ಟೆನಿಸ್: ವಿಶ್ವ ನಂ.1 ಸ್ಥಾನ ಉಳಿಸಿಕೊಂಡ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್
ಟೆನಿಸ್: ವಿಶ್ವ ನಂ.1 ಸ್ಥಾನ ಉಳಿಸಿಕೊಂಡ ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್ ಆಲ್ಕರಜ್
ವಿಂಬಲ್ಡನ್ ಚಾಂಪಿಯನ್ ಸ್ಪೇನ್‌ನ 20ರ ಕಾರ್ಲೊಸ್ ಆಲ್ಕರಜ್ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದು, ಜೋಕೋವಿಚ್ 2ನೇ ಸ್ಥಾನದಲ್ಲೇ ಇದ್ದಾರೆ. ನಿರ್ಣಾಯಕ ಸೆಟ್‌ನ ಆರಂಭದಲ್ಲೇ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ ಅಲ್ಕರಾಜ್ ಮೇಲುಗೈ ಪಡೆದರು. ಆ ಬಳಿಕ ತಮ್ಮ ಸರ್ವ್‌ಗಳನ್ನು ಕಾಪಾಡಿಕೊಂಡು ಇಲ್ಲಿ ಚೊಚ್ಚಲ ಪ್ರಶಸ್ತಿಯತ್ತ ಮುನ್ನಡೆದರು.
ತಾವು ಸರ್ವ್ ಮಾಡಿದ 10ನೇ ಗೇಮ್‌ನಲ್ಲಿ, ಜೊಕೊವಿಚ್ ಅವರ ಫೋರ್‌ಹ್ಯಾಂಡ್ ರಿಟರ್ನ್‌ನಲ್ಲಿ ಚೆಂಡು ನೆಟ್‌ಗೆ ಬಡಿಯುತ್ತಿದ್ದಂತೆಯೇ, ಅಲ್ಕರಾಜ್ ಗೆಲುವಿನ ಸಂಭ್ರಮ ಆಚರಿಸಿದರು.ಸ್ಪೇನ್‌ನ ಆಟಗಾರನಿಗೆ ದೊರೆತ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಇದು. ವಿಂಬಲ್ಡನ್‌ನಲ್ಲಿ ಎಂಟು ಸಲ ಚಾಂಪಿಯನ್ ಆಗಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟುವ ಜೊಕೊವಿಚ್ ಕನಸು ಭಗ್ನಗೊಂಡಿತು.ವಿಂಬಲ್ಡನ್ ಚಾಂಪಿಯನ್ ಆದ ಮೂರನೇ ಅತಿಕಿರಿಯ ಆಟಗಾರ ಎನಿಸಿಕೊಂಡರು.
ಅವರು ಕಳೆದ ವರ್ಷ ಅಮೆರಿಕ ಓಪನ್ ಜಯಿಸಿದ್ದರು. ಅದೇ ರೀತಿ ಋತುವಿನ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಗೆಲ್ಲುವ ಅವಕಾಶವನ್ನೂ ಕಳೆದುಕೊಂಡರು. ಜೊಕೊವಿಚ್, ಈ ವರ್ಷ ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಜಯಿಸಿದ್ದರು.ಸ್ಪೇನ್‌ನ ಯುವ ಆಟಗಾರ ಕಾರ್ಲೊಸ್ ಅಲ್ಕಾರಾಜ್ ವಿಂಬಲ್ಡನ್ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಅನುಭವಿ ಆಟಗಾರ ನೊವಾಕ್ ಜೊಕೊವಿಕ್ ರನ್ನರ್ ಅಪ್ ಆಗಿದ್ದಾರೆ.ಒಟ್ಟು ಐದು ಸುತ್ತುಗಳಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಸುತ್ತಿನಲ್ಲಿ ಅಂತಿಮವಾಗಿ 6-4 ಅಂಕಗಳಿಂದ ಮೇಲುಗೈ ಸಾಧಿಸಿದ ಅಲ್ಕರಾಜ್, ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದರು. ಯುವ ಆಟಗಾರ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿದರು.ಅನುಭವಿ ಆಟಗಾರ ನೊವಾಕ್ ಜೊಕೊವಿಕ್ ವಿರುದ್ಧ ದಿಟ್ಟ ಹೋರಾಟ ನಡೆಸಿದ ವಿಶ್ವದ ನಂಬರ್ ವನ್ ಆಟಗಾರ ಕಾರ್ಲೊಸ್ ಅಲ್ಕರಾಜ್, 1-6, 7-6 (6), 6-1, 3-6, 6-4ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು