• 8 ಸೆಪ್ಟೆಂಬರ್ 2024

ಮೈಸೂರು ದಸರಾ 2023 : ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆಯಿಂದ ವಿದ್ಯುಕ್ತ ಚಾಲನೆ

Digiqole Ad

ಮೈಸೂರು ದಸರಾ 2023 : ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆಯಿಂದ ವಿದ್ಯುಕ್ತ ಚಾಲನೆ

ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಗಜಪಯಣಕ್ಕೆ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು .ಶುಕ್ರವಾರ ಬೆಳಗ್ಗೆ 9.45ರಿಂದ 10.15ರ ತುಲಾ ಲಗ್ನದಲ್ಲಿ ಮೈಸೂರು ದಸರಾ-2023ರ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾ-2023ಕ್ಕೆ ನಾಂದಿ ಹಾಡಲಾಗಿದೆ.

ಗಜಪಯಣಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ,ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತೆ ಕಂಜನ್ ಈ ಬಾರಿ ದಸಾರಗೆ ಹೊಸ ಆನೆ ಸೇರ್ಪಡೆ ನಿಶಾನೆ ಆನೆಯನ್ನ ಇನ್ನೂ ನಿರ್ಧಾರ ಮಾಡಿಲ್ಲ.ಒಂದೂವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ.ನಾಡ ಅದಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಮಾತನಾಡಿ, ಈ ಬಾರಿ ಅದ್ದೂರಿ ದಸರಾ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದ್ದೂರಿ ದಸರಾ ಆಚರಣೆಗೆ ಸಿಎಂ ಸೂಚನೆ ನೀಡಿದ್ದಾರೆ.30 ಕೋಟಿ ಅನುದಾನ ಕೊಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ.ಮೊದಲ ಹಂತದಲ್ಲಿ 9 ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿವೆ.ಇನ್ನೂ5 ಆನೆಗಳು ತದ ನಂತರ ಅರಮನೆಗೆ ಬರುತ್ತದೆ ಎಂದರು.

 

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ