• 22 ನವೆಂಬರ್ 2024

ಕಾವೇರಿ‌ನದಿ ಪಾತ್ರದಲ್ಲಿ ಗಿಡ‌ನೆಡುವ ಕಾರ್ಯಕ್ರಮ

 ಕಾವೇರಿ‌ನದಿ ಪಾತ್ರದಲ್ಲಿ ಗಿಡ‌ನೆಡುವ ಕಾರ್ಯಕ್ರಮ
Digiqole Ad

ಕಾವೇರಿ‌ನದಿ ಪಾತ್ರದಲ್ಲಿ ಗಿಡ‌ನೆಡುವ ಕಾರ್ಯಕ್ರಮ

ನಮ್ಮ ಸುತ್ತಲಿನ ಪರಿಸರದಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕಪರಿಸರವನ್ನು ರಕ್ಷಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಹಾಗೂ ಎಲ್ಲರೂ ಜತೆಗೂಡಿ ಹಸಿರು ಹೊದಿಕೆ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದು ಪರಿಸರ ಸಂಘಟಕರೂ ಆದ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆಯ ಮಡಿಕೇರಿ ವಿಭಾಗ, ಮತ್ತು ಕುಶಾಲನಗರ ಅರಣ್ಯ ವಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ಭಾನುವಾರ ನಡೆದ ಕುಶಾಲನಗರ‌‌ ಸಮೀಪದ ರಸಲ್ ಪುರ ಕಾವೇರಿ ನದಿದಂಡೆಯಂಚಿನಲ್ಲಿ ಗಿಡ‌ನೆಡುವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ನದಿಯ ದಂಡೆಯ ಮೇಲೆ ಮರಗಳನ್ನು ಬೆಳೆಸುವುದರಿಂದ ನದಿಯಲ್ಲಿ ವರ್ಷವಿಡೀ ನೀರು ಇರುವಂತೆ ಮಾಡಲು ಸಾಧ್ಯ ವಾಗುತ್ತದೆ ಆದರೆ ದಂಡೆಯ ಮೇಲೆ ಮರಗಿಡಗಳ ಸಂಖ್ಯೆ ಹೆಚ್ಚಾದರೆ ನದಿಗೆ ಸೇರುವ ನೀರಿನ ಪ್ರಮಾಣವು ಹೆಚ್ಚು ಆಗುತ್ತದೆ ಎಂದರು. ದೇಶದಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಶನ್’ ಸಂಸ್ಥೆ (ಐಸಿಎಫ್‍ಆರ್‌ಇ)ಯು ದೇಶದ ನದಿಗಳ ಎರಡು ದಂಡೆಯಲ್ಲೂ ಹೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ನದಿಗಳಲ್ಲಿ ವರ್ಷವಿಡೀ ತಕ್ಕಮಟ್ಟಿಗೆ ನೀರಿರುವಂತೆ ನೋಡಿಕೊಳ್ಳಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು 2015 ರಲ್ಲಿ ಅನುಷ್ಠಾನಗೊಳಿಸಲಾಯಿತು.ಇದು ಐಸಿಎಫ್‍ಆರ್‌ಇ ಸಿದ್ಧಪಡಿಸಿರುವ ನದಿಯ ಪುನರುಜ್ಜೀವನ ಕಾರ್ಯಕ್ರಮದಲ್ಲಿ, ನದಿಯ ದಡದಲ್ಲಿ ಪ್ರಾಯೋಗಿಕವಾಗಿ ನಡೆಸಿದ ಅರಣ್ಯೀಕರಣದ ಯಶಸ್ಸಿನ ಮೇಲೆ ರೂಪುಗೊಂಡಿದೆ ಹಾಗೂ 2015ರಲ್ಲಿ ಡೆಹ್ರಾಡೂನ್‍ನ ಅರಣ್ಯ ಸಂಶೋಧನಾ ಸಂಸ್ಥೆ ಸಿದ್ಧಪಡಿಸಿದ ಈ ಯೋಜನೆ

ಗಂಗಾ ಮತ್ತು ಅದರ ಉಪನದಿಗಳ ದಂಡೆಯಲ್ಲಿ ಮರಗಿಡಗಳನ್ನು ಬೆಳೆಸಲು ಈ ಯೋಜನೆ ರೂಪುಗೊಂಡಿದೆ ಎಂದರು.

ಕುಶಾಲನಗರ‌‌ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ ಮಾತನಾಡಿ, ಅರಣ್ಯ ಇಲಾಖೆಯ ವತಿಯಿಂದ ನಾಗರಿಕರ ಸಹಭಾಗಿತ್ವದಲ್ಲಿ

ಶಾಲಾ- ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 2500 ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಇಂತಹ ಹಸಿರು ನಿರ್ಮಾಣ ಅಭಿಯಾನದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಬಹಳ ಅಗತ್ಯ ವಾಗಿರುತ್ತದೆ ಎಂದರು.

ಕಾವೇರಿ ಪರಿಸರ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ಮಾತನಾಡಿ, ಪ್ರತಿವರ್ಷ ನಡೆಯುವ ವನ ಮಹೋತ್ಸವಕ್ಕೆ ಎಲ್ಲರ ಸಹಕಾರ ಬಹಳ ಮುಖ್ಯವಾಗಿರುತ್ತದೆ ಎಂದರು .ಕಾವೇರಿ ನದಿ ಪಾತ್ರದಲ್ಲಿ ಹಲಸು, ನೇರಳೆ, ಹೊಳೆ ಮಾವು, ಹೊಳೆಮತ್ತಿ ಹಾಗೂ ಕೂಳಿ ಜಾತಿಯ ಗಿಡಗಳನ್ನು ನೆಡಲಾಯಿತು.

ಗುಡ್ಡೆಹೊಸೂರು ಗ್ರಾ.ಪಂ.ಸದಸ್ಯ ಲಕ್ಷ್ಮಣ್,ಡಿ ಆರ್ ಎಫ್ ಓ ಕೆ.ಎನ್.ದೇವಯ್ಯ, ಶ್ರವಣಕುಮಾರ್ ವಿಭೂತಿ, ಚೇತನ್, ಗಸ್ತು ವನ ಪಾಲಕ ವಿ.ಎಸ್. ಮಂಜೇಗೌಡ, ಸಿದ್ದರಾಮ ನಾಟೀಕರ್, ದಿನೇಶ್ಎನ್. ಎಸ್.ಎಸ್ ಹಾಗೂ ಇಕೋ ಕ್ಲಬ್ ಘಟಕದ ವಿದ್ಯಾರ್ಥಿಗಳು, ಅರಣ್ಯ ವೀಕ್ಷಕರು, ಗ್ರಾಮಸ್ಥರು, ಸಿಬ್ಬಂದಿಗಳು ಇದ್ದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ