• 8 ಸೆಪ್ಟೆಂಬರ್ 2024

ಪುತ್ತೂರು ಅರುಣಾ ಥಿಯೇಟರ್ ಬಳಿ ಟ್ರಾಫಿಕ್ ಪೋಲಿಸ್ ರ ದರ್ಪಕ್ಕೆ ಮಿತಿ ಇಲ್ಲವೇ!

 ಪುತ್ತೂರು ಅರುಣಾ ಥಿಯೇಟರ್ ಬಳಿ ಟ್ರಾಫಿಕ್ ಪೋಲಿಸ್ ರ ದರ್ಪಕ್ಕೆ ಮಿತಿ ಇಲ್ಲವೇ!
Digiqole Ad

ಪುತ್ತೂರು ಅರುಣಾ ಥಿಯೇಟರ್ ಬಳಿ ಟ್ರಾಫಿಕ್ ಪೋಲಿಸರ ದರ್ಪಕ್ಕೆ ಮಿತಿ ಇಲ್ಲವೇ…

ಪುತ್ತೂರು ಅರುಣಾ ಥಿಯೇಟರ್ ಬಳಿ ಟ್ರಾಫಿಕ್ ಪೋಲಿಸ್ ರ ಕರ್ಮಕಾಂಡ ಇದಕ್ಕೆ ಒಂದು ಇತಿ ಮಿತಿ ಇಲ್ಲವೇ? ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ ಪೇಟೆಗೆ ಬಂದವರು ಮನೆ ಸೇರಲು ಹರ ಸಾಹಸ ಪಡುತಿರುವಾಗ ಕಾರಣ ಇಲ್ಲದೆ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಟ್ರಾಫಿಕ್ ಜಾಮ್ ಮಾಡಿ ನೀವು ಸಾದಿಸುವುದಾದರೂ ಏನು?

ಮಳೆ ಬೇರೆ ,ಇವರ ಇತಿ ಮಿತಿ ಇಲ್ಲದ ನಡು ರಸ್ತೆಯಲ್ಲಿ ನಿಲ್ಲಿಸಿ ತಪಾಸಣೆ ,ಯಾರು ಹೇಳುವವರು ಕೇಳುವವರು ಇಲ್ಲದೆ ಹೋಗಿದೆ!

ಹೆಲ್ಮೆಟ್ ಇಲ್ಲದೆ ಈ ಸಮಯದಲ್ಲಿ ಪ್ರಯಾಣ ಮಾಡುವುದಾದರೆ ನಿಲ್ಲಿಸಿ ಭಾಕಿ ಎಲ್ಲ ತಪಾಸಣೆ ಮಾಡಲಿ.ಅದು ಬಿಟ್ಟು ಹೆಲ್ಮೆಟ್ ಹಾಕಿದ ಜನರನ್ನು ಕೂಡ ಸುಕಾ ಸುಮ್ಮನೆ ಸಿಕ್ಕ ಸಿಕ್ಕಲ್ಲಿ ತಪಾಸಣೆ ಮಾಡಿ ಪುತ್ತೂರಿನಲ್ಲಿ ಒಂದು ಕಡೆ ಅಲ್ಲ ಅಲ್ಲಲ್ಲಿ ಇವರ ತಪಾಸಣೆ ಜನ ಸಾಮಾನ್ಯರಿಗೆ ತುಂಬಾ ತೊಂದರೆ ಆಗುತ್ತಿದೆ .ಸ್ವಲ್ಪ ಅರ್ಥ ಮಾಡಿಕೊಂಡು ಇವರ ತಪಾಸಣೆ ಮಾಡಲಿ .ನಾನು ಇವತ್ತು 3 ಕಡೆ ನಿಲ್ಲಿಸಿ ಎಲ್ಲ ಡಾಕ್ಯುಮೆಂಟ್ ಸರಿ ಇದೆ ಅಂತ ಕಳಿಸಿದ್ದಾರೆ.ನನ್ನ ಹಾಗೆ ಅದೆಷ್ಟೋ ವಾಹನ ಸವಾರರು ಇವತ್ತು ಇವರಿಂದ ಪಟ್ಟ ಕಷ್ಟ ಪಾಡು ಅಷ್ಟಿಷ್ಟಲ್ಲ.ದಯವಿಟ್ಟು ಸಂಬಂಧಪಟ್ಟವರು ಸೂಕ್ತ ಕ್ರಮ ಕೈ ಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ.

ಇತಿ ನಿಮ್ಮ ನೊಂದ ವಾಹನ ಸವಾರರು

 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ