• 8 ಸೆಪ್ಟೆಂಬರ್ 2024

ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ವಿವಿಧ ಕ್ಷೇತ್ರಗಳಿಂದ ಆಯ್ದ ಅತಿಥಿಗಳಿಗೆ ವಿಶೇಷ ಆಹ್ವಾನ

Digiqole Ad

ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ವಿವಿಧ ಕ್ಷೇತ್ರಗಳಿಂದ ಆಯ್ದ ಅತಿಥಿಗಳಿಗೆ ವಿಶೇಷ ಆಹ್ವಾನ

ಯಾರಿಗೆ ಈ ವಿಶೇಷ ಆಹ್ವಾನ ಬಂದಿದೆ?

ಯಾವ ಕ್ಷೇತ್ರದ ಸಾಧಕರಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ!

ನವದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ವಿವಿಧ ಕ್ಷೇತ್ರಗಳಿಂದ ಆಯ್ದ ಅತಿಥಿಗಳನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.ಈ ವರ್ಷ ಭಾರತವು ಸ್ವಾತಂತ್ರ್ಯದ 75 ವಸಂತಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ನಿರ್ಮಿಸಲು ಸಹಾಯ ಮಾಡಿದ ಸ್ಪಂದನಶೀಲ ಗ್ರಾಮಗಳ ಸರಪಂಚರು, ಶಿಕ್ಷಕರು, ದಾದಿಯರು, ರೈತರು, ಮೀನುಗಾರರು, ಶ್ರಮಯೋಗಿಗಳು, ಅದೇ ರೀತಿ ಖಾದಿ ವಲಯದ ಕೆಲಸಗಾರರು, ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಾಲಾ ಶಿಕ್ಷಕರು, ಗಡಿ ರಸ್ತೆಗಳ ಸಂಘಟನೆಯ ಕಾರ್ಯಕರ್ತರು ಮತ್ತು ದೇಶದ ವಿವಿಧ ಭಾಗಗಳಲ್ಲಿ ಜಾರಿಗೊಳಿಸಲಾದ ಅಮೃತ್ ಸರೋವರ ಯೋಜನೆಗಳು ಮತ್ತು ಹರ್ ಘರ್ ಜಲ ಯೋಜನೆಗಳಿಗೆ ಸಹಾಯ ಮಾಡಿದ ಮತ್ತು ಕೆಲಸ ಮಾಡಿದ ಎಲ್ಲರನ್ನೂ ಈ ವರ್ಷ ನವದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ವಿಶೇಷವಾಗಿ ಆಹ್ವಾನಿಸಲಾಗಿದೆ.

ಭಾರತದ ಸುಮಾರು 1,800 ವಿಶೇಷ ಅತಿಥಿಗಳು ಈ ವರ್ಷ ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಗೆ ಆಗಮಿಸುವಂತೆ ನೀಡಲಾದ ಆಹ್ವಾನದ ಕುರಿತು ಮಾತನಾಡಿದ, ಪುಣೆ ಜಿಲ್ಲೆಯ ಬಾರಾಮತಿಯ ಧೇಕಲ್ವಾಡಿಯ ಅಶೋಕ್ ಸುದಾಮ್ ಘುಲೆ ಅವರು,ನವದೆಹಲಿಯ ಕೆಂಪು ಕೋಟೆಗೆ ಹೋಗಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಸ್ವಾತಂತ್ರ್ಯೋತ್ಸವದಂದು ಅಲ್ಲಿಗೆ ಹೋಗುವುದೆಂದರೆ ನನ್ನ ಕನಸು ನನಸಾದಂತೆ ಆಗಿದೆ ಎಂದು ಹೇಳಿದರು.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ