• 7 ಸೆಪ್ಟೆಂಬರ್ 2024

ದೈವತ್ವದ ಅಪ್ಪುಗೆಯ ಅಮ್ಮ, ಅಮೃತಾನಂದಮಯಿ

 ದೈವತ್ವದ ಅಪ್ಪುಗೆಯ ಅಮ್ಮ, ಅಮೃತಾನಂದಮಯಿ
Digiqole Ad

ದೈವತ್ವದ ಅಪ್ಪುಗೆಯ ಅಮ್ಮ, ಅಮೃತಾನಂದಮಯಿ

ಕೆಲವೊಂದು ಭಕ್ತಿ ಧಾರ್ಮಿಕ ಕೇಂದ್ರಗಳಿಗೆ ಬೇಟಿ ನೀಡದಾಗ ಅಲ್ಲಿಂದ ಹೊರ ಬರಲು ಮನಸ್ಸಾಗುವುದಿಲ್ಲ.. ಯಾಕಂದ್ರೆ ಅಲ್ಲಿ ಯಾವೊದೋ ಒಂದು ಆಧ್ಯಾತ್ಮಿಕ ಶಕ್ತಿಯೊಂದು ನಮ್ಮೊಳಗೆ ಪ್ರವೇಶ ಮಾಡಿ.. ನಾವು ಅಲ್ಲೇ ಇದ್ದು ದೇವರ ಧ್ಯಾನವನ್ನು ಮಾಡುತ್ತಾ ಇರುವಂತೆ ಮಾಡಿಬಿಡುತ್ತದೆ..

ಅಂತಹುದೇ ಒಂದು ಭಕ್ತಿ ಪ್ರಧಾನವಾದ ಕೇಂದ್ರವೊಂದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಪರಯಕಡವು ಎಂಬಲ್ಲಿ. ಅಮೃತಾಪುರಿಯ ಶ್ರೀ ಮಾತಾ ಅಮೃತಾನಂದಮಯಿ ಆಶ್ರಮವಿದೆ.. ಇಲ್ಲಿ ಪ್ರತೀ ನಿತ್ಯ. “ಅಮ್ಮ “ನನ್ನು ನೋಡಲು. ರಾಜ್ಯ ಹೊರರಾಜ್ಯಗಳಿಂದ. ದೇಶ ವಿದೇಶಗಳಿಂದ ಸಾವಿರಾರು ಭಕ್ತರ ದಂಡೇ ಬರುತ್ತಿರುತ್ತದೆ…

ಇಲ್ಲಿ ಬೆಳಿಗ್ಗೆಯಿಂದಲೇ ಭಕ್ತಿ ಕಥಾ ಪ್ರವಚನಗಳು ನಡೆಯುತ್ತಾ ಸಂಜೆ ನಾಲ್ಕು ಗಂಟೆ ಹೊತ್ತಿನಿಂದ ಸತ್ಸಂಗ ಕಾರ್ಯಕ್ರಮ ಪ್ರಾರಂಭ ಆಗುತ್ತುದೆ.. ಆರು ಗಂಟೆಗೆ ವೇದಿಕೆಗೆ. ಅಮ್ಮಾ. ಅಮೃತಾನಂದಮಯಿ ಮಾತೆಯವರ ಆಗಮನವಾಗಿ ಬಂದು ಸೇರಿದ ಭಕ್ತರಿಗೆಲ್ಲ. ವೇದಿಕೆಯಿಂದಲೆ ಹರಸಿ ಭಕ್ತಿ ಶಕ್ತಿ ಯೋಗ ಧ್ಯಾನದಿಂದ. ಪರಮಾತ್ಮನನ್ನು ಹೇಗೆ ಒಲಿಸಿ ಕೊಳ್ಳುವುದು. ಹಾಗು ಕರ್ಮ ಯೋಗ ತತ್ವಗಳನ್ನು ಭೋದಿಸಿ ಅದರಿಂದ ಆಗುವ ಉಪಯೋಗದ ಬಗ್ಗೆ ಸತ್ಸಂಗ ಹರಿನಾಮ ಕೀರ್ತನೆಯ ಬಗ್ಗೆ ಮಾತೃಶ್ರಿ ಅಮ್ಮನವರು ಪ್ರವಚನ ಮಾಡಿ ನಂತರ ಭಜನಾ ಕೀರ್ತನೆಯನ್ನು ಹಾಡಿ ಆಶೀರ್ವಚನ ನೀಡಿ ಬಂದ ಭಕ್ತರನ್ನೆಲ್ಲ ತಮ್ಮ ಬಳಿಗೆ ಕರೆಸಿ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡು ಅಪ್ಪುಗೆಯ ಆಶಿರ್ವಾದ ನೀಡುತ್ತಾರೆ.. ಆ ಅಪ್ಪುಗೆಯಲ್ಲಿ ಏನೋ ಒಂದು ದೈವಿಕ ಶಕ್ತಿ ನಮ್ಮ ಶರೀರದಲ್ಲಿ ಸಂಚಾರ ಆದಂತಹ ಅನುಭವ ಆಗುತ್ತದೆ..

ಮರುದಿವಸ ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನನದ ವರೆಗೆ ಅಮ್ಮನವ ಸತ್ಸಂಗ ಕಾರ್ಯಕ್ರಮ ಇರುತ್ತದೆ.. ಅಂದು ಮಧ್ಯಾಹ್ನ ಅನ್ನ ಪ್ರಸಾದವನ್ನು ತಾವೆ ಕೈಯಾರೆ ಭಕ್ತರಿಗೆ ನೀಡುತ್ತಾರೆ.. ಸಾದಾರಣ ನೂರು ಎಕರೆ ಪ್ರದೇಶದಲ್ಲಿ ಈ ಅಮ್ಮನವರ ಭಕ್ತಿ ಕೇಂದ್ರವಿದೆ.. ವಿಶಾಲವಾದ ಸಭಾಂಗಣದಲ್ಲಿ ಈ ಸತ್ಸಂಗ ಕಾರ್ಯಕ್ರಮ ನಡೆಯುತ್ತದೆ.. ಅಲ್ಲೇ ಹತ್ತಿರ ಅಮ್ಮನವರ ಪೂರ್ವಾಶ್ರಮವು ಇದೆ..

ಅದರ ಪಕ್ಕದಲ್ಲಿ ಕಾಳಿಮಾತೆಯ ಸುಂದರವಾದ ದೇವಸ್ಥಾನವು ಇದೆ.. ಅಕ್ಕ ಪಕ್ಕದದಿ. ಧ್ಯಾನ ಯೋಗ ಮಾಡುತ್ತಿರುವ ಭಕ್ತರು.. ನಾವು ಒಮ್ಮೆ ಭೇಟಿ ಕೊಟ್ಟರೆ ನಮ್ಮನು ಅಲ್ಲೇ ದೇವರ ನಾಮ ಸ್ಮರಣೆಯನ್ನು ಮಾಡಿಕೊಂಡು ಇರುವಂತೆ ಮಾಡಿಬಿಡುವಂತಹ ಶಕ್ತಿ ಹೊಂದಿದೆ. ಈ ಪುಣ್ಯ ಕ್ಷೇತ್ರ..

ದೂರದಿಂದ ಬಂದವರಿಗೆ ಉಳಿದು ಕೊಳ್ಳಲು ಸುಸಜ್ಜಿತವಾದ. ‌ಹಲವು ಮಳಿಗೆ ಕೊಠಡಿಗಳು ಇವೆ.. ಇಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.. ಎರಡು ಮೂರು ದಿನ ಉಳಿದು ಕೊಳ್ಳುವ ಭಕ್ತರು ಅಲ್ಲಿ ಶ್ರಮದಾನದಲ್ಲಿ ಪಾಲ್ಗೊಲ್ಲಬಹುದು.. ಆಶ್ರಮದ ಒಂದು ಕಡೆ ಅರಬ್ಬಿ ಕಡಲಾದರೆ ಮತ್ತೊಂದು ಕಡೆ ನದಿಯೂ ಇದೆ.. ಪ್ರವಾಸಿಗರು ಇಲ್ಲಿಗೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ಣ್ ತುಂಬಿಕೊಳ್ಳಬಹುದು..

ಇಲ್ಲಿ ದಿನನಿತ್ಯ ಮೂರು ಹೊತ್ತು ಅನ್ನದಾನವಿದೆ.. ಬೆಳಿಗ್ಗಿನ ಚಾಹ‌ ತಿಂಡಿ ಫಲಾಹಾರವು ಆಶ್ರಮದಲ್ಲೇ ಇದೆ.. ಇಲ್ಲಿ ಅಮ್ಮನವರ ದರುಶನ ಪಡೆಯಲು ಪಾಸ್ ಮಾಡಿಕೊಳ್ಳಬೇಕು.. ಆದರಿಂದ ಬರುವ ಭಕ್ತರಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಇರಬೇಕು..

ಈ ಮಠದ ಅಮ್ಮಾ ಫೌಂಡೇಶನ್‌ನ ಅಡಿಯಲ್ಲಿ ಹಲಾವಾರು ವಿದ್ಯಾಸಂಸ್ಥೆ , ಹಾಗು ಆಸ್ಪತ್ರೆಗಳು, ವಿದ್ಯಾರ್ಥಿ ನಿಲಯಗಳು ಇವೆ.. ಹಾಗು ಸಮಾಜಮುಖಿ ಕಾರ್ಯಗಳು ಇಲ್ಲಿಂದ ನಡೆಯುತ್ತದೆ.. ಇಂತ್ತಹ ಪುಣ್ಯ ಕ್ಷೇತ್ರಕ್ಕೆ ನೀವು ಒಮ್ಮೆ. ಬೇಟಿ ನೀಡಿ “ಅಮ್ಮನ” ಅನುಗ್ರಹಕ್ಕೆ ಪಾತ್ರರಾಗಿ…

ಅಮ್ಮಾ !

ಅನೇಕರಿಗೆ ಆಶ್ಚರ್ಯವಾಗಿರಬಹುದು. ದಕ್ಷಿಣ ಭಾರತದ ಪುಟ್ಟ ಗ್ರಾಮದಲ್ಲಿ ಚಿಕ್ಕ ಬಾಲೆ ಜಗತ್ತಿನ ಅಮ್ಮ ಹೇಗಾಗಬಲ್ಲಳು? ಜಗತ್ತಿನ ಎಲ್ಲರಿಗೆ ಅಮ್ಮಳಾಗಿದ್ದು, ಅಸಾಮಾನ್ಯ ಪ್ರೀತಿಯಿಂದ, ಅನುಕಂಪ, ನಿಸ್ವಾರ್ಥ ಸೇವೆಯಿಂದಾಗಿ, ಎಲ್ಲವನ್ನು ತ್ಯಜಿಸಿ ವಾತ್ಸಲ್ಯವನ್ನು ಜಗತ್ತಿಗೆ ಧಾರೆಯರೆಯಲು ಸಿದ್ಧಳಾಗಿರುವವರೇ ಶ್ರೀ ಮಾತಾ ಅಮೃತಾನಂದಮಯಿ.

ಅಮ್ಮ ಅವರ ಜೀವನವನ್ನು ನೋಡಿದಲ್ಲಿ ಜಗತ್ತಿನ ಜನತೆಯ ಸರ್ವಾಂಗೀಣ ಸುಂದರವಾದ ಬದುಕನ್ನು ರೂಪಿಸಲು, ಎಲ್ಲರೂ ನೆಮ್ಮದಿಯಾಗಿರುವಂತೆ ಬಾಳಲು ತನ್ನನ್ನು ತಾನೇ ಸಮರ್ಪಣೆ ಮಾಡಿಕೊಂಡಿರುವುದು ಅನುಕರಣೀಯ.

ನಿರಾಶ್ರಿತರಾಗಿ ಅಮ್ಮನ ಬಳಿ ಆಶ್ರಯ ಕೇಳಿ ಬಂದಲ್ಲಿ ಅವರಿಗೆ ಸೂರು ನೀಡುವ ಮಾನವೀಯತೆ. ದುಃಖಿತರಾಗಿ ಬಂದಲ್ಲಿ ಅವರಿಗೆ ನೆಮ್ಮದಿಯನ್ನು ನೀಡಿ ಪ್ರೀತಿಯಿಂದ ಆಲಂಗಿಸುವುದರಿಂದ ಅವಳನ್ನು ಅಮ್ಮ ಎನ್ನುತ್ತೇವೆ. ಆಧ್ಯಾತ್ಮಿಕತೆಯ ಕೊರತೆಯಿಂದ ಬಂದಲ್ಲಿ ಅವರಿಗೆ ಜ್ಞಾನವನ್ನು ನೀಡುವುದರಿಂದ ಅಮ್ಮನನ್ನು ಗುರು ಎಂದು ಕರೆಯುತ್ತೇವೆ. ಈ ರೀತಿಯ ಧನಾತ್ಮಕ ಗುಣಗಳಿಂದ ನಿಸ್ವಾರ್ಥ ಮನೋಭಾವನೆಯಿಂದಾಗಿ ಇತರರನ್ನು ಗೌರವಿಸುವುದಲ್ಲದೇ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡುವುದರಿಂದ ವಿಶ್ವದ ಅಮ್ಮ ಎಂದು ಕರೆಯುತ್ತೇವೆ.

ಅಮ್ಮ ದರ್ಶನ ಮತ್ತು ಜ್ಞಾನದಿಂದ ಜಗತ್ತನ್ನು ಕತ್ತಲೆಯಿಂದ ಬೆಳೆಕಿನೆಡೆಗೆ ಸಾಗಿಸುತ್ತಿದ್ದಾರೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಭೂಮಿಯ ಗುಣ ಎಂತಹದು? ಧರ್ಮದಲ್ಲಿ ವಿಶ್ವ ಮತ್ತು ದೇವರ ಪಾತ್ರವೇನು? ಪ್ರೇಮ ಮತ್ತು ಕೌಟುಂಬಿಕ ಜೀವನ, ಅಧ್ಯಾತ್ಮ ಮತ್ತು ಜ್ಞಾನದ ತಿಳಿವಳಿಕೆ ಬಗ್ಗೆ ಅಮ್ಮ ಯೌವನದ ಹೊಸ್ತಿಲಲ್ಲಿ ಇರುವಾಗಲೇ ಎಲ್ಲ ಅನುಮಾನಗಳನ್ನು ದೂರ ಮಾಡಿದ್ದಳು.

ಅಮ್ಮ ಯಾವುದೇ ಗುರುವಿನ ಹತ್ತಿರ ಜ್ಞಾನ ಪಡೆಯಲಿಲ್ಲ ಅಥವಾ ವೇದಗಳನ್ನು ಓದಲಿಲ್ಲ. ಗ್ರಂಥ ಅಧ್ಯಯನ, ಸತ್ಯದೆಡೆಗೆ ಸಾಗುವ ವಾಸ್ತವತೆ, ಮತ್ತು ಜ್ಞಾನದಿಂದ ಸತ್ಯ ಸಂಗತಿಗಳೆಡೆಗೆ ಜಗತ್ತನ್ನು ಕರೆದೊಯ್ಯುವ ಕಾಯಕವನ್ನು ಮಾಡುತ್ತಾರೆ. ಇದಕ್ಕೆಲ್ಲಾ ಅಮ್ಮ ಅವರ ನಾಲ್ಕು ದಶಕಗಳ ಅಂದಿನ ಸರಳ ಬಾಲ್ಯದ ಮನೆ ಇಂದು ಜಗತ್ತಿನ ಲಕ್ಷಾಂತರ ಜನರಿಗೆ ಅಧ್ಯಾತ್ಮದ, ನೆಮ್ಮದಿಯ ತಾಣವಾಗಿದೆ.

ಜಗತ್ತನ್ನು ತನ್ನ ಮನೆಯಂದು ತಿಳಿದು, ಪ್ರತಿಯೊಬ್ಬರ ಮುಖದಲ್ಲಿ ಮುಗುಳ್ನಗೆ ತರಲು ಸದಾ ಸಿದ್ಧಳಾದ ಅಮ್ಮ ದರ್ಶನಕ್ಕಾಗಿ ಬಂದ ಭಕ್ತರ ಕಣ್ಣೀರನ್ನು ಒರೆಸಿ ಅವರ ದುಃಖಗಳನ್ನು ಸದಾ ತಾಳ್ಮೆಯಿಂದ ಆಲಿಸಿ ಸುಂದರವಾದ ನಗು, ನಗೆಚಟಾಕಿಗಳ ಮುಖಾಂತರ ಜಗತ್ತಿನ ಭಕ್ತ ಸಮೂಹಕ್ಕೆ ನೆಮ್ಮದಿ ನೀಡಿದ್ದಾರೆ ಅಮ್ಮ.

ಜಗತ್ತಿನ ಅನೇಕ ಭಕ್ತರು ಅಮ್ಮನವರಲ್ಲಿ ಜೀವಿತಾವಧಿಯ ಭರವಸೆ, ಆಶಾಕಿರಣ, ಗೆಳೆತನವನ್ನು ಕಾಣುತ್ತಾರೆ. ತಮ್ಮ 17ನೇ ವಯಸ್ಸಿನಿಂದ ಭಕ್ತರಿಗೆ ದರ್ಶನ ನೀಡಲು ಆರಂಭಿಸಿದ ಅಮ್ಮ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ , ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಭಕ್ತರಿಗೆ ದರ್ಶನ ನೀಡಿ ಸಾಂತ್ವನ ಒದಗಿಸುತ್ತಾರೆ.

ಅಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಭಕ್ತರಿಗೆ ಅಭಯ ಹಸ್ತ ನೀಡುವುದಲ್ಲದೇ ಭದ್ರತೆಯ ಭಾವನೆ ಮೂಡಿಸಿ, ಅವರ ಕುಂದುಕೊರತೆಗಳನ್ನು ಪ್ರೇಮದಿಂದ ಆಲಿಸಿ ಪರಿಹಾರ ಸೂಚಿಸುವುದರಿಂದ ಭಕ್ತರಿಗೆ ಪರಮಾನಂದವಾಗುತ್ತದೆ. ಭಕ್ತರ ಮನದಲ್ಲಿ ಹೊಸತೊಂದು ಆಶಾಕಿರಣ ಮೂಡುತ್ತದೆ. ಹೊಸ ಜಗತ್ತಿನಲ್ಲಿ ಬದುಕುವ ಭರವಸೆ ಮೂಡಿ ಚೈತನ್ಯ ಹೆಚ್ಚುತ್ತದೆ. ಹರೆಯದವರಾಗಲಿ, ವೃದ್ಧರಾಗಲಿ, ರೋಗಿಗಳಾಗಲಿ, ಆರೋಗ್ಯವಂತರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ ಪ್ರತಿಯೊಬ್ಬರಿಗೂ ಅದೇ ನಿರ್ಮಲ ಪ್ರೀತಿ ನೀಡಿ ಆಲಂಗಿಸಿ ಆರೈಕೆ ಮಾಡುವುದು ಅಮ್ಮ ಅವರ ಜನ್ಮಸಿದ್ಧ ಕಾಯಕವಾಗಿದೆ.

ತಲುಪುವುದು ಹೇಗೆ

AMRITAPURI MAP DIRECTION

https://goo.gl/maps/SPmqbwXTsZe7FXfT6

 

ವಾಯು ಮಾರ್ಗ:

ತ್ರೀವೆಂದ್ರಂನಿಂದ ದಕ್ಷಿಣದ ಅಮೃತಾಪುರಿ 110 ಕಿ.ಮಿ.ಗಳಿದ್ದು, ಕೊಚಿನ್‌ನಿಂದ 140 ಕಿ.ಮಿ.ದೂರದಲ್ಲಿ ವಿಮಾನ ನಿಲ್ದಾಣಗಳಿವೆ. ಅಲ್ಲಿಂದ ಟ್ಯಾಕ್ಸಿ ಮೂಲಕ ಆಶ್ರಮಕ್ಕೆ ತಲುಪಬಹುದು.

ರೈಲು ಹಾಗೂ ರಸ್ತೆ ಮಾರ್ಗ:

ಕಾಯಂಕುಳಂ ನಿಂದ 12 ಕಿ.ಮಿ. ದೂರ,ಕರುನಾಗಪಲ್ಲಿಯಿಂದ ಕೇವಲ 10 ಕಿ.ಮಿ. ದೂರದಲ್ಲಿ ಅಮೃತಾಪುರಿ ಆಶ್ರಮವಿದೆ . ನಿಯಮಿತವಾಗಿ ಆಶ್ರಮಕ್ಕೆ ಬಸ್ ಸೌಕರ್ಯವಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ