• 21 ನವೆಂಬರ್ 2024

ಕನಸೊಂದೇ ಶಾಶ್ವತ: ಕವಿ ಮನ

 ಕನಸೊಂದೇ ಶಾಶ್ವತ: ಕವಿ ಮನ
Digiqole Ad

ಕನಸೊಂದೇ ಶಾಶ್ವತ

ಕಳಚಿಬಿತ್ತು ಆಶಾಗೋಪುರ

ಮುರಿದ ನಂಬಿಕೆಗೆ

ನ್ಯಾಯಯುತ ಬೇಡಿಕೆಗೆ

ನನ್ನದಲ್ಲದ ತಪ್ಪಿಗೆ

ಕಳಚಿಬಿತ್ತು

 

ಮುಳುಗಿಹೋಯಿತು ಸ್ನೇಹಸೌಧ

ಅಪನಂಬಿಕೆಯ ನದಿಯಲಿ 

ಮುಂಗೋಪದ ಸಾಗರದಲಿ

ಕಟುನುಡಿಗಳ ಕಡಲಲಿ

ಮುಳುಗಿತು

 

ಛಿದ್ರವಾಯಿತು ಮೈತ್ರಿ ಮಂಟಪ

ಚುಚ್ಚುಮಾತಿನ ಚಾಟಿಯೇಟಿಗೆ 

ದುಡುಕುತನದ ಕೊಡಲಿಯೇಟಿಗೆ

ಅನರ್ಥದ ಉಳಿಯೇಟಿಗೆ

ಛಿದ್ರವಾಯಿತು

 

ನೆಲೆಯೂರಲಾರದು ಆಶಾಗೋಪುರ

ಮೇಲೆಳಬಲಾರದು ಸ್ನೇಹಸೌಧ

ಕೂಡಲಾರದು ಮೈತ್ರಿ ಮಂಟಪ

ಚಿಗುರಲಾರದು ಮಿತ್ರತ್ವ

ಕನಸೊಂದೇ ಶಾಶ್ವತ 

 

 

ಪರಿಮಳ ಐವರ್ನಾಡು ಸುಳ್ಯ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ