ಜುಲೈ.11 ರಿಂದ ಶಸ್ತ್ರಚಿಕಿತ್ಸಾ ಶಿಬಿರ
ಜು.11 ರಿಂದ ಶಸ್ತ್ರಚಿಕಿತ್ಸಾ ಶಿಬಿರ
ಮಡಿಕೇರಿ :-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2023 ರ ಜುಲೈ ಮಾಹೆಯಲ್ಲಿ ಮಹಿಳಾ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ.
ಜುಲೈ, 11 ರಂದು ಸಿದ್ದಾಪುರ, ಜು.20 ರಂದು ನಾಪೋಕ್ಲು, ಜು.21 ರಂದು ಕುಟ್ಟ ಮತ್ತು ಜುಲೈ.25 ರಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಜುಲೈ, 18 ರಂದು ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಲ್ಯಾಪ್ರೋಸ್ಕೋಪಿಕ್ ಚಿಕಿತ್ಸೆ ನಡೆಯಲಿದೆ.
ಜುಲೈ, 12 ರಂದು ಚೆಟ್ಟಳ್ಳಿ, ಜುಲೈ, 19 ರಂದು ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟ್ಯುಬೆಕ್ಟಮಿ ಚಿಕಿತ್ಸೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.