• 8 ಸೆಪ್ಟೆಂಬರ್ 2024

ಡ್ರೋನ್ ದಾಳಿ ವಿಫಲಗೊಳಿಸಿದ ರಷ್ಯಾ!

 ಡ್ರೋನ್ ದಾಳಿ ವಿಫಲಗೊಳಿಸಿದ ರಷ್ಯಾ!

A Ukrainian soldier prepares a drone on the frontline in the Zaporizhzhia region, Ukraine, Saturday, July 1, 2023. (AP Photo/Libkos)

Digiqole Ad

ಡ್ರೋನ್ ದಾಳಿ ವಿಫಲಗೊಳಿಸಿದ ರಷ್ಯಾ!

ಉಕ್ರೇನ್ :ಐದು ಡೋನ್ ದಾಳಿ ವಿಫಲಗೊಳಿಸಿದ ರಷ್ಯಾ ಮಾಸ್ಕೋ ಸಮೀಪ ಉಕ್ರೇನ್ ಉಡಾಯಿಸಿದ ಐದು ಡೋನ್‌ಗಳನ್ನು ತಡೆಯಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಬೆಳಗ್ಗೆ ಮಾಸ್ಕೋ ಪ್ರದೇಶ ಮತ್ತು ನ್ಯೂ ಮಾಸ್ಕೋದಲ್ಲಿನ ಕೆಲವು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಐದು ಡೋನ್‌ಗಳ ಮೂಲಕ ಉಕ್ರೇನ್ ದಾಳಿ ನಡೆಸಿತ್ತು. ಈ ಡೋನ್‌ಗಳ ದಾಳಿಯನ್ನು ರಷ್ಯಾ ಸೇನೆ ವಿಫಲಗೊಳಿಸಿದೆ.

‘ಭದ್ರ ಕೋಟೆ’ ಎನಿಸಿರುವ ರಾಜಧಾನಿ ಕೀವ್‌ ನಗರದ ಮೇಲೆ ಭಾನುವಾರ ನಸುಕಿನಲ್ಲಿ ರಷ್ಯಾ ಡ್ರೋನ್‌ ದಾಳಿ ನಡೆಸಿದೆ. ನಗರ ಗುರಿಯಾಗಿಸಿ, 12 ದಿನಗಳ ನಂತರ ನಡೆಸಿರುವ ಮೊದಲ ದಾಳಿ ಇದಾಗಿದೆ.

A Ukrainian soldier prepares a drone on the frontline in the Zaporizhzhia region, Ukraine, Saturday, July 1, 2023. (AP Photo/Libkos)

ದೇಶದ ವಾಯುಗಡಿ ಪ್ರವೇಶಿಸಿದ ಇರಾನಿ ನಿರ್ಮಿತ 8 ಶಾಹಿದ್‌ ಡ್ರೋನ್‌ಗಳು ಮತ್ತು ಮೂರು ಕಲಿಬ್‌ ಕ್ರೂಸ್‌ ಕ್ಷಿಪಣಿಗಳನ್ನು ಪತ್ತೆಹಚ್ಚಿ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್‌ ವಾಯು ಪಡೆ ಹೇಳಿದೆ.

ಕೀವ್‌ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಗುರಿ ನೆಟ್ಟಿದ್ದ ಡ್ರೋನ್‌ಗಳನ್ನು ಪತ್ತೆ ಹಚ್ಚಿ ಧ್ವಂಸಗೊಳಿಸಲಾಗಿದೆ. ಡ್ರೋನ್‌ ಅವಶೇಷಗಳು ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಕೀವ್‌ ಪ್ರಾದೇಶಿಕ ಗವರ್ನರ್‌ ರಸ್ಲಾನ್‌ ಕ್ರಾವ್‌ಶೆಂಕೊ ತಿಳಿಸಿದ್ದಾರೆ.

 

ಕೆರ್ಸಾನ್‌ ಪ್ರಾಂತ್ಯದಲ್ಲಿ ಭಾನುವಾರ ಬೆಳಿಗ್ಗೆಯೂ ಶೆಲ್‌ ದಾಳಿ ಮುಂದುವರಿದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಉಕ್ರೇನ್ ಕೈಗಾರಿಕಾ ನಗರದ ಪೂರ್ವ ಭಾಗದಲ್ಲಿ ಅತ್ಯಂತ ತೀವ್ರ ಹೋರಾಟ ಮುಂದುವರಿದಿದೆ. ಡೊನೆಟ್‌ಸ್ಕ್‌ ಪ್ರಾಂತ್ಯದ ಬಾಖ್ಮಟ್‌, ಮರಿಂಕಾ ಮತ್ತು ಲೈಮನ್‌ ಯುದ್ಧ ಕೇಂದ್ರಿತವಾಗಿದೆ ಉಕ್ರೇನ್‌ ಸೇನೆ ಹೇಳಿದೆ.

ದೇಶದ ಉತ್ತರ, ಈಶಾನ್ಯ, ಪೂರ್ವ ಮತ್ತು ದಕ್ಷಿಣ ಭಾಗದ ಪ್ರದೇಶಗಳನ್ನು ಗುರಿಯಾಗಿಸಿ, ರಷ್ಯಾ ಸೇನೆಯು ಕಳೆದ 24 ತಾಸುಗಳಲ್ಲಿ 27 ವೈಮಾನಿಕ ದಾಳಿ, ಒಂದು ಕ್ಷಿಪಣಿ ದಾಳಿ ಮತ್ತು ಬಹುವಿಧದ ಕ್ಷಿಪಣಿಗಳ 80 ದಾಳಿಗಳನ್ನು ನಡೆಸಿದೆ ಎಂದು ಅದು ಹೇಳಿದೆ.

Drone attack

ರಷ್ಯಾದ ಬೆಲ್ಗೊರೋಡ್ ಪ್ರದೇಶದ ಮೇಲೆ ಹಾರಿ ಬಂದ ಉಕ್ರೇನ್‌ನ ಡ್ರೋನ್‌ಗಳನ್ನು ರಷ್ಯಾ ವಾಯುಪಡೆ ಹೊಡೆದುರುಳಿಸಿವೆ. ಕುರ್ಸ್ಕ್ ಪ್ರದೇಶದಲ್ಲಿ ಶೆಲ್ ದಾಳಿ ನಡೆದಿದೆ. ಯಾವುದೇ ಸಾವು-ನೋವು ಅಥವಾ ಆಸ್ತಿ ನಷ್ಟ ವರದಿಯಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.(source)

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ