• 22 ನವೆಂಬರ್ 2024

ಜಗತ್ತಿನ ಶ್ರೀಮಂತ ಭಿಕ್ಷುನ ಬಗ್ಗೆ ನೀವು ಕೇಳಿದ್ದೀರಾ?

 ಜಗತ್ತಿನ ಶ್ರೀಮಂತ ಭಿಕ್ಷುನ ಬಗ್ಗೆ ನೀವು ಕೇಳಿದ್ದೀರಾ?
Digiqole Ad

ಜಗತ್ತಿನ ಶ್ರೀಮಂತ ಭಿಕ್ಷುನ ಬಗ್ಗೆ ನೀವು ಕೇಳಿದ್ದೀರಾ?; ಈತನ ತಿಂಗಳ ಆದಾಯ, ಆಸ್ತಿ, ಅಂತಸ್ತಿನ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ!

ಶ್ರೀಮಂತ ಭಿಕ್ಷುಕ

ವರ್ಷಪೂರ್ತಿ ಬೆವರು ಸುರಿಸಿ ದುಡಿದರೂ ಕೂಡ ಖರ್ಚು ಕಳೆದು ಲಕ್ಷಾಂತರ ರೂಪಾಯಿ ಉಳಿಸುವುದು ಕಷ್ಟ. ಕೋಟಿಯ ವಿಚಾರವಂತು ದೂರದ ಮಾತು ಬಿಡಿ. ಹೀಗಿರುವಾಗ ಬೀದಿ ಬೀದಿಯಲ್ಲಿ ತಟ್ಟೆ ಹಿಡಿದು ಭಿಕ್ಷೆ ಬೇಡುವ ಭಿಕ್ಷುಕನೊಬ್ಬನ ತಿಂಗಳ ಆದಾಯ 60 ರಿಂದ 70 ಸಾವಿರ ಅಂದರೆ ನೀವು ನಂಬುತ್ತೀರಾ?. ನಂಬಲು ತುಸು ಕಷ್ಟವಾದರೂ ಈ ಸಂಗತಿಯನ್ನು ನಂಬಲೇ ಬೇಕು.ಐಶಾರಾಮಿ ಬಂಗಲೆ, ಕೋಟ್ಯಾಂತರ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್, ಸ್ವಂತ ವಾಣಿಜ್ಯ ಕಟ್ಟಡಗಳು ಇಷ್ಟೆಲ್ಲ ಹೊಂದಿರುವ ಜಗತ್ತಿನ ಶ್ರೀಮಂತ ಭಿಕ್ಷುನ ಬಗ್ಗೆಯೇ ನಾವು ಹೇಳ ಹೊರಟಿರೋದು.

ಯಾರು ಈ ಶ್ರೀಮಂತ ಭಿಕ್ಷುಕ!

ತಿಂಗಳಿಗೆ 60 ರಿಂದ 70 ಸಾವಿರ ಆದಾಯ ಪಡೆಯುವ ಈ ಸಿರಿವಂತ ಭಿಕ್ಷುಕನ ಹೆಸರು ಭರತ್ ಜೈನ್. ಭಿಕ್ಷಾಟನೆಯ ಜೊತೆಗೆ ಈತ ತಿಂಗಳಿಗೆ 30 ಸಾವಿರ ಬಾಡಿಗೆಯೂ ಪಡೆಯುತ್ತಿದ್ದಾನೆ. ಬಡತನದಲ್ಲಿ ಬೆಳೆದ ಈತನಿಗೆ ಉತ್ತಮ ಶಿಕ್ಷಣ ಪಡೆಯಲಾಗಲಿಲ್ಲ. ಆದರೂ ಕೂಡ ಭಿಕ್ಷಾಟನೆ ಮಾಡಿ ಕೋಟ್ಯಾಂತರ ರೂಪಾಯಿ ಗಳಿಸಿ ಮುಂಬೈನಲ್ಲಿ ದುಬಾರಿ ಬಂಗಲೆಯೊಂದನ್ನು ಖರೀದಿಸಿ, ತನ್ನ ಹೆಂಡತಿ ಮಕ್ಕಳೊಂದಿಗೆ ಐಶಾರಾಮಿ ಜೀವನ ನಡೆಸುತ್ತಿದ್ದಾನೆ‌‌.

ಈತನ ದಿನದ ಸಂಬಳ ಎಷ್ಟು ಗೊತ್ತಾ?

ದಿನದಲ್ಲಿ 10 ರಿಂದ 12 ಗಂಟೆಗಳ‌ ಕಾಲ ಮುಂಬೈ ಬೀದಿಗಳಲ್ಲಿ ಭಿಕ್ಷಾಟನೆ ಮಾಡುವ ಈತ ದಿನಕ್ಕೆ 2000 ದಿಂದ 2500 ರೂ. ಗಳಿಸುತ್ತಾನೆ. ಈತ ಹುಟ್ಟಿ ಬೆಳೆದಿದ್ದೆಲ್ಲವೂ ಮುಂಬೈನಲ್ಲಿ. ಆದರೆ ಶಿಕ್ಷಣವಿಲ್ಲದ ಈತ ಆರಿಸಿಕೊಂಡದ್ದು ಮಾತ್ರ ಭಿಕ್ಷಾಟನೆ ಯ ವೃತ್ತಿ. ಸದ್ಯ, ತಿಂಗಳಿ 70 ಸಾವಿರ ದುಡಿಯುತ್ತಾನೆ. ಈ ಹಣದಿಂದ ಒಂದು ವಾಣಿಜ್ಯ ಸಂಕೀರ್ಣ ಕಟ್ಟಿ ಬಾಡಿಗೆಗೆ ಕೊಟ್ಟಿದ್ದಾನೆ. ಐಶಾರಾಮಿ ಬಂಗಲೆ ಖರೀದಿಸಿದ್ದಾನೆ. ಇದರೊಂದಿಗೆ ಈತನ‌ ಮಕ್ಕಳಿಗೂ ಉತ್ತಮ‌ ವಿಧ್ಯಾಭ್ಯಾಸ ನೀಡುತ್ತಿದ್ದಾನೆ. ಆದರೆ ಈತ ಇದನ್ನೆಲ್ಲ ಮಾಡಿದ್ದು ಭಿಕ್ಷಾಟನೆಯಿಂದ ಎಂಬುದೇ ಆಶ್ಚರ್ಯದ ಸಂಗತಿ.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ