ನಾನೊಂದು ಕನಸ ಕಂಡಿರುವೆನು: ಕವಿ-ಮನ
ನಾನೊಂದು ಕನಸ ಕಂಡಿರುವೆನು..
ಅದು ನನ್ನನ್ನು ಮುಗಿಲೆತ್ತರಕ್ಕೆ ಏರಿಸಿತು..
ನನ್ನಂತರಂಗದಾಳದಲ್ಲಿ ಮಿನುಗುತಾ ಸಾಗುತ್ತಿದೆ ಆ ಕನಸು…
ಪ್ರತಿಯೊಂದು ಹೆಜ್ಜೆಯ ಇಡುವಾಗಲೂ ನನ್ನ ಮನಸ್ಸು ನೆನಪಿಸುತ್ತಿದೆ ಆ ಕನಸನು…
ನೆನಪಿಸುತ್ತಾ ಅದೇ ನನಸು ಎಂಬ ಭಾವನೆಯು ಹುರಿದುಂಬುತ್ತಿದೆ ನನ್ನ ಮನದಲಿ….
ಆದರೆ ಅದು ಕನಸಲ್ಲವೇ ಎಂದು ನನ್ನ ಮನ ಹೇಳುತ್ತಿದೆ….
ನಾನು ಯೋಚಿಸುತ್ತಿದೆ ಆ ಕನಸು ನನ್ನ ಬಿಟ್ಟು ಹೋಗದಿರಲು ಕಾರಣವೇನು ಎಂದು??
ಆ ಕನಸು ನನ್ನ ಬಿಟ್ಟು ಹೋಗದಿರಲು ಕಾರಣವೇನೆಂದು ತಡವಾಗಿಯಾದರು ನನಗೆ ತಿಳಿಯಿತು, ಹೇಗೆಂದರೆ…..
ಅದು ನನಗೆ ತಿಳಿದ ಸಮಯದಲ್ಲಿ ನಾನು ಆ ಕನಸ್ಸಿನಲ್ಲಿ ಕಂಡ ಮುಗಿಲೆತ್ತರದಲ್ಲಿದ್ದೆ…..
ಕವಯಿತ್ರಿ: ✍️ಕಾವ್ಯಸಂಜೀವಿ
ಸಾಮೆತ್ತಡ್ಕ, ಈಶ್ವರಮಂಗಲ