• 22 ನವೆಂಬರ್ 2024

ಚರಂಡಿ ಕಾಮಗಾರಿ ಸಂದರ್ಭ ಸಾರ್ವಜನಿಕ ನೀರಿನ ಸಂಪರ್ಕ ಕಡಿತ: ಸಂಪರ್ಕ ಕಲ್ಪಿಸುವಂತೆ ನಾಗರಿಕರಿಂದ ಒತ್ತಾಯ

 ಚರಂಡಿ ಕಾಮಗಾರಿ ಸಂದರ್ಭ ಸಾರ್ವಜನಿಕ ನೀರಿನ ಸಂಪರ್ಕ ಕಡಿತ: ಸಂಪರ್ಕ ಕಲ್ಪಿಸುವಂತೆ ನಾಗರಿಕರಿಂದ ಒತ್ತಾಯ
Digiqole Ad

ಚರಂಡಿ ಕಾಮಗಾರಿ ಸಂದರ್ಭ ಸಾರ್ವಜನಿಕ ನೀರಿನ ಸಂಪರ್ಕ ಕಡಿತ: ಸಂಪರ್ಕ ಕಲ್ಪಿಸುವಂತೆ ನಾಗರಿಕರಿಂದ ಒತ್ತಾಯ

 

ನೀರು ಪ್ರತಿಯೊಂದು ಜೀವಕ್ಕೂ ಆಧಾರ. ಯಾವುದೇ ನಾಡಿನ ಸುಸ್ಥಿರತೆಯು ಆ ನೆಲದ ನೀರಿನ ಮೂಲಗಳ ಸಂಪರ್ಕ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಯ ಜೊತೆಜೊತೆಗೆ ನೀರಿನ ಅವಶ್ಯಕತೆ ಹಾಗೂ ಪೂರೈಕೆಗಳ ಮಟ್ಟದಲ್ಲಿ ಹಲವಷ್ಟು ಬದಲಾವಣೆಗಳಾಗುತ್ತಿರುವುದನ್ನು ನಾವು ಕಾಣಬಹುದು.ನಾವು ಸಾಮಾನ್ಯವಾಗಿ ನೀರನ್ನು ಕುಡಿಯುವುದರ ಜೊತೆಗೆ ಅನೇಕ ದಿನನಿತ್ಯದ ಚಟುವಟಿಕೆಗಳಿಗೆ ಸರಾಗವಾಗಿ ಬಳಸುತ್ತೇವೆ. ಆದರೆ ಮಡಿಕೇರಿಯ ಹೊಸ ಬಡಾವಣೆಯ ಆಟೋ ನಿಲ್ದಾಣದ ಬಳಿ ಇದ್ದಂತಹ ಸಾರ್ವಜನಿಕ ನೀರಿನ ನಲ್ಲಿಗೆ ಇದ್ದ ನೀರಿನ ಸಂಪರ್ಕವನ್ನು ಇತ್ತೀಚೆಗೆ ನಡೆಸಿದ ಚರಂಡಿ ಕಾಮಗಾರಿಯ ಸಂದರ್ಭದಲ್ಲಿ ಕಡಿತಗೊಂಡಿದೆ.ಆನಂತರ ಅದನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ .ಇಲ್ಲಿನ ಸ್ಥಳೀಯರು ಹಾಗೂ ಆಟೋ ನಿಲ್ದಾಣದವರು ಹಾಗು ಪ್ರವಾಸಿಗರಿಗೆ ಈ ನೀರಿನ ನಲ್ಲಿಯಿಂದ ಬಹಳ ಅನುಕೂಲವಾಗಿತ್ತು, ಆದರೆ ಈಗ ನೀರಿನ ಸಂಪರ್ಕ ಕಡಿತಗೊಂಡಿರುವುದರಿಂದ ಜನರ ನಿತ್ಯ ಅಗತ್ಯ ಬಳಕೆಗೆ ನೀರು ಲಭ್ಯವಾಗುತ್ತಿಲ್ಲ. ಹಾಗಾಗಿ ಅಲ್ಲಿನ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸದೇ ಇರುವುದು ನಿಜಕ್ಕೂ ಬೇಸರದ ವಿಚಾರವಾಗಿದೆ. ಜನ ಪ್ರತಿನಿಧಿಗಳು ಜನರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಜನರ ಸಮಸ್ಯೆಗೆ ಪರಿಹಾರ ಒದಗಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅಲ್ಲಿನ ಜನರ ಸಮಸ್ಯೆಗಳಿಗೆ ಜನ ಪ್ರತಿನಿಧಿಗಳು ಸ್ಪಂದಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿ ಆಗಿದೆ.ಅಲ್ಲಿನ ಜನರ ನಿತ್ಯ ಬಳಕೆಗೆ ಬೇಕಿದ್ದ ನಲ್ಲಿ ನೀರು ಈಗ ಕಾಡುಪಾಲಾಗಿರುವ ನೀರಿನ ನಲ್ಲಿಯನ್ನು ನಗರಸಭೆಯ ವತಿಯಿಂದ ಸರಿಪಡಿಸಿ ಶುದ್ಧ ನೀರು ಸಾರ್ವಜನಿಕ ಉಪಯೋಗಕ್ಕೆ ದೊರಕುವತ್ತ ಅಧಿಕಾರಿಗಳು ಗಮನಹರಿಸಬೇಕಾಗಿದೆ ಎಂದು ನಾಗರಿಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ