ಮರೆಯಲಾರದ ನೆನಪುಗಳು,ಯಾರೀತ ಪ್ರವೀಣ್ ನೆಟ್ಟಾರು
ಮರೆಯಲಾರದ ನೆನಪುಗಳು,ಯಾರೀತ ಪ್ರವೀಣ್ ನೆಟ್ಟಾರು
ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಹಾಗೂ ಯುವಮೋರ್ಚಾ ಸುಳ್ಯ ಮಂಡಲ ಇದರ ವತಿಯಿಂದ ಜಿಹಾದಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವಮುಖಂಡ ದಿ! ಪ್ರವೀಣ್ ನೆಟ್ಟಾರು ಅವರ ಸ್ಮ್ರತಿ ದಿನ ಹಾಗೂ ರೋಟರಿ blood ಬ್ಯಾಂಕ್ ಪುತ್ತೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಇಂದು ಬೆಳ್ಳಾರೆ,ಪೆರುವಾಜೆ ಜೆ.ಡಿ. ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮದ ಮೊದಲಿಗೆ ಪ್ರವೀಣ್ ನೆಟ್ಟಾರು ಮನೆಯ ಪರಿಸರದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಾಣೆ ಮಾಡಲಾಯಿತು.
ನಂತರ ಜೆ.ಡಿ ಆಡಿಟೋರಿಯಂನಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಯಿತು ದೀಪವನ್ನು ಬೆಳಗಿಸುವುದರ ಮೂಲಕ
ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್,
ಬಿ ಜೆ ಪಿ ಯುವ ಮೋರ್ಚಾ ಅಧ್ಯಕ್ಷ ಕೃಷ್ಣ ಎಂ ಆರ್, ಪ್ರವೀಣ್ ಅವರ ತಂದೆ ಶೇಖರ ಪೂಜಾರಿ ದಂಪತಿಗಳು ವೇದಿಕೆಯಲ್ಲಿದ್ದರು. ಕಾರ್ಯಕರ್ತರು,ರಕ್ತದಾನಿಗಳು, ಉಪಸ್ಥಿತಿದ್ದರು.
ಮಾಸದ ನೆನಪುಗಳು,ಯಾರೀತ ಪ್ರವೀಣ್ ನೆಟ್ಟಾರು
ಪ್ರವೀಣ್ ನೆಟ್ಟಾರ್ 36 ವರ್ಷದವರು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ. ಜೊತೆಗೆ ಹಿಂದೂ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡವರು. ಸುಳ್ಯ ತಾಲೂಕಿನಲ್ಲಿ ಯುವ ಮೋರ್ಚಾ ಸಂಘಟನೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್ ಸಕ್ರಿಯರಾಗಿದ್ದರು ಅಂತ ಹೇಳಲಾಗುತ್ತಿದೆ. ಜೊತೆಗೆ ಹಿಂದೂ ಸಂಘಟನೆಯಲ್ಲಿ ಚತುರನಾಗಿ ಕರ್ತವ್ಯ ನಿರ್ವಹಿಸ್ತಿದ್ದರು, ಜೊತೆಗೆ ಹಿಂದೂ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡವರು. ಅಲ್ಲದೇ ಜಿಲ್ಲಾ ಯುವ ಮೋರ್ಚಾದಲ್ಲಿ ಸಕ್ರಿಯನಾಗಿ, ಬಿಜೆಪಿ ಬಲಪಡಿಸಲು ಶ್ರಮಿಸುತ್ತಿದ್ದರು ,
ನೆಟ್ಟಾರಿನ ಪ್ರವೀಣ್, ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ನಡೆಸುತ್ತಿದ್ದರು. 2022ರ ಜುಲೈ 26ರ ರಾತ್ರಿ ಸುಮಾರು 8.30ಕ್ಕೆ ವ್ಯಾಪಾರ ಮುಗಿಸಿ ಅಂಗಡಿ ಬಾಗಿಲು ಹಾಕಿ ಸ್ಕೂಟರ್‌ನಲ್ಲಿ ಕುಳಿತು ಮನೆಗೆ ಹೊರಡಲು ಸಿದ್ಧರಾಗಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಎರಗಿ ಹತ್ಯೆ ನಡೆಸಿದ್ದರು.
ಮರುದಿನ ಪ್ರವೀಣ್ ಮೃತ ಶರೀರದ ಮೆರವಣಿಗೆ ಪುತ್ತೂರಿನಿಂದ ಬೆಳ್ಳಾರೆಗೆ ಸಾಗಿ ಬಂತು. ಬೆಳ್ಳಾರೆಯ ಬಸ್ ನಿಲ್ದಾಣದ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು
ನಮ್ಮ ಹಿಂದೂ ಕಾರ್ಯಕರ್ತರ ಭುಗಿಲೆದ್ದ ಆಕ್ರೋಶ
ಬೆಳ್ಳಾರೆಗೆ ಆಗಮಿಸಿದ್ದ ಜನಪ್ರತಿನಿಧಿಗಳಿಗೆ ನಮ್ಮ ಹಿಂದೂ ಕಾರ್ಯಕರ್ತರು ದಿಗ್ಬಂಧನ ವಿಧಿಸುವ ಮೂಲಕ ಬಿಜೆಪಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಅಲುಗಾಡಿಸಿ, ಕಾರಿನ ಚಕ್ರಗಳನ್ನು ಪಂಕ್ಚರ್ ಮಾಡಿ, ಪಲ್ಟಿ ಮಾಡಲು ಯತ್ನಿಸಿದ್ದರು.
ವಿಡಿಯೋ ಕ್ಲಿಕ್ ಮಾಡಿ👇
ಬಳಿಕ ಪ್ರವೀಣ್ ಮನೆಗೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಬಂದು ಮನೆಯವರಿಗೆ ಸಾಂತ್ವನ ಹೇಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದರು
ಪೊಲೀಸರು ಬೆಳ್ಳಾರೆಯ ಶಫೀಕ್(27), ಸವಣೂರಿನ ಝಾಕೀರ್, ಶಿಹಾಬುದ್ದೀನ್ ಸುಳ್ಯ(31), ಬಶೀರ್ ಎಲಿಲೆ(29), ರಿಯಾಸ್ ಅಂಕತ್ತಡ್ಕ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದರು.
ಪ್ರಕರಣ ಎನ್‌ಐಎಗೆ;
ಹೊರ ರಾಜ್ಯದ ಆರೋಪಿಗಳ ಕೈವಾಡ ಇರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಪ್ರಕರಣವನ್ನು ಎನ್‌ಐಗೆ ವಹಿಸಿತ್ತು. ಅದರಂತೆ ಆಗಸ್ಟ್ ನಲ್ಲಿ ರಾಷ್ಟಿÅàಯ ತನಿಖಾ ದಳ(ಎನ್‌ಐಎ) ಪ್ರಕರಣವನ್ನು ಕೈಗೆತ್ತಿಕೊಂಡಿತು. ಪಿಎಫ್ಐ ಇಂತಹ ಉದ್ದೇಶಿತ ದ್ವೇಷದ ಹತ್ಯೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಎನ್‌ಐಎ ಪ್ರಕರಣ ಕೈಗೆತ್ತಿಕೊಂಡ ವೇಳೆ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ 21 ಮಂದಿಯ ವಿರುದ್ಧ ಎನ್‌ಐಎ ಇದುವರೆಗೆ ಆರೋಪ ಪಟ್ಟಿ ಸಲ್ಲಿಸಿದೆ.
ಎಂಟು ಮಂದಿ ನಾಪತ್ತೆ
ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ ಎಂದು ಎನ್‌ಐಎ ತಿಳಿಸಿದೆ. ಕೊಡಗಿನ ಅಬ್ದುಲ್ ನಾಸಿರ್, ಅಬ್ದುಲ್ ರೆಹಮಾನ್ ಮತ್ತು ಬೆಳ್ತಂಗಡಿಯ ನೌಷದ್ ಹಾಗೂ ಐವರು ಸೇರಿದಂತೆ 8 ಮಂದಿ ತಲೆಮರೆಸಿಕೊಂಡಿದ್ದಾರೆ. ತುಫೈಲ್, ಮೊಹಮ್ಮದ್ ಮುಸ್ತಾಫ ಸುಳಿವಿಗೆ ತಲಾ 5 ಲಕ್ಷ ರೂ. ಉಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ಸುಳಿವಿಗೆ ತಲಾ 2 ಲಕ್ಷ ಬಹುಮಾನ ಘೋಷಿಸಲಾಗಿದೆ.
ಆರೋಪಿಗಳಿಗೆ ಗಡುವು;
ತಲೆಮರೆಸಿಕೊಂಡಿರುವ ಆರೋಪಿಗಳಿಗೆ ನ್ಯಾಯಾಲಯದ ಸೂಚನೆಯ ಮೇರೆಗೆ ಶರಣಾಗುವಂತೆ ಎನ್‌ಐಎ ಸೂಚಿಸಿದೆ. ಆ. 18 ರ ಮೊದಲು ಶರಣಾಗದಿದ್ದರೆ ಅವರ ಆಸ್ತಿ ಜಪ್ತಿ ಮಾಡುವುದಾಗಿ ಎಚ್ಚರಿಸಿದೆ. ಇದು ಎರಡನೆ ಬಾರಿಯ ಗಡುವಾಗಿದ್ದು, ಆರೋಪಿಗಳ ಮನೆಗಳಿಗೆ ಆದೇಶ ಪ್ರತಿ ಅಂಟಿಸಲಾಗಿದೆ.
ಪಿಎಫ್ಐ ನಿಷೇಧ;
ಪ್ರವೀಣ್ ಹತ್ಯೆ ಬಳಿಕ ಪಿಎಫ್ಐ ನಿಷೇಧಕ್ಕೆ ಹೆಚ್ಚಿನ ಆಗ್ರಹ ಕೇಳಿಬಂದಿತ್ತು. ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿ, 5 ವರ್ಷಗಳ ಅವಧಿಗೆ ನಿಷೇಧಿಸಿ 2022ರ ಸೆಪ್ಟೆಂಬರ್ 28ರಂದು ಕೇಂದ್ರ ಸರಕಾರ ಆದೇಶಿಸಿತ್ತು.
ನೆರವು
ಮನೆಗೆ ಆಧಾರ ಸ್ತಂಭವಾಗಿದ್ದ ಪ್ರವೀಣ್ ನಿಧನದಿಂದ ಮನೆಯ ಆಧಾರ ಸ್ತಂಭವೇ ಕಳಚಿತ್ತು. ಕುಟುಂಬದ ನೆರವಿಗೆ ಅಂದು ಹಲವರು ಸಹಕರಿಸಿದ್ದರು. ಸಿಎಂ ಬಸವರಾಜ್ ಬೊಮ್ಮಾಯಿ ಆದೇಶದ ಹಿನ್ನೆಲೆ ನೂತನ ಕುಮಾರಿ ಅವರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗಿದೆ.
ದಯಾನಂದ ಕಲ್ನಾರ್