ಯಾವುದೆಲ್ಲ ಯೋಜನೆಗಳು ಬ್ಯಾನ್!
ಯಾವುದೆಲ್ಲ ಯೋಜನೆಗಳು ಬ್ಯಾನ್!
ಯಾವುದೆಲ್ಲ ಯೋಜನೆಗಳಿಗೆ ಕತ್ತರಿ ಪ್ರಯೋಗ..!
- ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆಗೆ ಕೊಕ್ ನೀಡಲಾಗಿದೆ.
- ಜಿಲ್ಲೆಗೊಂದು ಗೋಶಾಲೆ ತೆರೆಯುವ ಹಿಂದಿನ ಸರ್ಕಾರದ ಯೋಜನೆಗೆ ಬ್ರೇಕ್ ಹಾಕಲಾಗಿದೆ.
- ಎಪಿಎಂಸಿ ಕಾಯ್ದೆ ರದ್ದು ಮಾಡುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಆಗಿದೆ.
- ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಮಾಡುವುದಾಗಿ ಹೇಳಿದ್ದಾರೆ.
- ವಿವೇಕ ಶಾಲೆ ಅಭಿವೃದ್ಧಿ ಮಾಡುವ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಕೈಬಿಡಲಾಗಿದೆ.
- ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಮಹಿಳೆಯರ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂಪಾಯಿ ಸಹಾಯಧನ ನೀಡುವ ಯೋಜನೆ ರದ್ದಾಗಿದೆ.
- ಭೂಸಿರಿ ಯೋಜನೆ ಮೂಲಕ ರೈತರಿಗೆ 10 ಸಾವಿರ ರೂಪಾಯಿ ಕೊಡುವುದನ್ನು ನಿಲ್ಲಿಸಲಾಗಿದೆ.
- ಶ್ರಮಶಕ್ತಿ ಯೋಜನೆಯಲ್ಲಿ ಕೃಷಿಕ ಮಹಿಳೆಯರಿಗೆ 500 ರೂಪಾಯಿ ಪ್ರತಿ ತಿಂಗಳು ನೀಡುವುದನ್ನು ನಿಲ್ಲಿಸಲಾಗಿದೆ.
- ಅಗ್ನಿ ವೀರ ಯೋಜನೆಗೆ ಸೇರುವ ಎಸ್ಸಿ, ಎಸ್ಟಿ ಯುವಕರಿಗೆ ತರಬೇತಿ ನೀಡುವ ಯೋಜನೆಗೂ ಕೋಕ್ ನೀಡಲಾಗಿದೆ.
- ಮಕ್ಕಳ ಉಚಿತ ಬಸ್ ಯೋಜನೆ ಹಾಗು ಅಂತರಜಲ ಹೆಚ್ಚಿಸುವ ಜಲನಿಧಿ ಯೋಜನೆಯನ್ನೂ ಸಿದ್ದರಾಮಯ್ಯ ಸರ್ಕಾರ ಕೈಬಿಟ್ಟಿದೆ.