ಓದುಗರಿಗೆ ಧನ್ಯವಾದಗಳು:ಗೋಲ್ಡ್ ಫ್ಯಾಕ್ಟರಿ ನ್ಯೂಸ್
ಉತ್ತಮ ಧ್ಯೇಯ ಇಟ್ಟುಕೊಂಡು ಮಾಡುವ ಕಾಯಕಕ್ಕೆ.. ಖಂಡಿತ ಫಲ ಸಿಗುತ್ತದೆ ಎಂಬುದಕ್ಕೆ ನಮ್ಮ “ಗೋಲ್ಡ್ ಫ್ಯಾಕ್ಟರಿ ನ್ಯೂಸ್ ಚಾನೆಲ್” ಸಾಕ್ಷಿ..!
ಗೋಲ್ಡ್ ಫ್ಯಾಕ್ಟರಿ ಮೀಡಿಯಾ ಎಂಬ ಖಾಸಗಿ ಸಂಸ್ಥೆ ಓದುಗರಿಗಾಗಿ G.F.N ( GOLD FACTORY NEWS)ಹೆಸರಿನಲ್ಲಿ ಅಂಬೆಗಾಲಿಡುತ್ತಾ ಈಗ ತಾನೆ ಒಂದು ವರ್ಷವನ್ನು ಪೂರೈಸಿ ಓದುಗರ ಮನ ಗೆದ್ದು ಮನೆಮಾತಾಗಿ 25000 ಬೆಂಬಲಿಗರನ್ನು ದಾಟಿದೆ ಎನ್ನಲು ತುಂಬಾ ಖುಷಿ ಪಡುತ್ತಿದ್ದೇವೆ…
ಇಲ್ಲಿಯ ವರೆಗೆ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹಿಸಿದ ಎಲ್ಲಾ ಸಹೃದಯಿ ನೆಚ್ಚಿನ ಓದುಗರಿಗೂ. ಪತ್ರಕರ್ತರ ಬಳಗಕ್ಕೂ ಹಾಗು. ಕವಿ ಸಾಹಿತಿಗಳಿಗೂ ನಮ್ಮ ಗೋಲ್ಡ್ ಫ್ಯಾಕ್ಟರಿ ನ್ಯೂಸ್ ಚಾನೆಲ್ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸುತ್ತಿದೆ….
ಇನ್ನುಮುಂದೆಯೂ. ಹೀಗೆ ನಿಮ್ಮ ಸಹಕಾರ ಬೆಂಬಲ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಆಶಿಸುತ್ತೇವೆ..
ಗೋಲ್ಡ್ ಫ್ಯಾಕ್ಟರಿ ನ್ಯೂಸ್ ಸಮಾಜಮುಖಿ ಕಾರ್ಯಗಳ ವಿವರ
ನಮ್ಮ ಗೋಲ್ಡ್ ಫ್ಯಾಕ್ಟರಿಯು ಪ್ರಾರಂಭದಿಂದಲೂ ಹಲವಾರು ಸೇವೆಗಳನ್ನು ಮಾಡುತ್ತಾ ಬಂದಿರುತ್ತದೆ.
- ಗೋಶಾಲೆಗಳಿಗೆ ಆಹಾರ ಮತ್ತು ದೇಣಿಗೆ( ಪ್ರತಿ ತಿಂಗಳು)
- ಬಡ ವಿದ್ಯಾರ್ಥಿಗಳಿಗೆ ಧನಸಹಾಯಗಳು.
- ಬಡ ಕುಟುಂಬದ ರೋಗಿಗಳಿಗೆ ಧನಸಹಾಯ.
- ಕನ್ನಡ ತುಳು ಸಾಹಿತಿಗಳನ್ನು. ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಅವರಿಗೊಂದು ಉಚಿತವಾದ ವೇದಿಕೆ
- ಹಲವಾರು ವಿದ್ಯಾರ್ಥಿಗಳಿಗೆ ಕಲೆಗೆ ಮತ್ತು ಓದಲು ಅವಶ್ಯಕತೆ ಇರುವ ಉಪಯುಕ್ತ ವಸ್ತುಗಳು
- ಹಲವಾರು ಕಲಾವಿದರಿಗೆ ಅವರ ಕಲೆಗಾರಿಕೆಯನ್ನು ಪ್ರಕಟಪಡಿಸಲು ಯುವ ಕಲಾವಿದರಿಗೆ ಉಚಿತವಾದ ವೇದಿಕೆ( ಉಚಿತ ಚಿತ್ರೀಕರಣದ ಸೌಲಭ್ಯ)
ಗೋಲ್ಡ್ ಫ್ಯಾಕ್ಟರಿ ನ್ಯೂಸ್ ನ ಸಮಾಜಮುಖಿ ಪತ್ರಕರ್ತರು
- ಪ್ರಸಾದ್ ಕಾಟೂರು,( ಸುಳ್ಯ ಬಿಜೆಪಿ)
- ಎಂ ರಾಮ ಈಶ್ವರಮಂಗಲ,
- ಶಮಂತ್ ಕುಲ್ಕುಂದ,
- ದಿಶಾ ಕೆ ಎಸ್,
- ಆಕರ್ಷ. ಕೆ
- ಶರತ್ ಆಳ್ವಾ ಪುತ್ತೂರು
- ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು,ಈಶ್ವರಮಂಗಲ
- ನಯನ್ ಕುಮಾರ್
- ಅನಾಮಿಕ
ಇಂತಹ ಉತ್ತಮ ಕಾರ್ಯಗಳನ್ನು ಮಾಡಲು ಓದುಗರಾದ ನಿಮ್ಮ ಪ್ರೀತಿಯ ಪ್ರೋತ್ಸಾಹವೇ ಕಾರಣ.. ಅದಕ್ಕಾಗಿ ದೇಶ ವಿದೇಶಗಳಲ್ಲಿ ಇದ್ದು ನಮ್ಮನ್ನು ಬೆನ್ನು ತಟ್ಟಿ ಬೆಳೆಸಿದ ಎಲ್ಲಾ ಬಂದು ಭಾಂದವರಿಗೂ.ಕಾರ್ಯಕರ್ತರಿಗೂ, ಹಿತೈಷಿ ಮಿತ್ರರಿಗೂ, ಮತ್ತೊಮ್ಮೆ ಮಗದೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಾ… ಹೀಗೆಯೇ ಇನ್ನೂ ಹೆಚ್ಚಿನ ಅಧಿಕ ಬೆಂಬಲಿಗರೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುವಂತವರಾಗೋಣ…
ಸರ್ವೇ ಸಜ್ಜನೋ ಸುಖಿನೋ ಭವಂತು..
ಇನ್ನಷ್ಟು ಸಮಾಜಮುಖಿ ಸೇವೆಗಳನ್ನು ಗೋಲ್ಡ್ ಫ್ಯಾಕ್ಟರಿ ತಂಡ ಮಾಡಲಿದೆ..
ಇತೀ,