ಮತ್ತೊಮ್ಮೆ ಜನತೆಯ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರಕಾರ
ಮತ್ತೊಮ್ಮೆ ಜನತೆಯ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರಕಾರ
ಇದನ್ನು ಉಚಿತ ಏನ್ನುವರೇ?ಇದು ಉಚಿತ ಅನ್ನುವ ಪದಕ್ಕೆ ಆದ ಅವಮಾನವಲ್ಲವೆ!
- ವಿದ್ಯುತ್ ಬಿಲ್ ಏರಿಕೆ
- ಮದ್ಯದ ದರಕ್ಕೆ ಟ್ಯಾಕ್ಸ್
- ಹಾಲಿನ ದರ ಏರಿಕೆ
ಇದೀಗ ಸರಕು ಸಾಗಾಣಿಕೆ ವಾಹನಗಳ ಟ್ಯಾಕ್ಸ್ ದರ ಏರಿಕೆ
ಹೊಸ ವಾಹನಗಳ ನೋಂದಣಿ ಸಮಯದಲ್ಲಿ ಸರಕು ವಾಹನಗಳ ಒಟ್ಟಾರೆ ತೂಕವು 1500- 2 ಸಾವಿರ ಕಿ.ಗ್ರಾಂ. ಮೀರದಿದ್ದರೆ ಅವುಗಳಿಗೆ 20 ಸಾವಿರ ರು. (ಈ ಹಿಂದೆ 10 ಸಾವಿರ ರು. ಇತ್ತು),2 ಸಾವಿರ ಕಿ.ಗ್ರಾಂ.ನಿಂದ 3 ಸಾವಿರ ಕಿ.ಗ್ರಾಂ. ಮೀರದಿದ್ದರೆ 30 ಸಾವಿರ ರು. (15 ಸಾವಿರ ರು. ಇತ್ತು),
3 ಸಾವಿರ ಕಿ.ಗ್ರಾಂ.ನಿಂದ 5500 ಕಿ.ಗ್ರಾಂ. ಮೀರದಿದ್ದರೆ 40 ಸಾವಿರ ರು. (20 ಸಾವಿರ ರು. ಇತ್ತು), ಪೂರ್ಣಾವಧಿ ತೆರಿಗೆ ಪಾವತಿಸಬೇಕು.
5000 ಕಿ.ಗ್ರಾಂ.ನಿಂದ 7500 ಕಿ.ಗ್ರಾಂ. ಮೀರದಿದ್ದರೆ 60 ಸಾವಿರ ರು.7500 ಕಿ.ಗ್ರಾಂ.ನಿಂದ 9500 ಕಿ.ಗ್ರಾಂ. ಮೀರದಿದ್ದರೆ 80 ಸಾವಿರ ರೂ,9500 ಕಿ.ಗ್ರಾಂ.ನಿಂದ 12 ಸಾವಿರ ಕಿ.ಗ್ರಾಂ. ಮೀರದಿದ್ದರೆ ಒಂದು ಲಕ್ಷ ರು. ಪೂರ್ಣಾವಧಿ ತೆರಿಗೆ ಪಾವತಿಸಬೇಕು.
ಶಿಕ್ಷಣ ಸಂಸ್ಥೆಗಳ ಒಡೆತನದಲ್ಲಿರುವ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಪ್ರಯಾಣದ ಸಲುವಾಗಿ ಮಾತ್ರ ಓಮ್ನಿ ಬಸ್ ಮತ್ತು ಖಾಸಗಿ ಸೇವಾ ವಾಹನಗಳನ್ನು ಬಳಸುತ್ತಿದ್ದರೆ ಫೆä್ಲೕರ್ ವಿಸ್ತೀರ್ಣದ ಪ್ರತಿ ಚದರ ಮೀಟರಿಗೆ ತ್ರೈಮಾಸಿಕ ತೆರಿಗೆಯನ್ನು 80 ರು.ಗಳಿಂದ 200 ರೂ ಗಳನ್ನು ಏರಿಕೆ ಮಾಡಲಾಗಿದೆ.