ಆಗಸ್ಟ್ 1ರಿಂದ ಹೊಟೇಲ್ ತಿಂಡಿ, ಕಾಫಿ, ಚಹಾಗಳ ಬೆಲೆಯಲ್ಲಿ ಏರಿಕೆ!
ಆಗಸ್ಟ್ 1ರಿಂದ ಹೊಟೇಲ್ ತಿಂಡಿ, ಕಾಫಿ, ಚಹಾಗಳ ಬೆಲೆಯಲ್ಲಿ ಏರಿಕೆ!
ಈಗಾಗಲೇ ಅಕ್ಕಿ, ತರಕಾರಿ ಸೇರಿ ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಹೊಟೇಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಿದ್ಯುತ್ ದರ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಹೊಟೇಲ್‌ಗಳ ತಿಂಡಿಗಳ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಅಂತ ಬೆಂಗಳೂರು ಹೊಟೇಲ್‌ಗಳ ಸಂಘ ತಿಳಿಸಿದೆ. ಕಾಫಿ ಪುಡಿ ಬೆಲೆ ಹೆಚ್ಚಾಗಿದೆ. ಆಗಸ್ಟ್ 1ರಿಂದ ಹಾಲಿನ ದರವು ಹಚ್ಚಾಗಲಿದೆ. ತಿಂಡಿಗಳ ದರ 5 ರೂ. ಹಾಗೂ ಊಟಕ್ಕೆ 10 ರೂ ಹೆಚ್ಚಳವಾಗಲಿದೆ. ಕಾಫಿ ಹಾಗೂ ಚಹಾ ಬೆಲೆ 2 ರಿಂದ 3 ರೂಪಾಯಿ ಹೆಚ್ಚಳವಾಗಲಿದೆ. ಇತ್ತ ಈಗಾಗಲೇ ಕೆಲ ಹೊಟೇಲ್‌ಗಳಲ್ಲಿ ದರಗಳನ್ನ ಹೆಚ್ಚಿಸಲಾಗಿದೆ. ಅಧಿಕೃತವಾಗಿ ಆಗಸ್ಟ್ 1ರಿಂದ ದರಗಳಲ್ಲಿ ಹೆಚ್ಚಳವಾಗಲಿದೆ ಅಂತ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ.ಈ ಬಗ್ಗೆ ನಾಳೆ ಮಂಗಳವಾರ ನಡೆಯುವ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತೆ ಅಂಥ ಸಂಘದ ಕಾರ್ಯದರ್ಶಿ ವಿರೇಂದ್ರ ಕಾಮತ್ ಹೇಳಿದ್ದಾರೆ.
ಆಗಸ್ಟ್ 1ರಿಂದ ಹೋಟೆಲ್ ತಿಂಡಿ, ತಿನಿಸು, ಕಾಫಿ, ಟೀ ದರ ಹೆಚ್ಚಳ ಆಗಲಿದೆ. ಈ ಬಗ್ಗೆ ಜುಲೈ 25ರಂದು ಅಧಿಕೃತವಾಗಿ ಘೋಷಿಸಲಿದ್ದೇವೆ. ಶೇ.10ರಷ್ಟು ದರ ಹೆಚ್ಚು ಮಾಡೋದು ಅನಿವಾರ್ಯವಾಗಿದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.