ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯಲಿದ್ದಾನೆ ‘ವಿಕ್ರಮ್’!
ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯಲಿದ್ದಾನೆ ‘ವಿಕ್ರಮ್’!
2019 ಸೆಪ್ಟೆಂಬರ್ ನಲ್ಲಿ ಚಂದ್ರಯಾನ -2 ಮಿಷನ್ ನ ವಿಕ್ರಮ್ ಲ್ಯಾಂಡಿಂಗ್ ಆಗಲು ಇನ್ನೇನು 3 ನಿಮಿಷಗಳು ಬಾಕಿ ಇರುವಾದ ನಿಯಂತ್ರಣ ಕಳೆದುಕೊಂಡು ಕ್ರಾಷ್ ಆಗಿತ್ತು.
ಅದೇ ದಿನ ವಿಕ್ರಮ್ ನೊಂದಿಗೆ ಪ್ರಗ್ಯಾನ್ ರೋವರ್ ನ್ನು ಕಳೆದುಕೊಂಡ ಆ ನೋವು ದೇಶಪ್ರೇಮಿ ಭಾರತೀಯರ ಮನಸಲ್ಲಿ ಇನ್ನೂ ಜೀವಂತವಾಗಿದೆ.
ಇಂದಿಗೂ ಕೂಡ ವಿಕ್ರಮ್ ಲ್ಯಾಂಡರ್ ಚ೦ದಿರನ ಅ೦ಗಳದಲ್ಲಿ ನಿಶ್ಯಬ್ಧ ವಾಗಿ ನಿಂತಿದೆ.
ಆದರೆ ಈ ಬಾರಿ ವಿಕ್ರಮ್ ಲ್ಯಾಂಡರ್ ನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹಲವಾರು ಬಾರಿ ಪರೀಕ್ಷೆ ಒಳಪಡಿಸಿ ಅಭಿವೃದ್ಧಿಪಡಿಸಲಾಗಿದ್ದು, 2019ರಲ್ಲಿ ನಡೆದ ದುರ್ಘಟನೆ ಮತ್ತೆ ಮರುಕಳಿಸಲಾರದು ಎಂಬುದು ವಿಜ್ಞಾನಿಗಳ ಮಾತು.