ರೈಲಿನಲ್ಲಿ ಪ್ರಯಾಣಿಸುವವರ ಗಮನಕ್ಕೆ!
ಪ್ರಯಾಣಿಕರೇ ದಯವಿಟ್ಟು ಗಮನಿಸಿ:
ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ನ ಸಮಯವನ್ನು 16.07.2023ರಿಂದ ಪರಿಷ್ಕರಿಸಲಾಗುತ್ತಿದೆ.
ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ಮಂಗಳೂರು ಜಂಕ್ಷನ್ನಿಂದ ಬೆಳಗ್ಗೆ 09:15ರ ಬದಲಿಗೆ 07:00 ಗಂಟೆಗೆ ಹೊರಟು ರಾತ್ರಿ 08:20ರ ಬದಲಾಗಿ ಸಂಜೆ 04:30ಕ್ಕೆ ಯಶವಂತಪುರವನ್ನು ತಲುಪುತ್ತದೆ, ಇದು 16.07.2023ರಿಂದ ಅನ್ವಯಗೊಳ್ಳುತ್ತದೆ.
ರೈಲು ಹಾದುಹೋಗುವ ಮಾರ್ಗದಲ್ಲಿ ರೈಲು ಬಂಟವಾಳ – 07:33/07:35 AM, ಕಬಕ ಪುತ್ತೂರು – 08:20/08:22 AM, ಸುಬ್ರಹ್ಮಣ್ಯ ರಸ್ತೆ 09:00/09:10 AM, ಸಕಲೇಶಪುರ – 11:30/11: 40 AM, ಹಾಸನ 12:40/12:45 PM, ಚನ್ನರಾಯಪಟ್ಟಣ – 01:10/01:11 PM, ಶ್ರವಣಬೆಳಗೊಳ – 01:22/01:23 PM, ಬಿ.ಜಿ. ನಗರ – 01:47/01:48 PM, ಯಡಿಯೂರು – 02:01/02:02 PM, ಕುಣಿಗಲ್ – 02:18/02:19 PM, ನೆಲಮಂಗಲ – 03:00/03:01 PM ಮತ್ತು ಚಿಕ್ಕ ಬಾಣಾವರ 03:44/ 03:45 PM ಸಮಯಕ್ಕೆ ಆಯಾಯ ರೈಲು ನಿಲ್ದಾಣದಲ್ಲಿ ನಿಲುಗಡೆ ಹೊಂದಿ ಹಾದುಹೋಗಲಿದೆ.
ದಯವಿಟ್ಟು ಸಮಯದ ಬದಲಾವಣೆಗಳನ್ನು ಗಮನಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಪ್ರಯಾಣವನ್ನು ಮಾಡಿ.