ಬಾಳೆಯ ಎಲೆಯನ್ನು ಇಡುವ ಪದ್ಧತಿ
ಬಾಳೆಯ ಎಲೆಯನ್ನು ಇಡುವ ಪದ್ಧತಿ…….
೧. ಊಟಕ್ಕೆ ಕುಳಿತುಕೊಳ್ಳುವಾಗ ಬಾಳೆಎಲೆಯ ದಂಟು ನಮ್ಮ ಕಡೆಗೆ ಮತ್ತು ಎಲೆಯ ಅಗ್ರಭಾಗವು (ಮುಂಭಾಗವು) ಎದುರಿಗೆ (ಮುಂದೆ) ಬರುವಂತೆ ಏಕೆ ಇಡಬೇಕು?: ಬಾಳೆ ಎಲೆಯ ದಂಟಿನಲ್ಲಿ ಭೂಮಿಲಹರಿಗಳನ್ನು ಆಕರ್ಷಿಸುವ ಕ್ಷಮತೆಯು ಹೆಚ್ಚಿಗೆ ಇರುತ್ತದೆ ಮತ್ತು ಅಗ್ರಭಾಗದಲ್ಲಿ ಸಾತ್ತ್ವಿಕ ಲಹರಿಗಳನ್ನು ಪ್ರಕ್ಷೇಪಿಸುವ ಕ್ಷಮತೆಯು ದಂಟಿಗಿಂತ ಹೆಚ್ಚಿರುತ್ತದೆ. ಆದುದರಿಂದ ಊಟಕ್ಕೆ ಕುಳಿತುಕೊಳ್ಳುವಾಗ ಬಾಳೆ ಎಲೆಯ ಮುಂಭಾಗವನ್ನು ಎದುರಿಗೆ ಬರುವಂತೆ ಇಡುತ್ತಾರೆ. ಎಲೆಯ ಅಗ್ರಭಾಗದಿಂದ ಹೊರಬೀಳುವ ಸಾತ್ತ್ವಿಕ ಲಹರಿಗಳು ಕಾರಂಜಿಯಂತೆ ಇರುತ್ತವೆ. ಈ ಲಹರಿಗಳಿಂದ ಊಟ ಮಾಡುವವನ ಸುತ್ತಲಿನ ವಾತಾವರಣದಲ್ಲಿನ ರಜ-ತಮಗಳ ಪ್ರಮಾಣವು ಕಡಿಮೆಯಾಗಿ, ಅನ್ನದ ಸುತ್ತಲೂ ಸಾತ್ತ್ವಿಕ ಲಹರಿಗಳ ಕವಚವು ನಿರ್ಮಾಣವಾಗಲು ಸಹಾಯವಾಗುತ್ತದೆ. ಇದರಿಂದ ಅನ್ನದ ಮಾಧ್ಯಮದಿಂದ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಯು ಕಡಿಮೆಯಾಗಲು ಸಹಾಯವಾಗುತ್ತದೆ.
೨. ಊಟವನ್ನು ಮಾಡುವಾಗ ಬಾಳೆಎಲೆಯನ್ನು ಅಡ್ಡವಾಗಿಟ್ಟರೆ ಸೂರ್ಯ ಅಥವಾ ಚಂದ್ರನಾಡಿಯು ಕಾರ್ಯನಿರತವಾಗುತ್ತದೆ ಮತ್ತು ನೇರವಾಗಿಟ್ಟರೆ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ: ಊಟವನ್ನು ಮಾಡುವಾಗ ಬಾಳೆಎಲೆಯ ಅಗ್ರಭಾಗವನ್ನು ಊಟ ಮಾಡುವವನ ಬಲಬದಿಗೆ ಮಾಡಿಟ್ಟರೆ, ತುದಿಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ, ವ್ಯಕ್ತಿಯ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ.
ಆದರೆ ಎಲೆಯನ್ನು ನೇರವಾಗಿ ಇಡುವುದರಿಂದ ಶರೀರದ ಎರಡೂ ಭಾಗಕ್ಕೆ ಎಲೆಯ ತುದಿಯಿಂದ ಪ್ರಕ್ಷೇಪಿತವಾಗುವ ಲಹರಿಗಳ ಲಾಭವಾಗುವುದರಿಂದ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಶರೀರದಲ್ಲಿನ ಸೂಕ್ಷ್ಮ-ವಾಯುಗಳು ಉತ್ತಮವಾಗಿ ಸಮತೋಲನವಾಗಿ, ಶರೀರವು ಆರೋಗ್ಯವಾಗಿರುತ್ತದೆ. ಶಕ್ತಿ ಉಪಾಸನೆಯಲ್ಲಿ ಸೂರ್ಯನಾಡಿಯು ಕಾರ್ಯನಿರತವಾಗುವುದಕ್ಕೆ ತುಂಬಾ ಮಹತ್ವವಿದೆ.
ದಕ್ಷಿಣ ಭಾರತದಲ್ಲಿ ಬಹುತಾಂಶ ಜನರು ಶಕ್ತಿಯ ಉಪಾಸಕರಾಗಿರುವುದರಿಂದ ಬಾಳೆ ಎಲೆಯನ್ನು ಅಡ್ಡವಾಗಿಡುತ್ತಾರೆ. ಮಹಾರಾಷ್ಟ್ರದಲ್ಲಿ ಎಲೆಯನ್ನು ನೇರವಾಗಿ ಇಡುತ್ತಾರೆ.