• 8 ಸೆಪ್ಟೆಂಬರ್ 2024

ಹಾವು ಮುಂಗುಸಿ ದ್ವೇಷದ ಹಿಂದಿನ ವೈಜ್ಞಾನಿಕ ಕಾರಣಗಳು.

 ಹಾವು ಮುಂಗುಸಿ ದ್ವೇಷದ ಹಿಂದಿನ ವೈಜ್ಞಾನಿಕ ಕಾರಣಗಳು.
Digiqole Ad

ಹಾವು ಮುಂಗುಸಿ ದ್ವೇಷದ ಹಿಂದಿನ ವೈಜ್ಞಾನಿಕ ಕಾರಣಗಳು.

ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳ ನಡುವಿನ ತೀವ್ರತರವಾದ ಹಾಗೂ ಹೆಚ್ಚು ಕಾಲದ ದ್ವೇಷದ ಬಗ್ಗೆ ಹೇಳುವಾಗ ಅವರಿಬ್ಬರೂ ಹಾವು ಮುಂಗುಸಿ ಇದ್ದಂತೆ ಎಂದೇ ಹೇಳುತ್ತಾರೆ. ಬಹುಶಃ ಅವರಿಬ್ಬರ ನಡಿವಿನ ದ್ವೇಷವನ್ನು ನಿಖರವಾಗಿ ಅರ್ಥೈಸಲು ಇದಕ್ಕಿಂತಲೂ ಬೇರೊಂದು ಉದಾಹರಣೆ ಸಾಧ್ಯವಿಲ್ಲ.

ಹಾವು ಮತ್ತು ಮುಂಗುಸಿಯ ನಡುವಿನ ತಲ ತಲಾಂತರದ ದ್ವೇಷದ ಹಿಂದಿನ ಕಾರಣವೇನು? ಹಾವು ಮುಂಗುಸಿಯನ್ನು ದ್ವೇಷಿಸುತ್ತದೆಯೋ ಅಥವಾ ಮುಂಗುಸಿಯೇ ಹಾವನ್ನು ದ್ವೇಷಿಸುತ್ತದೆಯೋ?

ಇವರಿಬ್ಬರ ಕಾದಾಟದಲ್ಲಿ ಮುಂಗುಸಿಯೇ ಹೇಗೆ ಗೆಲ್ಲುತ್ತದೆ..? ಇಂತಹ ಪ್ರಶ್ನೆಗಳಿಗೆ ಉತ್ತರವು ಶುದ್ದ ಪ್ರಾಕೃತಿಕ ವಾಗಿಯೇ ಇರುತ್ತದೆ..

ಮುಂಗುಸಿಗಳು ಪೊದೆಗಳ ಕೆಳಗೆ ಅಥವಾ ಹುಲ್ಲು ಗಾವಲುಗಳ ನಡುವೆ ಪೊಟರೆಗಳನ್ನು ನಿರ್ಮಿಸಿಕೊಂಡು ಆ ಪೊಟರೆಗಳಲ್ಲೇ ವಾಸಮಾಡುತ್ತವೆ, ಹಾಗೂ ತಮ್ಮ ಮರಿಗಳನ್ನು ಪೊಟರೆಯ ಒಳಗೆ ಕೆಲದಿನಗಳ ಕಾಲ ಆರೈಕೆ ಮಾಡುತ್ತವೆ.

ಮುಂಗುಸಿಗಳು ನಿರ್ಮಿಸಿದ ಪೊಟರೆಗಳನ್ನು ಕಂಡ ತಕ್ಷಣವೇ ಅದರೊಳಗೆ ಹೊಕ್ಕು ಅದರೊಳಗಿರುವ ಚಿಕ್ಕ ಚಿಕ್ಕ ಮರಿಗಳನ್ನು ತಿನ್ನುವುದು ಹಾವಿನ ಜನ್ಮ ದತ್ತ ಗುಣವಾಗಿದೆ. ಹಾಗೂ ಸಾಮಾನ್ಯವಾಗಿ ಇಂತಹಾ ಪೊಟರೆಯೊಳಗೆ ತಾನೂ ಸಹಾ ವಾಸಿಸಲೂ ಹವಣಿಸುವುದೂ ಸಹಾ ಹಾವಿನ ಮೂಲ ಗುಣಗಳಲ್ಲೊಂದಾಗಿದೆ…

#ಪೃಕೃತಿಯ ಸೂತ್ರ

 

ಪೃಕೃತಿಯ ಪ್ರತೀ ಜೀವಿಯೂ ತನ್ನ ಸಂತಾನವನ್ನು ಕಾಪಾಡುವುದು ಹಾಗೂ ಅವುಗಳನ್ನು ಅಪಾಯಗಳಿಂದ ರಕ‌್ಷಿಸುವುದು ಇದು ಪೃಕೃತಿಯ ಸೂತ್ರವಾಗಿದೆ .

ಇದರಂತೆಯೇ ಮುಂಗುಸಿಯು ತನ್ನ ಸಂತಾನವನ್ನು ನಾಶಮಾಡುವಲ್ಲಿ ಮುಂಚೂಣಿಯಲ್ಲಿರು ಹಾವುಗಳ ಬಗ್ಗೆ ತಲೆ ಮಾರುಗಳಿಂದಲೂ ಎಚ್ಚರಿಕೆಯಿಂದಿರುತ್ತವೆ.ಹಾವುಗಳು ಹೊಕ್ಕದ ಮುಂಗುಸಿಯ ಬಿಲಗಳೇ ಇಲ್ಲ ಎಂದು ಹೇಳಬಹುದು .

ಹೀಗೆ ತನ್ನ ಜೀವಿತಾವದಿಯ ಶತೃವಾದ ಹಾವುಗಳನ್ನು ಮುಂಗುಸಿಗಳು ದ್ವೇಷಿಸುತ್ತಲೇ ಇರುತ್ತವೆ.. ಆದರೆ ಹಾವು ಮುಂಗುಸಿಗಳನ್ನು ದ್ವೇಷಿಸುವ ಬದಲಾಗಿ ಮುಂಗುಸಿಗಳು ನಿರ್ಮಿಸಿರುವ ಪೊಟರೆಗಳಲ್ಲಿ ಠಿಕಾಣಿ ಹೂಡಲು ಹಾಗೂ ಅವುಗಳ ಮರಿಗಳನ್ನು ಗುಳುಂ ಮಾಡಲು ಮಾತ್ರ ಹವಣಿಸುತ್ತಿರುತ್ತದೆ.

 

#ಹಾವು_ಮುಂಗುಸಿ ಕಾಳಗ ಹೇಗಿರುತ್ತದೆ

ಹಾವಿನ ಬಗ್ಗೆ ಸದಾ ಎಚ್ಚರಿಕೆಯಿಂದಿರುವ ಮುಂಗುಸಿಯು ಹಾವನ್ನು ಕಂಡ ತಕ್ಷಣ ಅಥವಾ ಹಾವಿನ ಚಲನೆಯ ಶಬ್ದವನ್ನು ಕೇಳಿದ ತಕ್ಷಣ ಅಥವಾ ತನ್ನ ಮರಿಗಳು ಸೂಚಿಸುವ ಅಪಾಯದ ಸಂಜ್ಞೆಗಳನ್ನು ತಿಳಿದ ತಕ್ಷಣವೇ ಜಾಗರೂಕವಾಗಿ ಹಾವಿನ ಮೇಲೆ ದಾಳಿಗಿಳಿಯುತ್ತದೆ. ಈ ರೀತಿ ಎರಗುವ ಮುಂಗುಸಿಯಿಂದ ಪಾರಾಗಲು ಹಾವೂ ಸಹಾ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ .

ಹಾವಿನ ಕಡಿತದಿಂದ ಪಾರಾಗಲು ಮುಂಗುಸಿಯು ಬಹಳ ಚಾಕಚಕ್ಯತೆಯಿಂದ ಹೋರಾಡುತ್ತದೆ. ಕೆಲವೇ ಸಮಯದಲ್ಲಿ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಹಲ್ಲುಗಳಿಂದ ಬಲವಾಗಿ ಕಚ್ಚಿ ಹಾವಿಗೆ ಭಯವನ್ನು ಉಂಟು ಮಾಡುತ್ತದೆ.

ಸಾಧ್ಯವಾದರೆ ಮೂರ್ನಾಲ್ಕು ಬಾರಿಯಾದರೂ ಕಚ್ವಿ ಎಳೆದು ಈ ಮುಂಗುಸಿಯ ಸಹವಾಸವೇ ಬೇಡವೆಂದು ಹಾವು ಓಡಿ ಹೋಗುವಂತೆ ಭಯಪಡಿಸುತ್ತವೆ.ಒಂದು ವೇಳೆ ಹಾವಿನ ಕಡಿತಕ್ಕೆ ಮುಂಗುಸಿಯೇ ಒಳಗಾದರೆ ಹಾವಿನ ವಿಷದಿಂದ ಪಾರಾಗುವ ಸಸ್ಯವನ್ನು ತಿಂದು ಬಚಾವಾಗುತ್ತದೆ ಎಂದೂ ಸಹಾ ಹೇಳಲಾಗುತ್ತದೆ .

ಆದರೇ ಹಾವಿನ ಕಡಿತಕ್ಕೆ ಒಳಪಡದೆ ದಾಳಿಮಾಡುವ ಕೌಶಲ್ಯವನ್ನು ಮುಂಗುಸಿಗಳು ರೂಡಿಸಿಕೊಂಡಿರುತ್ತವೆ.

ಹಾವುಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆಯಿಂದಿರುವ ಹಾಗೂ ಹಾವಿನ ಬಗ್ಗೆ ಹೊಂದಿರುವ ರಕ್ತಗತ ದ್ವೇಷವೇ ಮುಂಗುಸಿಯಲ್ಲಿ ಬಹಳ ಜಾಗರೂಕವಾಗಿ ಕಾದಾಡುವ ಕೌಶಲ್ಯಗಳನ್ನು ಬಲಗೊಳಿಸಿರುತ್ತದೆ. ಆದರೆ ಹಾವು ಮುಂಗಿಷಿಯಷ್ಟು ಕೌಶಲ್ಯಗಳನ್ನು ಬಳಸುವುದಿಲ್ಲ. ತನ್ನ ಎದುರಾಳಿ ಮುಂಗುಸಿಯನ್ನು ಭಯಪಡಿಸಲು ಆಕ್ರೋಶದ ಶಬ್ದಮಾಡುವುದು ಹಾಗು ಮುಂಗುಸಿಯನ್ನು ಕಚ್ವಿ ತನ್ನ ಹಲ್ಲುಗಳ ಕೊಳವೆಯಲ್ಲಿ ಸಿದ್ದವಿರುವ ವಿಷಕಾರಲು ಹವಣಿಸುತ್ತದೆ. ಮುಂಗುಸಿಗಿಂತಲೂ ಉದ್ದವಾಗಿರುವ, ತನ್ನ ದೇಹವನ್ನು ಮುಂಗುಸಿಯ ಬಾಯಿಗೆ ಸಿಕ್ಕದಂತೆ ಪಾರಾಗಲು ಹಾವೂ ಸಹಾ ಹೆಚ್ಚು ಶ್ರಮ ಪಡಬೇಕಾಗುತ್ತದೆ.. ಆದರೂ ಸಹಾ ಹಾವಿನ ದೇಹದ ಯಾವುದಾದರೊಂದು ಭಾಗವನ್ನು ತನ್ನ ಚೂಪಾದ ಹಲ್ಲುಗಳಿಂದ ಕಚ್ಚಿ ಎಳೆದು ಸೀಳುವಲ್ಲಿ ಮುಂಗುಸಿಯೇ ಯಶಸ್ವಿಯಾಗುತ್ತದೆ.ಹೀಗಾಗಿ ಪ್ರತೀ ಕಾಳಗದಲ್ಲೂ ಮುಂಗುಸಿಯೇ ಗೆದ್ದಂತೆ ನೋಡುಗರಿಗೆ ಭಾಸವಾಗುತ್ತದೆ.

ಮುಂಗುಸಿಯ ಕಡಿತದಿಂದ ಹಾವಿಗೆ ಪ್ರಾಣಾಪಾಯವಾಗುವುದಿಲ್ಲ. ಆದರೆ ಹೆಚ್ಚು ಕಡಿತದಿಂದ ಹೆಚ್ಚು ನೋವು ರಕ್ತಸ್ರಾವವಾಗಬಹುದು. ಕೆಲವು ಸಲ ಮುಂಗುಸಿಯ ಜೊಲ್ಲಿನಲ್ಲಿರುವ ತೀವೃತರವಾದ ರ‌್ಯಾಬೀಸ್ ಗಳಿಂದ ಹಾವಿನ ಆರೋಗ್ಯವೂ ಕ‌್ಷಿಣಿಸಬಹುದು.

ತನ್ನ ಸುಲಲಿತ ಚಲನೆಗೂ ಕೆಲ ಕಾಲ ಅಡ್ಡಿಯಾಗಬಹುದು.ಆದರೆ ಹಾವಿನ ಕಡಿತವು ಮುಂಗುಸಿಗೆ ಹೆಚ್ಚು ಅಪಾಯಕಾರಿ.ಈ ಹಾವು ಮತ್ತು ಮುಂಗುಸಿಯ ದ್ವೇಷದ ಹಿಂದೆ ಪೃಕೃತಿಯ ಸರಳ ಸೂತ್ರವೇ ಇರುತ್ತದೆ.

 

ಸಂಗ್ರಹ.

 

PC: ನಿತ್ಯ ಸತ್ಯ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ