ಸಾಮಾಜಿಕ ಜಾಲತಾಣದ ಬೇಡಿಕೆಗೆ ಸ್ಪಂದಿಸಿದ ಸುಳ್ಯ ಶಾಸಕಿ
ಸಾಮಾಜಿಕ ಜಾಲತಾಣದ ಬೇಡಿಕೆಗೆ ಸ್ಪಂದಿಸಿದ ಸುಳ್ಯ ಶಾಸಕ
ಸುಳ್ಯದಿಂದ ಸುಬ್ರಹ್ಮಣ್ಯಕ್ಕೆ ಬೆಳ್ಳಗ್ಗೆ 7:15ಕ್ಕೆ ಹೊರಡುವ ಬಸ್ಸಿನಲ್ಲಿ ಅಧಿಕ ಜನ ಪ್ರಯಾಣಿಸಿ ಮೊನ್ನೆ ನಡುಗಲ್ಲು ಬಳಿ ಸಮಸ್ಯೆಯಾದ ಕುರಿತು ಸಮಾಜಿಕ ಜಾಲತಾಣದ ಮೂಲಕ ಶಾಸಕರು ಸ್ಪಂದಿಸುವಂತೆ ಸಾರ್ವಜನಿಕ ವಲಯದಿಂದ ಮನವಿ ಮಾಡಲಾಗಿತ್ತು.
ಇದಕ್ಕೆ ತಕ್ಷಣ ಸ್ಪಂದಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗ ಆಗುವಂತೆ ಬೆಳ್ಳಗೆ 7:00 ಘಂಟೆಗೆ ಮತ್ತು 7.15ಕ್ಕೆ ವ್ಯವಸ್ಥೆಯನ್ನು ಮಾಡುವಂತೆ ಸುಳ್ಯದ ಘಟಕದ ಕಾರ್ಯನಿರ್ವಾಹಕರಿಗೆ ಸೂಚಿಸಿ ಬಸ್ಸಿನ ವ್ಯವಸ್ಥೆ ಮಾಡಿರುತ್ತಾರೆ. ಸೂಚನೆ ಸ್ವಂದಿಸಿದ ಅಧಿಕಾರಿಗಳು ಇಂದಿನಿಂದ ನೂತನ ಸಮಯದಂತೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.