ಶ್ರೀಕೃಷ್ಣ ಚರಿತೆ | ಕಥಾ ಧಾರಾವಾಹಿ.
ಶ್ರೀಕೃಷ್ಣ ಚರಿತೆ | ಕಥಾ ಧಾರಾವಾಹಿ.
ಬರೆದವರು: ಕೆ.ವೆಂಕಟರಾಮಪ್ಪ
ಭಾಗ 3
ಮಹಾವಿಷ್ಣುವಿನ ” ದಾಮೋದರ? ಎಂಬ ಹೆಸರನ್ನು ಮನಸ್ಸಿನಲ್ಲಿಟ್ಟುಕೊಂಡು ಭಾಗವತದಲ್ಲಿ ಒಂದು ಕಥೆ ಸೃಷ್ಟಿಯಾಗಿದೆ. ಒಂದು ದಿನ ಕೃಷ್ಣನು ಬಹಳವಾಗಿ ಪೀಡಿಸಿದುದರಿಂದ ಬೇಸರಗೊಂಡು ಯಶೋದ ಅವನ ಸೊಂಟಕ್ಕೆ ಹಗ್ಗ ಬಿಗಿದು ಒಂದು ಮರಕ್ಕೆ ಆ ಹಗ್ಗವನ್ನು ಕಟ್ಟಿ ದಳಂತೆ. ಮೊದಲು ಎಷ್ಟು ದೊಡ್ಡ ಹಗ್ಗವಾದರು ಕೃಷ್ಣನನ್ನು ಕಟ್ಟಲು ಸಾಲಲೇ ಇಲ್ಲ! ಕೊನೆಗೆ ದಯಾಮಯನಾದ ಲೀಲಾವತಾರ ಶ್ರೀಕೃಷ್ಣನೇ ಕನಿಕರಿಸಿ ಕಟ್ಟಿಗೊಳಗಾದನು. ಹೀಗೆ ದಾಮ (ಹಗ್ಗ) ದಿಂದ ಉದರ ( ಹೊಟ್ಟಿ ) ಕ್ಕಟ್ಟಿಸಿಕೊಂಡದ್ದರಿಂದ ಅನನಿಗೆ ದಾಮೋದರನೆಂದು ಹೆಸರಾಯಿತೆಂದು ಕಥೆ. ಆದರೆ ಮಹಾ ಭಾರತದಲ್ಲಿ “ ದಮಾದ್ದಾರನೋದ ರೋವಿದುಃ” ಎಂದು ಹೇಳಿದೆ, ದಮ್ಮ (ಇಂದ್ರಿಯನಿಗ್ರಹ) ವಿರುವುದ ರಿಂದ ದಾನೋದರ ನೆನಿಸಿದನೆಂದು ಇಲ್ಲಿನ ತಾತ್ಪರ್ಯ, “ ದಮಾದಿ ಸಾಧನ ಉದರಉತ್ಕೃಷ್ಟಾಗತಿರ್ಯಾತಯಾಗಮ್ಯ ತಿ ಇತಿ ದಾಮೋದರ ” ” ಉದರ” ಎಂದರೆ ಉತ್ಕೃಷ್ಟ ಗತಿಯೆಂದರ್ಧ, ದಮದಿಂದ ಉತ್ಕೃಷ್ಟ ಗತಿ ಯನ್ನು ಸಡೆದನನು ದಾಮೋದರ. ವೇದಕಥೆಗಳಲ್ಲಿ ವಿಷ್ಣುವು ಇಂದ್ರನಿಗಿಂತ ಕಡಿಮೆ “ಅಂತಸ್ತಿನವನು, ಆದರೆ ಅವನು ತಪಸ್ಸಿನಿಂದ ಪ್ರಾಶಸ್ತ್ರ ನನ್ನು ಹೊಂದಿದನು. ವಿಷ್ಣುವಿಗೆ ದಾನೋದರನೆಂಬ ಹೆಸರಿತ್ತು. ಆದ್ದರಿಂದ ಭಾಗವತಕಾರನು ದಾನೋದರನೆಂಬ ಹೆಸರನ್ನೇ ಆಧಾರವಾಗಿಟ್ಟುಕೊಂಡು ಈ ಕಥೆ ಕಟ್ಟರಬೇಕೆಂದು ಭಾವಿಸಿದರೆ ತಪ್ಪಾಗಲಾರದು.
ಇದರಂತೆಯೇ “ಉಪೇಂದ್ರ? ಎಂಬ ಇನ್ನೊಂದು ಹೆಸರಿಗೆ ತಕ್ಕಂತೆ ಒಂದು ಕಥೆಯನ್ನು ಕಲ್ಪಿಸಲಾಗಿದೆ. “ಉಪೇಂದ್ರ? ಎಂಬುದು ಮಹಾ ವಿಷ್ಣುವಿನ ಹೆಸರುಗಳಲ್ಲೊಂದು, ಉಸೇಂದ್ರನೆಂದರೆ ಇಂದ್ರನಿಗಿಂತ ಚಿಕ್ಕವನು ಅಥವಾ ಚಿಕ್ಕ ಇಂದ್ರನೆಂದು ಅರ್ಥವಾಗಬೇಕು. ನೇದ ಯುಗ ದಲ್ಲಿ ವಿಷ್ಣುವು ಇಂದ್ರನಿಗಿಂತ ಚಿಕ್ಕವನೇ ಸರಿ. ವಿಷ್ಣು ಕೃಷ್ಣರು ಒಂದಾದ ಮೇಲೆ ಅವನ “ಉಪೇಂದ್ರ? ತ್ವವು ಕೃಷ್ಣನಿಗೂ ಬರಬೇಕಾಯಿತು. ಆದರೆ ಕೃಷ್ಣನೇ ಸರಣಿ ದೈವವೆಂದು ನಂಬಿದ ಭಕ್ತರು ಈ ಮಾತನ್ನು ಒಪ್ಪಲು ಸಾಧ್ಯವಲ್ಲ. ಆದ್ದರಿಂದ “”ಇಂದ್ರಾದುಸರಿ ಉಪೇಂದ್ರಃ” ಎಂದು ಒಂದು ವಿಚಿತ್ರವಾದ ವ್ಯಕ್ತಿಯನ್ನು ಕಲ್ಪಿಸಬೇಕಾಯಿತು. ಕೃಷ್ಣನು ಇಂದ್ರನನ್ನು ಸೋಲಿಸಿದಾಗ ಅವನಿಗೆ “ಉಪೇಂದ್ರ? ನೆಂಬ ಹೆಸರು ಬಂದಿತೆಂದು ಹೇಳಿರು.
ಇದರಿಂದ ಈ ವ್ಯತ್ಪತ್ತಿಗೆ ಬಲಸಿಕ್ಕಿದಂತಾಯಿತು. ನಂದಾದಿಗೋಪಾಲಕರು ಮಾಡುತ್ತಿದ್ದ ಇಂದ್ರಯಜ್ಞವನ್ನು ಕೃಷ್ಣನು ನಿಲ್ಲಿಸಿದ್ದರಿಂದ ಸಿಟ್ಟು ಗೊಂಡು ಇಂದ್ರನು ಬಹಳ ಬಿರುಸಾದ ಮಳೆ ಸುರಿ ಸಲು ಗೋವರ್ಧನ ಪರ್ವತವನ್ನೇ ಕೊಡೆಯಂತೆ ಎತ್ತಿಹಿಡಿದು ಕೃಷ್ಣನು ಇಂದ್ರನ ಅಹಂಕಾರ ವನ್ನು ಮುರಿದನೆಂದೂ ಕಡೆಗೆ ಇಂದ್ರನೇ ಶರಣಾಗತನಾದನೆಂದೂ ಶರಣಾ ಗತವತ್ಸಲನಾದ ಕೃಷ್ಣನು ಅಂದಿನಿಂದ “ಉಪೇಂದ್ರ? ಎಂಬ ಹೆಸರಿಟ್ಟು ಕೊಂಡನೆಂದೂ ಕಥೆ.
ಗೋಕುಲದ ಕೃಷ್ಣನ ಪರಾಕ್ರಮದ ಕಥೆಗಳನ್ನು ಕೇಳಿದ ಕಂಸನು ಗಾಬರಿಗೊಂಡು ಹೇಗಾದರೂ ಮಾಡಿ ಕೃಷ್ಣನನ್ನು ಕೊಲ್ಲಿಸಬೇಕೆಂಬ ಸಂಕಲ್ಪದಿಂದ ಅವನನ್ನು ಮಧುರೆಗೆ ಕರೆತರಲು ಅಕ್ರೂರನನ್ನು ಕಳುಹಿಸಿ ದನು. ಬಿಲ್ಲ ಹಬ್ಬಕ್ಕೆ ಬರಬೇಕೆಂದು ಕಂಸನು ಭಕ್ತಶಿರೋಮಣಿಯಾದ ಅಕ್ರೂರನ ಮೂಲಕ ಕಳುಹಿಸಿದ ಆಹ್ವಾನವನ್ನು ಅಂಗೀಕರಿಸಿ ಕೃಷ್ಣ ಬಲರಾಮರು ಗೋವಾಲಕರೊಡನೆ ಮಧುರೆಗೆ ಬಂದು ಅವರಿಗಾಗಿ ಮಧುಕೆ ಯಲ್ಲಿ ಸಿದ್ದವಾಗಿ ಕಾದಿದ್ದ ” ಫುವಲಯಾ ಪೀಡ’ ಎಂಬ ಆನೆ, ಚಾಣೂರ ಮತ್ತು ಮುಷ್ಟಿ ಕ ಮೊದಲಾದ ಜಟ್ಟಿಗಳು ಮುಂತಾದವರೆಲ್ಲರನ್ನೂ ಲೀಲಾ ಜಾಲವಾಗಿ ಕೊಂದು ಕಡೆಗೆ ಇಷ್ಟೆಲ್ಲ ಅನರ್ಧಗಳಿಗೆ ಕಾರಣನಾದ ಕಂಸ ನನ್ನೂ ವಧಿಸಿ ಅವನ ತಂದೆ ಉಗ್ರಸೇನನಿಗೆ ರಾಜ್ಯವನ್ನು ಕೊಡಿಸಿದರು.
ಅಂದಿನಿಂದ ಯಾದವರ ಗುಂಪಿನಲ್ಲಿ ಶ್ರೀಕೃಷ್ಣನಿಗೆ ಬಹಳ ಗಣ್ಯತೆ ಉಂಟಾಯಿತು. ಅನನು ಮಧುರೆಯಲ್ಲಿಯೇ ಇದ್ದು ಶತ್ರುಗಳಿಂದ ಆ ನಗರಕ್ಕೆ ಹಲವು ಬಾರಿ ಒದಗಿದ ವಿಪತ್ತುಗಳನ್ನು ನಿವಾರಿಸಿದನು. ಶತ್ರು ಪಕ್ಷವು ಬಹಳ ಬಲಯುತನಾಗಲು ಕೃಷ್ಣನು ತನ್ನವರಾದ ಯಾದವರನ್ನು ಜತೆಯಲ್ಲಿ ಕರೆದುಕೊಂಡು ಪಶ್ಚಿಮ ಸಾಗರದ ಕಡೆ ಓಡಿಹೋಗಿ ಅಲ್ಲಿ ದ್ವಾರಕಾಪಟ್ಟಣವನ್ನು ಕಟ್ಟಿದನು. ಅದೇ ಯಾದವರ ಹೊಸ ರಾಜಧಾನಿಯಾಯಿತು. (ಮುಂದುವರೆಯುವುದು…)