ಏನಿದು ವೈಟ್ ರೂಮ್ ಶಿಕ್ಷೆ! ಕರಾಳ ಶಿಕ್ಷೆಗಳಲ್ಲಿ ಒಂದು
ಏನಿದು ವೈಟ್ ರೂಮ್ ಶಿಕ್ಷೆ! ಕರಾಳ ಶಿಕ್ಷೆಗಳಲ್ಲಿ ಒಂದು
ಇಡೀ ಪ್ರಪಂಚದಲ್ಲೇ, ಅಪಾಯಕಾರಿ ಮತ್ತು ಭಯಾನಕವೆಂದು ಪರಿಗಣಿಸಲಾದ ಒಂದು ಶಿಕ್ಷೆಯಿದೆ. ಅಲ್ಲಿ ಕೈದಿಗಳನ್ನು ಶಿಕ್ಷಿಸಲು ಬಿಳಿ ಬಣ್ಣವನ್ನು ಬಳಸಲಾಗುತ್ತದೆ. . ಆದರೆ ಈ ಶಿಕ್ಷೆಯಿಂದ ಅದೆಷ್ಟೋ ಕೈದಿಗಳು ಮಾನಸಿಕವಾಗಿ ಕುಗ್ಗಿ ಪ್ರಾಣ ಕಳೆದುಕೊಂಡಿದ್ದಾರಂತೆ.
ಹೌದು, ‘ವೈಟ್ ರೂಮ್ ಟಾರ್ಚರ್’ ಎಂಬ ಶಿಕ್ಷೆ ಇದೆ. ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಬಿಳಿ ಕೋಣೆಯೊಳಗೆ ಬಂಧಿಸಲಾಗುತ್ತದೆ. ಬಿಳಿ ಗೋಡೆಗಳು, ಬಿಳಿ ಬಾಗಿಲು ಮತ್ತು ತಿನ್ನುವ ಆಹಾರವೂ ಕೂಡ ಬಿಳಿಯದ್ದಾಗಿರುತ್ತದೆ.
ಶೌಚಾಲಯ ಮತ್ತು ಮೂಲಸೌಕರ್ಯವು ಸಂಪೂರ್ಣವಾಗಿ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಸೆಲ್‌ನಲ್ಲಿ ತುಂಬಾ ಮೌನವಿರುತ್ತದೆ. ಅಲ್ಲಿ ನೀವು ನಿಮ್ಮ ಧ್ವನಿಯನ್ನು ಮಾತ್ರ ಕೇಳಬಹುದು. ಒಬ್ಬ ವ್ಯಕ್ತಿಯನ್ನು ಈ ಕೋಣೆಯಲ್ಲಿ ಕೂಡಿ ಹಾಕಲು ಪ್ರಾರಂಭಿಸಿದ ನಂತರ, ಅವನ ಮೆದುಳು ಏಕಾಗ್ರತೆಯನ್ನು ತಲುಪಲು ಸಾಧ್ಯವಾಗದೆ.ಶೀಘ್ರದಲ್ಲೇ ತನ್ನ ಪ್ರೀತಿ ಪಾತ್ರರೆಲ್ಲರನ್ನು ಮರೆತು(ತನ್ನ ತಾಯಿಯನ್ನು ಕೂಡ) ಮಾನಸಿಕ ಖಿನ್ನತೆಗೆ ಒಳಗಾಗಿ ಹುಚ್ಚನಾಗಿ ಬಿಡುತ್ತಾನೆ.