• 8 ಸೆಪ್ಟೆಂಬರ್ 2024

ಸತ್ತು ಸಾಧಿಸುವುದಾದರು ಏನು..!!

 ಸತ್ತು ಸಾಧಿಸುವುದಾದರು ಏನು..!!
Digiqole Ad

ಸತ್ತು ಸಾಧಿಸುವುದಾದರು ಏನು..!!

ಮನುಷ್ಯ ಅಂದ ಮೇಲೆ ಅವನಿಗೆ ಹಲವಾರು ಹವ್ಯಾಸಗಳು ಇರುತ್ತವೆ… ಒಳ್ಳಯ ಹವ್ಯಾಸ ಹೆಸರು ಗಳಿಸಲಿದ್ದರೆ.. ಕೆಟ್ಟ ಹವ್ಯಾಸ ಉಸಿರನ್ನು ನಿಲ್ಲಿಸುತ್ತದೆ… ಅದಕ್ಕೆ ಹಲಾವಾರು. ಈಗಿನ ಹುಚ್ಚು ಘಟನೆಳೇ ಸಾಕ್ಷಿ..

ಈಗ ಟೀವಿ ಮೊಬೈಲ್ ಯಾವುದರಲ್ಲಿ ನೋಡಿದರು ..‌ ಅಪಮೃತ್ಯುವಿನಲ್ಲಿ ಸಾವಿಗೀಡಾದ. ಸಾಲು ಸಾಲು ವರದಿಗಳೇ ಬರುತ್ತಿರುತ್ತದೆ.. ಕೇಲವು ಅನಿರೀಕ್ಷಿತ ಕೆಲವು ನಿರೀಕ್ಷಿತ ಮರಣಗಳು…

ಹೆತ್ತವರು ಹೊಟ್ಟೆ ಬಟ್ಟೆ ಕಟ್ಟಿ ತಮ್ಮ ಮಕ್ಕಳು ಕಲಿತು ಒಳ್ಳೆಯ ವಿದ್ಯಾವಂತರಾಗಿ ಉಳಿದವರಿಗೆ ಮಾದರಿಯಾಗಲಿ ಎಂಬ ಕನಸಿನೊಂದಿಗೆ ಮಕ್ಕಳನ್ನು. ಸಾಕಿ ಸಲಹುತ್ತಾರೆ… ಕೆಲವು ಮಕ್ಕಳು ಒಳ್ಳೆಯ ನಡತೆಯಿಂದ ಹೆತ್ತವರ ಕಣ್ಣಲ್ಲಿ ಹೊಳಪನ್ನು ತಂದರೆ.

ಇನ್ನು ಕೆಲವರು ಕಣ್ಣಲ್ಲಿ ನೀರು ಬರಿಸುವ ಕೆಲಸವನ್ನು ಮಾಡ್ತಾರೆ…

ಈಗಿನ ಎಲ್ಲಾ ವಯೋಮಾನದವರೂ ಕೂಡ ಸೆಲ್ಫಿ, ಎಂಬ ಹುಚ್ಚಿನಲ್ಲಿ ಇದ್ದವರೇ .. ಆದರೆ ಅದರಲ್ಲೂ. ರೀಲ್ಸ್ , ವೀಲ್ಸ್ , ಎಂಬ ಹುಚ್ಚಾಟದಲ್ಲಿ “ಟ್ರೆಂಡ್ ” ಎಂಬ ಮರಣದ ಕುಣಿಕೆಯ ಬಲೆಗೆ ಬಿದ್ದು. ಸತ್ತವರೆ ಹಲವಾರು …

ಚಟ ಇರಬೇಕು. ಆದ್ರೆ.. ಆದ್ರೆ ಅನವಶ್ಯಕವಾಗಿ ಕೊಟ್ಟೆ ಕಟ್ಟಿ ಚಟ್ಟದಲ್ಲಿ ಮಲಗುವಂತ್ತಹ ಚಟ ಇರಬಾರದು..

ಕೆಲವರು ಸ್ಥಳಿಯರು ಅಥವ ಸ್ನೇಹಿತರು ಹೇಳುವ ಬುದ್ಧಿ. ಮಾತನ್ನು ಕೇಳದೆ. ಅಪಾಯದ ಎಚ್ಚರಿಕೆಯನ್ನು ಧಿಕ್ಕರಿಸಿ.. ಭೋರ್ಗರೆವ ಕಡಲಿಗೆ ಇಳಿಯುವುದು. ತೆರೆ ಅಪ್ಪಳಿಸುವ ಬಂಡೆಗಳಲ್ಲಿ. ರೀಲ್ಸ್.. ನದಿಯಲ್ಲಿ ಈಜ ಬೇಡಿ ಕಯವಿದೆ ಎಂದರೂ ಕೇಳದೆ ಈಜಲು ಹೋಗಿ ಹೆತ್ತವರಿಗೂ .. ಊರಿನವರಿಗೂ.. ಮುಳುಗುತಜ್ಞರಿಗೂ. ನಾಲ್ಕೈದು ದಿನ ಕೆಲಸ ಕೊಡಿಸುತ್ತಾರೆ..

ಇನ್ನೂ ಜಲಪಾತಗಳ ಝರಿಗಳಲ್ಲಿ ಜಾರಿ ಹೋಗೊದು…

ಕರೆಂಟಿನಲ್ಲಿ ಸರಸ, ಮಹಡಿಯಿಂದ ಜಿಗಿಯುವ ಸಾಹಸ , ಪ್ರಪಾತಗಳ ಬಂಡೆಯ ಮೇಲೆ ಕಸರತ್ತು, ಬೈಕಲ್ಲಿ ವೀಲಿಂಗ್ ಮಾಡಿ ತಾವು ಸಾಯೊದು ಅಲ್ಲದೆ ಒಟ್ಟಿಗೆ ಇದ್ದವರಿಗೆ ಸಾವನ್ನು ಕರುಣಿಸುವುದು.. ಹೀಗೆ ಹಲಾವಾರು ಸಾವುಗಳನ್ನು ತಾವೇ ತಮ್ಮ ಅಹಂಕಾರದಿಂದ ತಂದು ಕೊಳ್ಳುತ್ತಾರೆ… ಯಾಕೆ ಈ ಹುಚ್ಚು ಸಾಹಸ..? ಯಾವ ಕೀರ್ತಿಯನ್ನು ಗಳಿಸಲು ..?

ಒಂದು ಅಪಾಯದ ಜಾಗದಲ್ಲಿ. ರೀಲ್ಸ್ ಮಾಡಲು ಹೋಗಿ ಸತ್ತರೆ. ರೀಲ್ಸ್‌ಗೆ ಕೋಟಿ ವೀವ್ಸ್ ಲೈಕ್ ಕಾಮೆಂಟ್ ಬರಬಹುದು.. ಆದರೆ ಹೋದ ಜೀವ ಮರಳಿ ಬರಬಹುದೇ…? ಅಷ್ಟು ಅಪಾಯದಲ್ಲಿ ಫೋಟೊ ವೀಡಿಯೋ ಮಾಡಿ. ಯಾವ ಪ್ರಶಸ್ತಿ ಗಳಿಸಲು ಈ ಕೆಲಸ..?

ಕೆಲವು ಹುಚ್ಚು ಪ್ರೇಮಿಗಳು ವಿಷ ಕುಡಿದೋ ನೇಣು ಹಾಕಿಯೊ ಇನ್ನಿತರ ಸಾವಿನ ಮಾರ್ಗಗಳನ್ನು ಬಳಸಿ ಜೊತೆಯಾಗಿ ಸಾಯುತ್ತಾರೆ.. ಸತ್ತು ಜೋತೆಯಾಗಿರೋಣ ಎಂಬ ಭ್ರಮೆಯಿಂದ.. ಒಂದು ವೇಳೆ ಅಂತಹ ಘಟನೆಯಾದರೂ. ಅವರವರ ಕುಟುಂಬದವರು ಅವರ ಆತ್ಮಗಳಿಗೆ ಬೇಕಾದ ವಿಧಿವಿಧಾನಗಳನ್ನು ಮಾಡುತ್ತಾರೆ.. ನಮ್ಮ ತುಳುನಾಡಿನಲ್ಲಿ ಸತ್ತವರನ್ನು “ಪದಿನಾಜೆಗ್ ಸೇರ್ಸವುನು ” ಎಂಬ ಕ್ರಮವಿದೆ ಅಂದರೆ ಕುಟುಂಬದಲ್ಲಿ ತೀರಿ ಹೋದವರ ಜೊತೆಗೆ ಸೇರಿಸುವುದು .. ಹಾಗಾದ್ರೆ ಸತ್ತ ಮೇಲೆ ಜೊತೆಯಾಗಿ ಇರುವ ಎನ್ನುವವರು. ಜೊತೆಯಾಗಿ ಇರಲುಂಟೇ..

 

ಅದೇನೇ ಇರಲಿ .. ಇರುವ ಜೀವನ ಮಾತ್ರ ಕೋಟಿಗಳಿಂತ್ತ ಮಿಗಿಲು.. ನಾವು ಬೇರೆಯವರಿಗೇ ಮಾದರಿ ಆಗದಿದ್ದರೂ ಪರವಾಗಿಲ್ಲ. ಸಾಕಿದ ನಮ್ಮ ತಂದೆ ತಾಯಿಗೆ ಬಂದು ಬಳಗಕ್ಕೆ. ಒಳ್ಳೆಯವರಾದರೆ ಸಾಕು..

ಬದುಕಲೇ ಬಾರದು.. ಸಾಯಲೇ ಬೇಕೆಂಬ ನಿರ್ಧಾರ ಮಾಡಿದವರು. ಸಾಯುವ ಹೊತ್ತಿನಲ್ಲಿ ಉಗ್ರಗಾಮಿಗಳನ್ನೊ ದೇಶದ್ರೋಹಿಗಳನ್ನೊ ಕೊಂದು ಸತ್ತರೆ. ನಿಮ್ಮ ಸಾವಿಗೂ ಒಂದು ನ್ಯಾಯ ಇರುತ್ತದೆ. ಅದನ್ನು ಬಿಟ್ಟು ಉಪಯೋಗಕ್ಕೆ ಬಾರದ ಕೆಲಸ ಮಾಡಿ ಪ್ರಾಣ ಕಳಕೊಂಡರೆ.. ಯಾವ ನ್ಯಾಯವು ಸಿಗದು..

ಮರುಜನ್ಮ ಪುನರ್ಜನ್ಮ ಇದೆಯೋ ಇಲ್ಲವೋ.. ಆದರೆ ಇರುವ ಜೀವನ ನಿತ್ಯ ಸತ್ಯ… ಹೆಸರು ಖ್ಯಾತಿ ಗಳಿಸಲು ಇಂತಹ ಅನಾಹುತ ಮಾಡಿ ಕುಟುಂಬಿಕರು ಕಣ್ಣೀರಲ್ಲಿ ಮುಳುಗುವಂತೆ ಮಾಡಿ. ಏನು ಲಾಭ..?

ಮನೆಗೆ ಒಂದು ಕೇಜಿ ಅಕ್ಕಿ ತರಲು ಬೇಕಾಗಿ ಇಷ್ಟೆಲ್ಲ ಅಪಾಯದ ಸ್ಥಳಗಳಲ್ಲಿ ರೀಲ್ಸ್ ಫೋಟೊ ವೀಡಿಯೋಗಳನ್ನು ಮಾಡುವುದನ್ನು ಇನ್ನಾದರೂ ನಿಲ್ಲಿಸಿ.. ಜೀವದ ಮೌಲ್ಯಗಳನ್ನು ಅರಿತು ..ಬದುಕಿ ಹೆತ್ತವರು ತಲೆ ಎತ್ತುವಂತೆ ಬಾಳಿ.. ತಲೆ ತಗ್ಗಿಸಿ ಕಣ್ಣಿರು ಹಾಕುವಂತೆ ಯಾವತ್ತೂ ಮಾಡಬೇಡಿ… ಚಟಗಳು ಚಟ್ಟ ಏರುವಂತ್ತೆ ಮಾಡದಿರಲಿ..‌

Digiqole Ad

ಎಂ. ರಾಮ ಈಶ್ವರಮಂಗಲ

https://goldfactorynews.com

ಈ ಸುದ್ದಿಗಳನ್ನೂ ಓದಿ