ತರಕಾರಿ ರೇಟ್ ಗಗನಕ್ಕೆ ಏರಿದ ಬೆನ್ನಲ್ಲೇ ಇದೀಗ ವೀಳ್ಯದ ರೇಟೂ ದುಬಾರಿ!
ತರಕಾರಿ ರೇಟ್ ಗಗನಕ್ಕೆ ಏರಿದ ಬೆನ್ನಲ್ಲೇ ಇದೀಗ ವೀಳ್ಯದ ರೇಟೂ ದುಬಾರಿ!
ತರಕಾರಿ ಮತ್ತು ದಿನಸಿ ಸಾಮಾಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ . ಅದರಲ್ಲೂ ಟೊಮೇಟೊಗೆ ಚಿನ್ನದ ಬೆಲೆ ಬಂದಿದೆ. ಇದರ ಬೆನ್ನಲ್ಲೇ ಇದೀಗ ವೀಳ್ಯದೆಲೆ ಹಾಗೂ ಕಪ್ಪು ಎಲೆ ಬೆಲೆ ಕೂಡ ದುಬಾರಿಯಾಗಿದೆ. ಎಲೆ ಅಡಿಕೆ ತಿನ್ನುವವರು ಒಂದು ಎಲೆಯಲ್ಲಿ ಒಂದು ಸಾರಿ ಅರ್ಧ ಎಲೆ ಮಾತ್ರ ತಿನ್ನವಂತಹ ಪರಿಸ್ಥಿತಿ ಉಂಟಾಗಿದೆ.
ಸದ್ಯ 12 ಸಾವಿರ ವೀಳ್ಯದೆಲೆಯ ಒಂದು ಬಂಡಲ್ ಬೆಲೆ 6 ಸಾವಿರಕ್ಕೆ ಏರಿಕೆಯಾಗಿದೆ. ತಿಂಗಳ ಹಿಂದೆ 2500 ರೂ. ಬೆಲೆ ಇತ್ತು ಈಗ 6 ಸಾವಿರ ಎಲೆಗಳಿರುವ ಕಪ್ಪು ಎಲೆಗಳ ಒಂದು ಬಂಡಲ್ಗೆ 6 ಸಾವಿರ ರೂ. ಆಗಿದೆ. ತಿಂಗಳ ಹಿಂದೆ 3 ಸಾವಿರ ರೂ. ಬೆಲೆ ಇದವು. ಈಗ ಬಹಳ ದುಬಾರಿ ಆಗಿದೆ.
ಇದರಿಂದ ಗ್ರಾಹಕರು ಮಾರುಕಟ್ಟೆಯಲ್ಲಿ ನೂರು ಕಪ್ಪು ಎಲೆಯ ಒಂದು ಕಟ್ಗೆ 60 ರೂ. ಕೊಡುವ ಪರಿಸ್ಥಿತಿ ಉಂಟಾಗಿದೆ. ವೀಳ್ಯದೆಲೆ ನೂರರ ಕಟ್ಗೆ 40 ರೂ. ಈ ಮೊದಲಿಗಿಂತ ಎರಡು ಎಲೆಗಳ ನೂರರ ಕಟ್ ಬೆಲೆ 20-30 ರೂ. ಏರಿಕೆಯಾಗಿದೆ.
ಬೆಲೆ ಏರಿದರೂ ಎಲೆ ಬೆಳೆಗಾರರಿಗೆ ಹೆಚ್ಚು ಲಾಭ ಇಲ್ಲ . ಇಳಿವರಿಯೇ ಹೆಚ್ಚಿಲ್ಲ ಇನ್ನು ಹೆಚ್ಚು ಲಾಭ ಎಲ್ಲಿ ಎಂದು ಬಾದಾಮಿ ಹಾಗೂ ಬದಾಮಿ ಸುತ್ತಲಿನ ಚೊಳಚಗುಡ್ಡ, ಹಿರೆನಸಬಿ ಗ್ರಾಮದ ಎಲೆ ಬೆಳೆಗಾರರು ತಿಳಿಸಿದ್ದಾರೆ.