• 8 ಸೆಪ್ಟೆಂಬರ್ 2024

ಯೋಧನಾತ್ಮದ ನುಡಿ:ಪರಿಮಳ ಐವರ್ನಾಡು

 ಯೋಧನಾತ್ಮದ ನುಡಿ:ಪರಿಮಳ ಐವರ್ನಾಡು
Digiqole Ad

ಯೋಧನಾತ್ಮದ ನುಡಿ:ಪರಿಮಳ ಐವರ್ನಾಡು

ಭಾರತಾಂಬೆಯ ಪುತ್ರನಾಗಿಹೆ

ವೀರಯೋದನೆಂಬ ಹೆಮ್ಮೆ ಎನಗೆ

ಹಿಮವಾದರೇನು ಬಂಡೆಯಾದರೇನು

ಈ ಮಣ್ಣಲಿ ದಿಟ್ಟನದಲಿ ಹೋರಾಡಿದೆ

 

ಕ್ರೂರ ವೈರಿಯ ಸಂಚನಂದು

ವೀರಾವೇಶದಲಿ ಮುರಿದೆನಂದು

ಹೆಮ್ಮೆಯಲಿ ಸಾರುತಿಹೆನು

. ಕೇಳಿರೆನ್ನೆಯ ಬಂಧುಗಳೇ

 

ಉಗ್ರಗಾಮಿಯ ಉಗ್ರನೋಟವ

ಸಿಡಿದು ಸೀಳಿದ ಸಿಡಿಲಮರಿ ನಾನು

ಕಾಡು ಮೇಡಿನಲಿ ಕಣಿವೆ ಹಾದಿಯಲಿ

ರೋಷದೊಳ್ ಕಾದಡಿದ ಪ್ರಳಯರುಧ್ರ ತಾನು

 

ಜಮ್ಮು ಕಾಶ್ಮೀರ ಹಾದಿಯಲಿ ಪಯಣ

ಪುಲ್ವಾಮದಲಿ ಆತ್ಮಹುತಿಹುತಿ ದಾಳಿ

ಹೇಡಿ ವೈರಿಯ ಕಪಟ ವೇಷದಲಿ

ಪ್ರಾಣತೆತ್ತರು ಭಾರತೀಯ ಯೋದರು

 

ಭಾರತಿಯ ಮಡಿಲಲಿ ಪವಡಿಸಿಹೆ

ತಾಯಿ ಭಾರತಿಗೆ ಪ್ರಾಣತೆತ್ತಿರುವೆ

ದೇಹ ಬೇರೆ ಆತ್ಮ ಬೇರೆಯಾಗುತಿಹುದು

ತಂದೆ ತಾಯಿ ಪತ್ನಿ ಮಕ್ಕಳು ಕಣ್ಣ ಮುಂದಿಹರು

 

ಅಮ್ಮಾತೀರಿತ್ತೆನೆಗೆ ಇಹದ ಋಣ

ಹೋಗುತ್ತಿರುವೆ ಮಸಣ ವನ

ಪತ್ನಿ ಮಕ್ಕಳ ಸಾಕಿ ಸಲಹಿರಿ

ಸೊಸೆಯ ಮಗಳಂತೆ ಕಾಣಿರಿ

 

ಪುಟ್ಟ ಕಂದನೇ ಮನ್ನಿಸೆನ್ನನು

ನಿನ್ನ ತ್ಯಜಿಸಿ ಹೊರಟಿಹೆನು

ನಿನಗಾರು ಗತಿಯೆಂದು ಕೊರಗದಿರು

ಮಾತೆಯವಳು ನಿನ್ನ ಪೊರೆವಳು

 

ತಾಯಿ ಭಾರತಿಯೇ ನಿನಗೆ ನಮನ

ಮತ್ತೆ ಹುಟ್ಟಿ ಬರುವೆ ನಿನ್ನ ತಾಣ

ನಾನಾಗಬೇಕು ದೇಶ ಕಾಯೋ ರಕ್ಷಕ

ಈ ಪುಣ್ಯ ಭೂಮಿಯ ವೀರ ಸೈನಿಕ

 

ಪರಿಮಳ ಎನ್ ಎಂ ಐವರ್ನಾಡು ಸುಳ್ಯ

 

ಜೈ ಹಿಂದ್ 🙏🏼🙏🏼🙏🏼🙏🏼🙏🏼🙏🏼

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ