ಸಿಮ್ ವೆರಿಫಿಕೇಶನ್ ಹೊಸ ನೀತಿ ಜಾರಿ, ಥಂಬ್, ಬಯೋಮೆಟ್ರಿಕ್ KYC ಕಡ್ಡಾಯ!
ಸಿಮ್ ವೆರಿಫಿಕೇಶನ್ ಹೊಸ ನೀತಿ ಜಾರಿ, ಥಂಬ್, ಬಯೋಮೆಟ್ರಿಕ್ KYC ಕಡ್ಡಾಯ!
ಭಾರತದಲ್ಲಿ ಮೊಬೈಲ್ ಸಿಮ್ ಖರೀದಿಸುವುದು ಕಷ್ಟದ ಕೆಲಸವಲ್ಲ. ನಾಲ್ಕೈದು ಸಿಮ್ ಒಟ್ಟಿಗೆ ಖರೀದಿಸಬಹುದು. ಒಬ್ಬರಿಗೆ ಇಷ್ಟೇ ಸಿಮ್ ಖರೀದಿಸಬೇಕೆಂಬ ನಿಯಮ ಇಲ್ಲ. ಇತ್ತೀಚೆಗಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿದೆ. ಮೊಬೈಲ್ ಬಳಕೆದಾರರ ರಕ್ಷಣೆಗೆ ಅನುಕೂಲವಾಗುವಂತೆ ಟೆಲಿಕಾಂ ಸಂಪನ್ಮೂಲಗಳ ಸುರಕ್ಷಿತ ಬಳಕೆಯನ್ನು ಉತ್ತೇಜಿಸುವುದು ಮುಖ್ಯವಾಗಿದೆ.
ದೇಶದಲ್ಲಿ ಸಾಮಾಜಿಕ-ಆರ್ಥಿಕ ಚಟುವಟಿಕೆಗಳ ಹೆಚ್ಚುತ್ತಿರುವ ಡಿಜಿಟಲೀಕರಣದೊಂದಿಗೆ, ಆನ್ಲೈನ್ ಸೇವೆಗಳನ್ನು ಪಡೆಯಲು ಮೊಬೈಲ್ ಸೇವೆಗಳು ಸೇರಿದಂತೆ ಟೆಲಿಕಾಂ ಸಂಪನ್ಮೂಲಗಳ ಬಳಕೆ ಹೆಚ್ಚುತ್ತಿದೆ.ಹೀಗಾಗಿ ಕೇಂದ್ರ ಸರ್ಕಾರ ಇದೀಗ ಕಠಣ ಕೆವೈಸಿ ನೀತಿ ಜಾರಿಗೊಳಿಸಿದೆ. ಭದ್ರತೆ ಮತ್ತು ಗ್ರಾಹಕರ ರಕ್ಷಣೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹೊಸ ನೀತಿ ಜಾರಿ ಮಾಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಎರಡು ಸುಧಾರಣೆ ನೀತಿ ಜಾರಿ ಮಾಡಿದ್ದಾರೆ.
KYC ಸುಧಾರಣೆಗಳು- KYC ಎನ್ನುವುದು ಗ್ರಾಹಕರನ್ನು ಅನನ್ಯವಾಗಿ ಗುರುತಿಸುವ ಪ್ರಕ್ರಿಯೆಯಾಗಿದೆ ಮತ್ತು ಅವರಿಗೆ ಟೆಲಿಕಾಂ ಸೇವೆಗಳನ್ನು ಒದಗಿಸುವ ಮೊದಲು ಅವರ ಗುರುತು ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸುತ್ತದೆ. ಅಸ್ತಿತ್ವದಲ್ಲಿರುವ KYC ಪ್ರಕ್ರಿಯೆಯನ್ನು ಬಲಪಡಿಸುವುದು ಟೆಲಿಕಾಂ ಸೇವೆಗಳ ಚಂದಾದಾರರನ್ನು ಯಾವುದೇ ಸಂಭವನೀಯ ವಂಚನೆಗಳಿಂದ ರಕ್ಷಿಸುವ ಸಾಧನಗಳಲ್ಲಿ ಒಂದಾಗಿದೆ ಮತ್ತು ಆ ಮೂಲಕ ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸುತ್ತದೆ.