ಆರೋಪಿ ಗಂಗಾ ದಯಾಳ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ಮತ್ತು 55,000 ರೂ. ದಂಡ ವಿಧಿಸಿದೆ.
ಇನ್ಮುಂದೆ ಕಿರಿಕಿರಿ SMS, ಕರೆಗಳು ಇರಲ್ಲ!
ಯಾವುದಾದರೊಂದು ಉತ್ಪನ್ನದ ಪ್ರಚಾರಕ್ಕಾಗಿ ಗ್ರಾಹಕರಿಗೆ ಕರೆ ಅಥವಾ SMS ಮಾಡಲು ಅವರ ಒಪ್ಪಿಗೆ ತೆಗೆದುಕೊಳ್ಳಬೇಕು. ಇದಕ್ಕಾಗಿ ಟೆಲಿಕಾಂ ಕಂಪನಿಗಳು ಎರಡು ತಿಂಗಳಲ್ಲಿ ಏಕೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ರಚಿಸಬೇಕು ಎಂದು ಟ್ರಾಯ್ ಸೂಚನೆ ನೀಡಿದೆ. ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು ಎಂದು ಟೆಲಿಕಾಂ ಕಂಪನಿಗೆ ಟ್ರಾಯ್ ನಿರ್ದೇಶಿಸಿದೆ.
US ರಕ್ಷಣಾ ಕಾರ್ಯದರ್ಶಿ ಭಾರತ ಪ್ರವಾಸ
ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ ಜೆ. ಆಸ್ಟಿನ್ ಇಂದಿನಿಂದ ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಅವರ ವಾಷಿಂಗ್ಟನ್ ಭೇಟಿಗೂ ಮುನ್ನ ದ್ವಿಪಕ್ಷೀಯ ಕಾರ್ಯತಂತ್ರದ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗಗಳ ಕುರಿತು ಆಸ್ಟಿನ್ ಚರ್ಚಿಸಲಿದ್ದಾರೆ. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಹಲವಾರು ಹೊಸ ರಕ್ಷಣಾ ಸಹಕಾರ ಯೋಜನೆಗಳ ಬಗ್ಗೆಯೂ ಚರ್ಚಿಸಲಿದ್ದಾರೆ. ಇದು ಆಸ್ಟಿನ್ ಅವರ 2ನೇ ಭಾರತ ಪ್ರವಾಸವಾಗಿದೆ.
ಅಬಕಾರಿ ಇಲಾಖೆಯಲ್ಲಿ ಬದಲಾವಣೆ:
ಸಚಿವ ಅಬಕಾರಿ ಇಲಾಖೆಯಲ್ಲಿ ಕೆಲ ಬದಲಾವಣೆ ಅವಶ್ಯವಿದ್ದು, ಸಿಎಂ ಜೊತೆ ಚರ್ಚಿಸಿ ಹೊಸ ನೀತಿ ಜಾರಿ ಮಾಡಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದೇ ಖಾತೆ ನಿರ್ವಹಿಸಿದ್ದೇನೆ. ಆ ಅನುಭವದ ಆಧಾರದ ಮೇಲೆ ಬದಲಾವಣೆ ತರಲು ಉದ್ದೇಶಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ, ಬಿಜೆಪಿಯಲ್ಲಿ ಸಮರ್ಥ ನಾಯಕತ್ವವಿಲ್ಲ, ಕಾಂಗ್ರೆಸ್ ಗೆಲುವು ಮುಂದುವರೆಸಲಿದೆ ಎಂದಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆಗೆ ವಿದೇಶಿ ಹಣ: ಶೋಭಾ
WFI ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ವಿದೇಶಿ ಹಣ ಹರಿದು ಬರುತ್ತಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಭಾರತವನ್ನು ಆಂತರಿಕವಾಗಿ ಅಸ್ಥಿರಗೊಳಿಸಲು & ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಈ ಕುತಂತ್ರ ಹೆಣೆಯಲಾಗುತ್ತಿದೆ. ಜಾರ್ಜ್ ಸೊರೋಸ್ ಅಂಥವರು ವಿದೇಶದಲ್ಲಿದ್ದುಕೊಂಡೇ ಈ ಕೃತ್ಯ ಎಸಗುತ್ತಿದ್ದು, ಇದಕ್ಕೆ ನಮ್ಮ ದೇಶದಲ್ಲಿರುವ ಯಾರೆಲ್ಲಾ ಬೆಂಬಲಿಸುತ್ತಿದ್ದಾರೆ ಎಂಬುದೆಲ್ಲವೂ ಗೊತ್ತಿದೆ ಎಂದಿದ್ದಾರೆ
ಪ್ರತೀ ಲೀಟರ್ ಹಾಲಿಗೆ 12 ಸಬ್ಸಿಡಿ ಹೆಚ್ಚಳ: ಪರಂ
ಪ್ರತೀ ಲೀಟರ್ ಹಾಲಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು 15ರಿಂದ 7 ರೂಪಾಯಿಗೆ ಏರಿಸುತ್ತೇವೆಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿ, ನಾವು ಉತ್ತಮ ಆಡಳಿತ ನೀಡುತ್ತೇವೆಂದು ನಂಬಿ ಜನ ನಮಗೆ ಮತ ನೀಡಿದ್ದಾರೆ. ಜುಲೈನಲ್ಲಿ ಮತ್ತೊಮ್ಮೆ ಬಜೆಟ್ ಮಂಡಿಸುತ್ತೇವೆ ಎಂದ ಅವರು, ಶೀಘ್ರವೇ 15,000 ಪೇದೆಗಳ ನೇಮಕಾತಿ ನಡೆಯಲಿದೆ. ಏಳನೇ ವೇತನ ಆಯೋಗ ಜಾರಿಯಾದರೆ ಔರಾದರ್ ವರದಿ ಜಾರಿಗೊಳಿಸುವ ಅಗತ್ಯವಿಲ್ಲ ಎಂದಿದ್ದಾರೆ.
ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಂಗಾ
ಭಾರತೀಯ ಮೂಲದ ಅಮೆರಿಕಾ ಸಂಜಾತ ಅಜಯ್ ಬಂಗಾ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅವರ ಹೆಸರನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ನಾಮನಿರ್ದೇಶನ ಮಾಡಿದ್ದರು. ಮೇ 3ರಂದು ನಡೆದ ಕಾರ್ಯಕಾರಿ ನಿರ್ದೇಶಕರ ಸಭೆಯಲ್ಲಿ ಬಂಗಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇವರು ನಿನ್ನೆಯಷ್ಟೇ ಜವಾಬ್ದಾರಿ ವಹಿಸಿಕೊಂಡಿದ್ದು, ಈ ಹುದ್ದೆಯಲ್ಲಿ ಐದು ವರ್ಷ ಮುಂದುವರಿಯಲಿದ್ದಾರೆ.
‘ಅಪಘಾತ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಿ’ – ಸೋನು ಸೂದ್
ಒಡಿಶಾ ರೈಲು ಅಪಘಾತದ ಸುದ್ದಿ ಕೇಳಿ ನನ್ನ ಹೃದಯ ಒಡೆದು ಹೋಯಿತೆಂದು ನಟ ಸೋನುಸೂದ್ ಆಗ್ರಹಿಸಿದ್ದಾರೆ. ಸಂತ್ರಸ್ತರ ಪರ ಎಲ್ಲರೂ ನಿಲ್ಲಿ ಎಂದು ಕರೆ ನೀಡಿರುವ ಅವರು, ಅನೇಕ ಕುಟುಂಬಗಳು ರಾತ್ರೋರಾತ್ರಿ ಕಂಗಾಲಾಗಿವೆ. ಈಗ ಘೋಷಿಸಿರುವ ಪರಿಹಾರ 2-3 ತಿಂಗಳಲ್ಲಿ ಖರ್ಚಾಗಲಿದೆ. ಆ ನಂತರ ಕೈ-ಕಾಲು ಕಳೆದುಕೊಂಡವರು ಹೇಗೆ ಬದುಕುತ್ತಾರೆ? ಹೀಗೆ ತಾತ್ಕಾಲಿಕ ಪರಿಹಾರ ಘೋಷಿಸುವ ಬದಲು ಪಿಂಚಣಿ/ ಸ್ಥಿರ ಆದಾಯದಂತಹ ಶಾಶ್ವತ ಪರಿಹಾರವನ್ನು ಸರ್ಕಾರಗಳು ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.
ಬರುವ ವರ್ಷ ಪುಸ್ತಕ ಪರಿಷ್ಕರಣೆ: ಮಧು ಬಂಗಾರಪ್ಪ
ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುತ್ತೇವೆಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದೆ ಎಂದು ನಾವು ಪರಿಷ್ಕರಿಸಲ್ಲ. ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಆಗಬಾರದು. ಹಾಗಾಗಿ ಈ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ಈಗಾಗಲೇ ಪುಸ್ತಕಗಳ ಮುದ್ರಣ ಆಗಿದ್ದು, ಈ ಬಾರಿ ಇದು ಸಾಧ್ಯವಿಲ್ಲ. ಬದಲಾಗಿ ಪಾಠಗಳನ್ನು ಕೈಬಿಡುತ್ತೇವೆ ಎಂದಿದ್ದಾರೆ.
ಸಂತಾಪ ಸೂಚಿಸಿದ್ದ ವಿಶ್ವ ನಾಯಕರಿಗೆ ಮೋದಿ ಕೃತಜ್ಞತೆ
ಒಡಿಶಾ ರೈಲು ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿ ಬೆಂಬಲ ಸೂಚಿಸಿದ್ದ ವಿಶ್ವ ನಾಯಕರಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ವಿಶ್ವದ ಹಲವು ದೇಶಗಳ ನಾಯಕರ ಸಂತಾಪದಿಂದ ಮೃತರ ಕುಟುಂಬಗಳಿಗೆ ಧೈರ್ಯ ಸಿಗಲಿದ್ದು, ಸಂತಾಪ ಸೂಚಿಸಿದ್ದಕ್ಕೆ ಕೃತಜ್ಞತೆ ತಿಳಿಸುತ್ತೇವೆ ಎಂದಿದ್ದಾರೆ. ಸ್ಥಳದಲ್ಲಿ ಈಗಾಗಲೇ ರಕ್ಷಣಾ ಕಾರ್ಯ ಪೂರ್ಣವಾಗಿದ್ದು, ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ 288 ಮಂದಿ ಪ್ರಯಾಣಿಕರು ಕೊನೆಯುಸಿರೆಳೆದಿದ್ದರು.
ಸ್ವಲ್ಪದರಲ್ಲೇ ತಪ್ಪಿತು ಇನ್ನೊಂದು ದೊಡ್ಡ ರೈಲು ದುರಂತ
ಒಡಿಶಾ ರೈಲು ಅಪಘಾತಕ್ಕೆ ಮೊದಲೇ ಇನ್ನೊಂದು ಸಂಭಾವ್ಯ ರೈಲು ದುರಂತ ಸ್ವಲ್ಪದರಲ್ಲೇ ತಪ್ಪಿದೆ. ರೈಲು ಹಳಿಗಳ ಮೇಲೆ ನಿಲ್ಲಿಸಿದ್ದ ಟ್ರಕ್ ಟೈರ್‌ಗಳಿಗೆ ಕನ್ಯಾಕುಮಾರಿ ಎಕ್ಸ್‌ಪ್ರೆಸ್ ರೈಲು ತಮಿಳುನಾಡಿನ ತಿರುಚ್ಚಿ ಸಮೀಪ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಸುಕಿನ ಜಾವ ನಡೆದಿತ್ತು. ಹಳಿಯಲ್ಲಿ ಕಪ್ಪು ಬಾಕ್ಸ್‌ನಂತಹ ವಸ್ತು ಇರುವುದನ್ನು ಗಮನಿಸಿದ್ದ ಲೋಕೋ ಪೈಲೆಟ್ ತಕ್ಷಣ ಬ್ರೇಕ್ ಹಾಕಿದ್ದಾನೆ. ರೈಲು ಅತಿ ವೇಗದಲ್ಲಿ ಸಂಚರಿಸುತ್ತಿದ್ದರಿಂದ ಬೋಗಿಗಳು ಹಳಿ ತಪ್ಪಿದಂತೆಯೇ ಏಕಾಏಕಿ ನಿಂತಿತ್ತು.
ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ
ಮಹಾರಾಷ್ಟ್ರದ ಅಹ್ಮದ್ ನಗರದ 16 ದೇಗುಲಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ದೇವಾಲಯಗಳ ಆಡಳಿತ ಮಂಡಳಿಗಳು ಹಾಗೂ ಹಿಂದೂಪರ ಸಂಘಟನೆಗಳು ಈ ಮಹತ್ವದ ನಿರ್ಣಯ ಕೈಗೊಂಡಿವೆ. ದೇಗುಲಗಳ ಎದುರು ಈಗಾಗಲೇ ಬೋರ್ಡ್ ಹಾಕಲಾಗಿದ್ದು, ಹರಿದ ಶರ್ಟ್, ಪ್ಯಾಂಟ್ ಅಥವಾ ಪ್ರಚೋದನಾಕಾರಿ ವಸ್ತ್ರಗಳನ್ನು ಧರಿಸಿ ಯುವತಿಯರು ದೇಗುಲ ಪ್ರವೇಶಿಸಬಾರದು ಎಂದು ಮರಾಠಿ ಭಾಷೆಯಲ್ಲಿ ಬರೆಯಲಾಗಿದೆ. ಇನ್ನೆರಡು ತಿಂಗಳಲ್ಲಿ ರಾಜ್ಯಾದ್ಯಂತ ಈ ನಿಯಮ ಜಾರಿ ಮಾಡುವ ಉದ್ದೇಶವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಚಿವ ವೆಂಕಟೇಶ್ ವಿರುದ್ಧ ಮುತಾಲಿಕ್ ಕಿಡಿ
ಎಮ್ಮೆ, ಕೋಣಗಳನ್ನು ಕಡಿದು ಹಾಕುವುದಾದರೆ ಹಸುಗಳನ್ನು ಏಕೆ ಕಡಿಯಬಾರದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಕೆ. ವೆಂಕಟೇಶ್ ವಿರುದ್ಧ ಶ್ರೀರಾಮ್ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಗೋರಕ್ಷಣೆ ಆಗಬೇಕೆನ್ನುವುದು ಕಾಂಗ್ರೆಸ್ ಬಯಸಿತ್ತು. ಈಗ ಅದೇ ಕಾಯ್ದೆ ಹಿಂಪಡೆಯುತ್ತೇವೆ ಎಂದರೆ ಹೇಗೆ? ಗೋವು ಕಡಿದರೆ ಕಾಂಗ್ರೆಸ್‌ಗೆ ಶಾಪ ತಟ್ಟುವುದು ಬಿಡಲ್ಲ ಎಂದು ಹೇಳಿದ ಮುತಾಲಿಕ್, ಗೋ ಹತ್ಯೆ ರಕ್ತದ ಹನಿ ಭೂಮಿಗೆ ಬೀಳಲು ನಾವು ಬಿಡಲ್ಲ ಎಂದಿದ್ದಾರೆ.
ಬುಧವಾರದೊಳಗೆ ದುರಸ್ತಿ ಪೂರ್ಣ: ಕೇಂದ್ರ ಸಚಿವ
ರೈಲು ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದುರಂತದ ಸ್ಥಳಕ್ಕೆ ಇಂದೂ ಭೇಟಿ ನೀಡಿ ಮಾತನಾಡಿದ ಅವರು, ನಾವು ಹಳಿಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತೇವೆ. ಎಲ್ಲಾ ಮೃತದೇಹಗಳನ್ನು ಸ್ಥಳಾಂತರಿಸಲಾಗಿದೆ. ಬುಧವಾರ ಬೆಳಗ್ಗೆಯೊಳಗೆ ಎಲ್ಲಾ ಹಳಿಗಳ ರಿಪೇರಿ ಕಾರ್ಯ ಮುಗಿಸುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
ನಾಲ್ವರ ದುರ್ಮರಣ: ಮಂಡ್ಯ
ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಮಂಡ್ಯದ ನಾಗಮಂಗಲದ ತಿರುಮಲಾಪುರದಲ್ಲಿ ನಡೆದಿದೆ. ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿ ಅವಘಢ ಸಂಭವಿಸಿದ್ದು, ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ. ಹೇಮಂತ್, ನವೀನ್, ಶರತ್ ಮೃತರೆಂದು ಗುರುತಿಸಲಾಗಿದೆ. ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ. ಸ್ಥಳಕ್ಕೆ ಬೆಳ್ಳೂರು ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ.
ರೈಲು ಅಪಘಾತ: ದುರಸ್ತಿ ಕಾರ್ಯ ಆರಂಭ
ಒಡಿಶಾದ ರೈಲು ಅಪಘಾತ ಸ್ಥಳದಲ್ಲಿ ರೈಲು ಮಾರ್ಗವನ್ನು ಸರಿಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ. ಮೂರು ರೈಲುಗಳಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದ್ದು, ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳನ್ನು ತೆರವುಗೊಳಿಸಲಾಗಿದೆ. ಈಗ ಟ್ರ್ಯಾಕ್‌ಗಳನ್ನು ಹಾಕುವ ಮತ್ತು ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. 1000ಕ್ಕೂ ಮಂದಿ ಕೆಲಸ ಕಾರ್ಯನಿರ್ವಹಿಸುತ್ತಿದ್ದು, 7ಕ್ಕೂ ಹೆಚ್ಚು ಪೊಕ್ಸೆನ್ ಯಂತ್ರಗಳು, 2 ಅಪಘಾತ ಪರಿಹಾರ ರೈಲುಗಳನ್ನು ಬಳಸಿಕೊಳ್ಳಲಾಗಿದೆ.