• 8 ಸೆಪ್ಟೆಂಬರ್ 2024

ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಚಿನ್ನದ ದರ

 ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಚಿನ್ನದ ದರ
Digiqole Ad

ರಾಜ್ಯದಲ್ಲಿ ಮತ್ತೆ ಏರಿಕೆಕಂಡ ಚಿನ್ನದ ದರ

 

ಕಳೆದ ಕೆಲವು ದಿನಗಳಿಂದ ಇಳಿಮುಖ ಕಾಣುತ್ತಿದ್ದ ಚಿನ್ನದ ದರ ಇಂದು ಅಂದರೆ ಬುಧವಾರ (ಜುಲೈ 5) ರಂದು ತುಸು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಆಷಾಡ ಮುಗಿದ ಬಳಿಕ ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆಯೂ ಇದೆ. ಇಂದು ಚಿನ್ನದ ದರ ತುಸು ಏರಿಕೆ ಕಂಡರೂ, ಬೆಳ್ಳಿ ದರ ಇಳಿಕೆ ಕಂಡಿದೆ.

ಕರ್ನಾಟಕದಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ದರ ತುಸು ಏರಿಕೆ ಕಂಡಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,415 ರೂ ಇದೆ. ನಿನ್ನೆಯ 5,405 ರೂ ದರಕ್ಕೆ ಹೋಲಿಸಿದರೆ 10 ರೂ. ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,320 ರೂ ಆಗಿದೆ. ನಿನ್ನೆ 43,240 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 80 ರೂ., ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,150 ರೂ. ಇದೆ. ನಿನ್ನೆಯ 54,050 ರೂ. ಗೆ ಹೋಲಿಸಿದರೆ 100 ರೂ., ಏರಿಕೆಯಾಗಿದೆ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,906 ರೂ. ಇದೆ. ನಿನ್ನೆಯ 5,896 ರೂ.ಗೆ ಹೋಲಿಸಿದರೆ 10 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,248 ರೂ. ನೀಡಬೇಕಾಗುತ್ತದೆ. ನಿನ್ನೆ 47,168 ರೂ. ಇತ್ತು. ಇಂದು 80 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,060 ರೂ. ಇದೆ. ನಿನ್ನೆಯ 58,960 ರೂ. ಗೆ ಹೋಲಿಸಿದರೆ 100 ರೂ. ಇಳಿಕೆಯಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ