• 23 ನವೆಂಬರ್ 2024

ತಲೆ ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ? ಇಲ್ಲಿದೆ ಮನೆ ಮದ್ದು

 ತಲೆ ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ? ಇಲ್ಲಿದೆ ಮನೆ ಮದ್ದು
Digiqole Ad

ತಲೆ ಕೂದಲು ಉದುರುವಿಕೆಯಿಂದ ಬೇಸತ್ತಿದ್ದೀರಾ? ಇಲ್ಲಿದೆ ಮನೆ ಮದ್ದು

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಕೂಡ ಕೂದಲು ಉದುರುತ್ತಿರುವುದು ಇದು ಒಂದು ಸಮಸ್ಯೆ ಎಂದು ಹೇಳ್ಬೋದು. ಕೆಲವರಿಗಂತೂ ತುಂಬಾ ಚಿಕ್ಕ ಪ್ರಾಯದಲ್ಲಿಯೇ ತಲೆ ಕೂದಲು ಸಮಸ್ಯೆ ಕಂಡು ಬರುತ್ತದೆ. ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿರಬಹುದು . ಕೂದಲು ಉದುರುವಿಕೆಗೆ ಡಯಾಬಿಟಿಸ್, ವಿಟಮಿನ್ ಡಿ,ಪೌಷ್ಟಿಕಾಂಶದ ಕೊರತೆ ಅಥವಾ ಹೆರಿಡಿಟರಿ ಕೂಡ ಒಂದು ಕಾರಣ ಆಗಿರಬಹುದು .

ಇಂದಿನ ಕೆಟ್ಟ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಹೆಚ್ಚಿನ ಜನರಲ್ಲಿ ಕೂದಲಿನ ಸಮಸ್ಯೆಗಳು ಕಾಣಬಹುದು ಒಡೆದ ಕೂದಲು, ಕೂದಲು ಉದುರುವಿಕೆ, ಕೂದಲು ತೆಳುವಾಗುವುದು, ಒಣ ಕೂದಲು ಅಥವಾ ನಿಧಾನ ಕೂದಲು ಬೆಳವಣಿಗೆಯು ಸಹಜವಾಗಿರುತ್ತದೆ ಅಂತಹ ಎಲ್ಲಾ ಕಾಯಿಲೆಗಳಿಗೆ, ನೀವು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಬಳಸಿರಬೇಕು. ಆದರೆ ಮನುಷ್ಯನ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೈಸರ್ಗಿಕ ವಾಗಿ ಮಾಡುವ ಮನೆ ಮದ್ದುಗಳು ಯಾವುದು ಎಂದು ತಿಳಿದುಕೊಳ್ಳಬೇಕಾ ಇಲ್ಲಿದೆ ನೋಡಿ ಮಾಹಿತಿ?

ಕೂದಲು ಉದುರುವಿಕೆಗೆ ಯನ್ನು ತಡೆಗಟ್ಟಲು ಈ ಮನೆ ಮದ್ದನ್ನು ಪಾಲನೆ ಮಾಡಿ ರಾತ್ರಿ ಮಲಗುವ ಮುನ್ನ 8-10 ಕಪ್ಪು ದ್ರಾಕ್ಷಿ ಯನ್ನು ನೀರಿನಲ್ಲಿ ನೆನೆ ಹಾಕಬೇಕು . ಬೆಳಿಗ್ಗೆ ಎದ್ದ ತಕ್ಷಣ ನೀರನ್ನು ಚೆಲ್ಲಿ ಖಾಲಿ ಹೊಟ್ಟೆಯಲ್ಲಿn ನೆನೆ ಹಾಕಿದ ದ್ರಾಕ್ಷಿಯನ್ನು ತಿನ್ನಬೇಕು . ಇದನ್ನು ಮಾಡುವುದರಿಂದ ಪಿತ್ತ ನಿಯಂತ್ರಣದಲ್ಲಿ ಇರಲು ಸಹಾಯವಾಗಿ ಕೂದಲು ಉದುರುವಿಕೆ ಕಡಿಮೆ ಮಾಡಲು ನೆರವಾಗುತ್ತೆ .

ಕ್ಯಾರೆಟ್ ಜ್ಯೂಸ್ ನಿಂದ ಕೂದಲು ಉದುರುವಿಕೆ ತಡೆಗಟ್ಟ ಬಹುದು ಪ್ರತಿದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯಬೇಕು . ಇದು ಅಕಾಲಿಕ ಬಿಳಿ ಕೂದಲನ್ನು ತಡೆಯುತ್ತದೆ.

ಎಳ್ಳು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ ಮತ್ತು ಕೂದಲು ಉದುರುವಿಕೆಯ ಪ್ರಮಾಣವನ್ನು ನಿಧಾನಗೊಳಿಸುತ್ತದೆ. ಅವು ವಿಟಮಿನ್-ಬಿ ಮತ್ತು ಕಬ್ಬಿಣದ ಜೊತೆಗೆ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ, ಇದು ಕೂದಲಿಗೆ ವರದಾನವಾಗಿದೆ.

 

ಆಯುರ್ವೇದದಲ್ಲಿ ಆಮಲಕ ರಸಾಯನ ಎಂಬ ಹರ್ಬಲ್ ಜಾಮ್ ಲಭ್ಯವಿದೆ ಇದರ ರಸಾಯನವನ್ನು ನೆಲ್ಲಿಕಾಯಿ ಇಂದ ಮಾಡಲಾಗುತ್ತೆ . ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ . ಇದನ್ನು ಪ್ರತಿ ದಿನ 2-3 ಚಮಚ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಕೂದಲು ಉದುರುವಿಕೆ ಸಮಸ್ಯೆಯನ್ನು ದೂರ ಮಾಡುವುದಲ್ಲದೆ ಚರ್ಮದ ಸಮಸ್ಯೆಯನ್ನು ಸಹ ಕಡಿಮೆ ಮಾಡಬಹುದು.

ಈಗಿನ ಜನರು ತಾಜಾ ತರಕಾರಿ ಹಾಗು ಹಣ್ಣು ಗಳನ್ನು ತಿನ್ನುವುದೇ ಮರೆತಿರುವಂತೆ ಕಾಣುತ್ತೆ . ಇದು ಕೂಡ ಕೂದಲ ಉದುರುವಿಕೆಗೆ ಪ್ರಮುಖ ಕಾರಣವಾಗಬಹುದು . ಹಣ್ಣು ಮತ್ತು ತರಕಾರಿಗಳನ್ನು ತಿನ್ನಬೇಕು .

ಹೌದು. ಹಾಗಂತ ಇದಕ್ಕೆ ಸುಲಭವಾಗಿ ದೊರಕದ ಚೆರ್ರಿ ಅಥಾವ ಲೀಚಿ ಯನ್ನು ತಿನ್ನಬೇಕೆಂದೇನೂ ಇಲ್ಲ . ಹಣ್ಣುಗಳಾದ ಬಾಳೆಹಣ್ಣು , ಮಾವಿನ ಹಣ್ಣು ಅಥವಾ ಸೀಸನಲ್ ಹಣ್ಣುಗಳನ್ನು ಹೇರಳವಾಗಿ ತಿನ್ನುವುದರಿಂದ ದೇಹದಲ್ಲಿನ ಆಂಟಿ-ಆಕ್ಸಿಡೆಂಟ್ ಗುಣವು ಹೆಚ್ಚಾಗಿ ಕೂದಲ ಉದುರಿವಿಕೆಯನ್ನು ಕಡಿಮೆ ಮಾಡಿ ಕೂದಲ ಬೆಳವಣಿಗೆಗೆ ಸಹಾಯ ಆಗುತ್ತೆ .

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ